ನಿಸ್ವಾರ್ಥ ಬದುಕಿಗೆ ಬಲಿಯಾದ ಭೀಷ್ಮ


Team Udayavani, Dec 31, 2019, 4:51 AM IST

ve-11

ಕಷ್ಟಗಳನ್ನೆಲ್ಲ ನಾವು ಕಷ್ಟಗಳೆಂದು ಭಾವಿಸುವುದಾದರೆ, ನಮಗೇ ಯಾಕೆ ಹೀಗಾಗುತ್ತದೆ ಎಂದು ಹಳಿದುಕೊಳ್ಳುವುದಾದರೆ, ಭೀಷ್ಮನ ಬದುಕನ್ನು ಒಮ್ಮೆ ನೋಡಬೇಕು. ಗಂಗೆ ಹೇಳುವ ಕಥೆಯ ಪ್ರಕಾರ, ಆತ ಅಷ್ಟವಸುಗಳಲ್ಲಿ ಕೊನೆಯವನು, ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಬೇಕಾಗುತ್ತದೆ. ಆದರೆ ಉಳಿದ ವಸುಗಳಂತೆ ತಕ್ಷಣವೇ ಹಿಂತಿರುಗುವ ಅವಕಾಶವಿರುವುದಿಲ್ಲ. ದೀರ್ಘ‌ವಾಗಿ ಭೂಮಿಯಲ್ಲಿ ಬದುಕಬೇಕಾಗುವುದೇ ಅವನಿಗಿರುವ ಶಾಪ. ಹಾಗೆ ಶಾಪ ಹೊಂದಿ ಭೂಮಿಯಲ್ಲಿ ಬದುಕುವ ಆತ, ಆದರ್ಶದ ಪರಮೋಚ್ಚ ಆದರ್ಶದಂತೆ ಬದುಕುತ್ತಾನೆ. ತನ್ನ ನಂಬಿಕೆ, ಪ್ರತಿಜ್ಞೆಗಳೊಂದಿಗೆ ಎಲ್ಲೂ ರಾಜಿಯೇ ಆಗುವುದಿಲ್ಲ. ಅವನ ಬದುಕಿನಲ್ಲಿ ಮಾಡಿದ ಬಹುದೊಡ್ಡ ತಪ್ಪೆಂದರೆ, ದುರ್ಯೋಧನನನ್ನು ವಿರೋಧಿಸದೇ ಹೋಗಿದ್ದು. ಅವನು ಸಾಮ್ರಾಟ, ಅವನಿಗೆ ನಿಷ್ಠನಾಗಿರಬೇಕು, ಎದುರಾಡಬಾರದು ಎಂಬ ಅವಾಸ್ತವಿಕ ಆದರ್ಶವೊಂದೇ, ಅವನನ್ನು ಪ್ರಶ್ನಾರ್ಹನನ್ನಾಗಿ ಮಾಡಿದ್ದು!

