ಸಸಿಹಿತ್ಲು ಬೀಚ್‌ನಲ್ಲಿ ಈಜಾಡಲು ಬಂದ ಬೆಂಗಳೂರು ಮೂಲದ ಯುವಕರು: ಒರ್ವ ಮೃತ, ಇಬ್ಬರ ರಕ್ಷಣೆ
Team Udayavani, Dec 30, 2019, 8:02 PM IST
ಸಸಿಹಿತ್ಲು : ಬೆಂಗಳೂರು ಮೂಲದ ಮೂರು ಮಂದಿ ಯುವಕರು ಸಸಿಹಿತ್ಲು ಬೀಚ್‌ನಲ್ಲಿ ಈಜಾಡಲು ತೆರಳಿ, ಕಡಲ ಸೆಳೆತಕ್ಕೊಳಗಾಗಿದ್ದರಿಂದ ಒರ್ವನು ಮೃತಪಟ್ಟು ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಬೆಂಗಳೂರಿನ ಜೆ.ಪಿ.ನಗರದ ದಿ.ನೀಲಕಂಠ ಅವರ ಪುತ್ರ ಸಾತ್ವಿಕ್ (28) ಎಂದು ಗುರುತಿಸಲಾಗಿದೆ. ರಕ್ಷಣೆಗೊಳಗಾದವರನ್ನು ಬೆಂಗಳೂರಿನ ನಾಗರಬಾವಿ ನಿವಾಸಿ ಮಂಜುನಾಥ ಅವರ ಪುತ್ರ ಶ್ರೀಕಾಂತ್ (27) ಹಾಗೂ ಜೆ.ಪಿ.ನಗರದ ರಾಮಯ್ಯರ ಪುತ್ರ ಭರತ್ (28) ಎಂದು ತಿಳಿದು ಬಂದಿದೆ.
ಮೂವರೂ ಸಹ ಇಂಜಿನಿಯರಿಂಗ್ ಮುಗಿಸಿಕೊಂಡು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಡಿಸೆಂಬರ್ 28ರಂದು ಬೆಂಗಳೂರಿನಿಂದ ತಮ್ಮ ಕಾರಿನಲ್ಲಿ ಹೊರಟ ಇವರು ಕೊಲ್ಲೂರು, ಹೊನ್ನಾವರ, ಉಡುಪಿ ಮಠಕ್ಕೆ ಭೇಟಿ ನೀಡಿ ಸೋಮವಾರ ಸಂಜೆ 5 ಕ್ಕೆ ಸಸಿಹಿತ್ಲುವಿನ ಬೀಚ್ ಬಳಿಗೆ ಬಂದಿದ್ದಾರೆ.
ಹೆಜಮಾಡಿ ಕೋಡಿಯ ಮೀನುಗಾರರಾದ ಯಶ್‌ಪಾಲ್, ರಾಕೇಶ್ ಅವರ ತಂಡವು ದೋಣಿಯಲ್ಲಿ ಮೀನು ಹಿಡಿಯುತ್ತಿದ್ದಾಗ ಯುವಕರ ಬೊಬ್ಬೆ ಕೇಳಿ ತಕ್ಷಣಕ್ಕೆ ರಕ್ಷಣೆಗೆ ಮುಂದಾದರೂ ಸಹ ಸಾತ್ವಿಕ್‌ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, ಕೊನೆಗೂ ಆತನ ಮೃತ ದೇಹವನ್ನು ಮೇಲೆತ್ತಿದ್ದು, ರಕ್ಷಣೆಗೊಳಗಾದ ಶ್ರೀಕಾಂತ್ ಮತ್ತು ಭರತ್‌ನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.