ನಿಡಿಗಲ್ ನೂತನ ಸೇತುವೆಗೆ ಅಂತಿಮ ಸ್ಪರ್ಶ
ತಪ್ಪಲಿದೆ ಟ್ರಾಫಿಕ್ ಕಿರಿಕಿರಿ; 15 ಕೋ. ರೂ. ವೆಚ್ಚದಲ್ಲಿ ನಿರ್ಮಾಣ
Team Udayavani, Dec 31, 2019, 5:35 AM IST
ಉದ್ಘಾಟನೆಗೆ ಸಜ್ಜುಗೊಂಡಿರುವ ನಿಡಿಗಲ್ ಸೇತುವೆ.
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಚಿಕ್ಕಮಗಳೂರು 73ರ ನಿಡಿಗಲ್‌ನಲ್ಲಿ ನೇತ್ರಾವತಿ ನದಿಗೆ 15 ಕೋ. ರೂ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಹಳೆಯ ಸೇತುವೆಗೆ ಮುಕ್ತಿ ದೊರೆಯಲಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ಇರುವ ನಿಡಿಗಲ್ ಬಳಿ 1938ರ ಜೂ. 9ರಂದು ಬ್ರಿಟಿಷರ ಕಾಲದಲ್ಲಿ ಸೇತುವೆ ನಿರ್ಮಾಣವಾಗಿತ್ತು. ಈ ಸೇತುವೆ 81 ವರ್ಷಗಳವರೆಗೂ ಲಕ್ಷಾಂತರ ವಾಹನಗಳ ಸಂಚಾರ ಸೇತುವಾಗಿತ್ತು. 10 ವರ್ಷಗಳಿಂದಲೂ ನೂತನ ಸೇತುವೆಗೆ ಮನವಿ ಸಲ್ಲಿಸುತ್ತ ಬಂದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ.
ಬಿ.ಸಿ. ರೋಡ್-ಕಡೂರು ರಸ್ತೆಯ ರಾ.ಹೆ.-234 ಆಗಿ ಮೇಲ್ದರ್ಜೆಗೇರಿದ ಬಳಿಕ ಮೊದಲ ಅನುದಾನದಲ್ಲಿ ಬಿ.ಸಿ. ರೋಡ್ -ಚಾರ್ಮಾಡಿ ಮಧ್ಯೆ ಬೆಳ್ತಂಗಡಿ ತಾ| ನಿಡಿಗಲ್, ಚಾರ್ಮಾಡಿ ಹಳ್ಳ, ಬಂಟ್ವಾಳ ತಾ| ಮಣಿಹಳ್ಳದಲ್ಲಿ ಹಳೆ ಸೇತುವೆಗಳಲ್ಲಿ ಎರಡು ಬದಿ ಘನ ವಾಹನ ಓಡಾಟಕ್ಕೆ ಸಾಧ್ಯವಾಗದ ಹಿನ್ನೆಲೆ 3 ನೂತನ ಸೇತುವೆಗಳಿಗೆ ಒಟ್ಟು 28 ಕೋ. ರೂ. ಅನುದಾನ ಮಂಜೂರಾಗಿತ್ತು.
ಕಳೆದ ವರ್ಷ ಚಾರ್ಮಾಡಿ ಮಣಿ ಹಳ್ಳದಲ್ಲಿ ಸೇತುವೆ ಸಂಪರ್ಕ ರಸ್ತೆ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ. ನಿಡಿಗಲ್ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣಗೊಂಡು ಹೊಸ ಸೇತುವೆ ಕಾಮಗಾರಿಯೂ ಸಂಪೂರ್ಣಗೊಂಡಿದೆ. ಇನ್ನೇನು ಉದ್ಘಾಟನೆಯಷ್ಟೇ ಬಾಕಿ ಉಳಿದಿದೆ.