ಅವನ ಬದುಕನ್ನು ನೋಡಿ, ಹುಟ್ಟಿದ್ದೇ ಶಾಪಗ್ರಸ್ತನಾಗಿ. ಅತಿಕಿರಿಯ ವಯಸ್ಸಿನಲ್ಲೇ ತಂದೆಗಾಗಿ ಸಿಂಹಾಸನವನ್ನು ತ್ಯಜಿಸುವ ಅನಿವಾರ್ಯತೆ. ಅಷ್ಟೂ ಸಾಲದೆಂಬಂತೆ ಜೀವನಪರ್ಯಂತ ಮದುವೆಯೇ ಆಗುವುದಿಲ್ಲ, ಅದೂ ತಂದೆಗಾಗಿ ಎಂಬ ಪ್ರತಿಜ್ಞೆ. ಒಬ್ಬ ತಮ್ಮ ಯುದ್ಧದಲ್ಲಿ ಸತ್ತರೆ, ಇನ್ನೊಬ್ಬ ಕಾಯಿಲೆಯಿಂದ ಸತ್ತ. ಕಾಯಿಲೆಯಿಂದ ಸತ್ತ ತಮ್ಮ ವಿಚಿತ್ರವೀರ್ಯನಿಗೆ ಮದುವೆ ಮಾಡಲು ಹೊರಟು ಶತೃವನ್ನು ಸೃಷ್ಟಿಸಿಕೊಳ್ಳುತ್ತಾನೆ. ಕಾಶೀರಾಜನ ಪುತ್ರಿ ಅಂಬೆ, ಭೀಷ್ಮನಿಂದಾಗಿ ತನ್ನ ಜೀವನವೇ ಹಾಳಾಗಿ ಹೋಯಿತು. ಅವನ ನಾಶವೇ ತನ್ನ ಗುರಿ ಎಂದು ತಪಸ್ಸು ಮಾಡುತ್ತಾಳೆ. ಅದರಲ್ಲಿ ಯಶಸ್ಸನ್ನೂ ಸಾಧಿಸುತ್ತಾಳೆ. ಆದರೆ ಇಲ್ಲಿ ಭೀಷ್ಮನ ಸ್ವಾರ್ಥವೇನಿರುವುದಿಲ್ಲ. ಅವನು ಮಾನವೀಯತೆಯನ್ನು ಮರೆತು ಕ್ಷತ್ರಿಯಧರ್ಮವನ್ನು ಪಾಲಿಸಿದ್ದು, ಅದೂ ತಮ್ಮನಿಗಾಗಿ…ಅದೊಂದೇ ತಪ್ಪಾಗಿದ್ದು. ಅಂಬೆಯೂ ಪರಿಸ್ಥಿತಿಗೆ ಸಿಲುಕಿ ಹತಭಾಗ್ಯಳಾಗುತ್ತಾಳೆ!

ಜೀವನಪರ್ಯಂತ ತನ್ನದಲ್ಲದ ತಪ್ಪಿಗೆ ಬೆಲೆ ತೆರುತ್ತ, ಹೋಗುತ್ತಾನೆ. ಅದು ಹೇಗಾಗುತ್ತದೆ ಎಂದರೆ, ಏನೋ ಮಾಡಲು ಹೋಗಿ, ಇನ್ನೇನೋ ಮಾಡಲೇಬೇಕಾದ ಸಂದಿಗ್ಧ. ತಮ್ಮ ವಿಚಿತ್ರವೀರ್ಯ ಸತ್ತ ನಂತರ, ಭೀಷ್ಮನೆ ಮದುವೆ ಮಾಡಿಸಿದ ಅಂಬೆಯ ಸಹೋದರಿಯರಾದ ಅಂಬಿಕೆ, ಅಂಬಾಲಿಕೆಯರೂ ಚಿಕ್ಕ ವಯಸ್ಸಿನಲ್ಲೇ ವಿಧವೆಯರಾಗುತ್ತಾರೆ. ಅಲ್ಲಿಗೆ ಮೂವರು ಸಹೋದರಿಯರ ಪಾಲಿಗೆ ಭೀಷ್ಮ ಪರೋಕ್ಷವಾಗಿ ಶತೃ. ಅಂಬೆ ನೇರವಾಗಿ ವಿರೋಧಿಸಿದರೆ, ಉಳಿದಿಬ್ಬರು ಮೌನವಾಗಿ ಹಿಡಿಶಾಪ ಹಾಕಿದ್ದರೆ, ಸುಳ್ಳೆನ್ನಲಾದೀತೇ?