140 ಮೀ. ಉದ್ದ, -16 ಮೀ. ಅಗಲ
ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಕೇಂದ್ರ ಸರಕಾರ 15 ಕೋ. ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿತ್ತು. ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು 140 ಮೀ. ಉದ್ದಕ್ಕೆ ನಿರ್ಮಾಣಗೊಂಡಿದೆ. 16 ಮೀ. ಅಗಲವನ್ನು ಹೊಂದಿದ್ದು, ಪಾದಚಾರಿಗಳಿಗೆ ವಾಹನ ಢಿಕ್ಕಿ ಸಂಭವಿಸುವುದನ್ನು ತಪ್ಪಿಸಲು ವೈಜ್ಞಾನಿಕ ರೀತಿ ತಡೆಗೋಡೆ ಹೊಂದಿರುವ ಫುಟ್‌ಪಾತ್ ನಿರ್ಮಿಸಲಾಗಿದೆ.
ಬೇಡಿಕೆಗೆ ಕೊನೆಗೂ ಫಲ
ಬೆಂಗಳೂರು- ಚಿಕ್ಕಮಗಳೂರು ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ, ಶ್ರೀಕ್ಷೇತ್ರ ಕಟೀಲು, ಸುಬ್ರಹ್ಮಣ್ಯ ಮುಂತಾದ ಪವಿತ್ರ ಕ್ಷೇತ್ರಗಳಿಗೆ ಬರುವ ಭಕ್ತರ ಪ್ರಯಾಣಕ್ಕೆ ಇದೇ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಘನ ವಾಹನ ಸಾಗಾಟ ಸಂದರ್ಭ ಸೇತುವೆ ಸಾಮರ್ಥಯದ ಅಪಾಯ ಎದುರಾಗಿತ್ತು. ಕಿರಿದಾದ ಸೇತುವೆಯಿಂದಾಗಿ ಪ್ರಯಾಣಕ್ಕೆ ಹರಸಾಹಸ ಪಡುವಂತಿತ್ತು. ಸೇತುವೆ ಮೇಲೆ ಗುಂಡಿ ಬಿದ್ದಿರುವುದರಿಂದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ವಾಹನಗಳು ತಾಸುಗಟ್ಟಲೆ ಸರತಿ ಸಾಲು ನಿಲ್ಲುವಂತಹ ಸ್ಥಿತಿ ಇತ್ತು. ಈ ಬಾರಿ ಆ. 9ರಂದು ಬಂದ ಪ್ರವಾಹಕ್ಕೆ ಸೇತುವೆ ಕೊಚ್ಚಿಹೋಗುವ ಮಟ್ಟಕ್ಕೆ ನೀರು ಏರಿತ್ತು. ಸೇತುವೆ ನಿರ್ಮಾಣದ ಬೇಡಿಕೆಯಿಟ್ಟು ಉದಯವಾಣಿ 2011ರಿಂದಲೇ ಹಲವು ಬಾರಿ ವರದಿ ಪ್ರಕಟಿಸಿತ್ತು. ಕಡೆಗೂ ಸೇತುವೆ ನಿರ್ಮಾಣ ಪೂರ್ಣಗೊಂಡಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ.
ಶೀಘ್ರವೇ ಸಂಚಾರಕ್ಕೆ ಮುಕ್ತ
ನಿಡಿಗಲ್ ಸೇತುವೆ ಕಾಮಗಾರಿ ಬಹುತೇಕ ಅಂತಿಮಗೊಂಡಿದೆ. ಚಾರ್ಮಾಡಿ ಹಳ್ಳ ಸೇತುವೆಯಲ್ಲಿ ಈಗಾಗಲೇ ವಾಹನ ಸಂಚಾರ ಆರಂಭಗೊಂಡಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯು ವಿಸ್ತರಣೆಗಾಗಿ ಸರ್ವೇ ಮಾಡುತ್ತಿದ್ದು, ವರದಿಯನ್ನು ಸರಕಾರಕ್ಕೆ ನೀಡಲಾಗುವುದು. ಶೀಘ್ರದಲ್ಲೇ ನಿಡಿಗಲ್ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. - ಸುಬ್ಬರಾಮ ಹೊಳ್ಳ, ಕಾರ್ಯಪಾಲಕ ಅಭಿಯಂತರು, ರಾ.ಹೆ. ಪ್ರಾಧಿಕಾರ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.