ಈ ಶಾಪ ಹಾಕುವುದನ್ನು ಅಸಂಭವ ಎನ್ನಲಾಗುವುದಿಲ್ಲ. ಕಾರಣವಿಷ್ಟೇ: ಈ ಮೂವರು ಸಹೋದರಿಯರು ಕುರುವಂಶದ ಕುಡಿಗಳನ್ನು ವಿವಾಹವಾಗಲು ತೀರ್ಮಾನಿಸಿರುವುದಿಲ್ಲ. ಅವರ ತಂದೆ, ಕುರುಕುಲಕ್ಕೆ ಮದುವೆ ಮಾಡಿಕೊಡುವ ಪದ್ಧತಿ ಮುರಿದು ಸ್ವಯಂವರ ಏರ್ಪಡಿಸಿರುತ್ತಾನೆ. ತಾವು ಇಷ್ಟಪಟ್ಟವರನ್ನು ಆಯ್ದುಕೊಳ್ಳುವುದು ಅವರಿಗಿದ್ದ ಸ್ವಾತಂತ್ರ್ಯ. ಆದರೆ ಅವಮಾನಿತನಾಗುವ ಭೀಷ್ಮ, ಇದು ನೇರವಾಗಿ ತನಗೇ ಮಾಡಿದ ಅಪಮಾನ ಎಂದು ಆ ಸ್ವಾತಂತ್ರ್ಯವನ್ನು ಹರಣ ಮಾಡುತ್ತಾನೆ. ಅಂದರೆ ಆ ಮೂವರು ಸಹೋದರಿಯನ್ನು ಹೊತ್ತುಕೊಂಡು ಬರುತ್ತಾನೆ. ಹಾಗೆ ಹೊತ್ತುತಂದ ಯುವತಿಯರಿಗೆ ವಿಧಿಯಿಂದ ಸಿಕ್ಕಿದ ಕೊಡುಗೆ ವಿಧವೆಯರ ಪಟ್ಟ! ಅದೂ ಮದುವೆಯಾದ ಕೆಲವೇ ವರ್ಷಗಳಲ್ಲಿ, ಅತಿ ಚಿಕ್ಕ ವಯಸ್ಸಿನಲ್ಲಿ. ಯಾರಿಗೆ ಸಿಟ್ಟು ಬರುವುದಿಲ್ಲ ಹೇಳಿ?

ತಾವು ಬಯಸದೇ ಇದ್ದ ಭಾಗ್ಯವನ್ನೇನೋ ಭೀಷ್ಮ ನೀಡಿದ, ಅದರಿಂದಾದ ಸಾರ್ಥಕ್ಯವೇನು? ಹೀಗೆ ನೋಡಿದರೆ, ಮೂವರ ಸಹೋದರಿಯರ ಬದುಕು ಭೀಷ್ಮನ ಈ ಕೃತ್ಯದಿಂದ ಬರ್ಭರವಾಗುತ್ತದೆ. ಈಗ ಹೇಳಿ, ಇದರಿಂದ ಭೀಷ್ಮನಿಗೆ ವ್ಯಸನವಾಗಿರುವುದಿಲ್ಲವೇ? ತನ್ನಿಂದ ಆ ಹೆಣ್ಣುಮಕ್ಕಳು ನೊಂದು ಬೇಯುತ್ತಿರುತ್ತಾರೆ ಅನ್ನುವುದು ಗೊತ್ತಿರುವುದಿಲ್ಲವೇ? ಅಷ್ಟಲ್ಲದೇ ತಮ್ಮಕ್ಕ ಭೀಷ್ಮನಿಂದಲೇ ಘೋರಸ್ಥಿತಿಗೆ ತಳ್ಳಲ್ಪಟ್ಟಿದ್ದು ಎಂಬ ಸಂಗತಿ ಅವರನ್ನು ಕಾಡುತ್ತಿರುವುದಿಲ್ಲವೇ? ಇದು ಒಳಗೊಳಗೆ ಒಂದು ಜ್ವಾಲಾಮುಖೀಯನ್ನು ಸೃಷ್ಟಿ ಮಾಡಿರುವುದಿಲ್ಲವೇ? ಇಂತಹದೊಂದು ಕುದಿ, ಬೇಗುದಿ ಬಲಿ ತೆಗೆದುಕೊಂಡರೆ, ಅದು ಭೀಷ್ಮನನ್ನೇ ತಾನೇ?

-ನಿರೂಪ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.