2019ರ ನೆನಪಿನ ಹೆಜ್ಜೆಯೊಂದಿಗೆ 2020ರ ಹೊಸ ನಿರೀಕ್ಷೆಯತ್ತ ಪಯಣ


Team Udayavani, Dec 30, 2019, 11:37 PM IST

ve-32

ಫ‌ಲ್ಗುಣಿಯಲ್ಲಿ ಜರಗಿದ್ದ ನದಿ ಉತ್ಸವ.

 2020 ಸ್ವಾಗತಕ್ಕೆ ಕ್ಷಣಗಣನೆ, ಸಿದ್ಧತೆ
ಅಭಿವೃದ್ಧಿಯ ಆಶಾಭಾವ
ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ

ಮಹಾನಗರ: ಹೊಸ ಯೋಜನೆಯ ಕನಸುಗಳೊಂದಿಗೆ ಆರಂಭವಾದ “2019′ ಮಂಗಳೂರಿಗೆ ಒಂದಿಷ್ಟು ಹೊಸತನ-ಅಭಿರುಚಿಯನ್ನು ನೀಡಿದರೂ ಮತ್ತೂಂದಿಷ್ಟು ವಿವಾದಗಳನ್ನು ಎಳೆದು ಸುದ್ದಿಯಾಗಿದ್ದು; ಇದೀಗ ವರ್ಷದ ಕೊನೆಯ ದಿನದಲ್ಲಿ ನಾವಿದ್ದೇವೆ. ಲವಲವಿಕೆಯಿಂದ ಹೊಸ ವರ್ಷ ಆಮಂತ್ರಿಸುವ ಸಡಗರಕ್ಕೆ ಮಂಗಳೂರು ಸದ್ಯ ಸಜ್ಜಾಗುತ್ತಿದ್ದು, ಅಭಿವೃದ್ಧಿಯ ಆಶಾಭಾವದೊಂದಿಗೆ ಮುನ್ನಡೆಯುವ ಕಾತುರದಲ್ಲಿದೆ.

ಬಹುನಿರೀಕ್ಷೆಯೊಂದಿಗೆ ಆರಂಭವಾದ 2019 ಮಂಗಳೂರಿನ ಪಾಲಿಗೆ ಮಿಶ್ರಫಲಗಳನ್ನು ನೀಡಿದೆ. ವರ್ಷದ ಮಧ್ಯಭಾಗದಲ್ಲಿ ಮಳೆಯ ಅನಾಹುತಕ್ಕೆ ನಗರದ ಬಹುತೇಕ ಭಾಗದಲ್ಲಿ ಜನರು ಸಮಸ್ಯೆ ಅನುಭವಿಸಿದರೆ; ವಿವಿಧ ಯೋಜನೆಯ ಹಲವು ಕಾಮಗಾರಿಗಳು ಯಾವಾಗ ಮುಗಿಯುತ್ತದೆಯೋ? ಎಂಬ ಭಾವದಲ್ಲಿಯೇ ವರ್ಷ ಪೂರ್ಣ ಗೊಳಿಸುವಂತಾಗಿದೆ. ಅಂತೂ; 2019ರ ಕಹಿಯ ಘಟನೆಗಳನ್ನು ಮರೆತು ಖುಷಿ ಯೊಂದಿಗೆ 2020ರ ಪ್ರವೇಶಕ್ಕೆ ಸಿದ್ಧತೆ ನಡೆಸಲಾಗಿದೆ.

ಈ ವರ್ಷದ ಪ್ರಮುಖ ವಿಚಾರಗಳನ್ನು ನೆನಪಿಸುವುದಾದರೆ; ಲೋಕಸಭಾ ಚುನಾವಣೆ ಹಾಗೂ ಮಂಗಳೂರು ಪಾಲಿಕೆ ಚುನಾವಣೆ ಈ ವರ್ಷದ ಮಹತ್ವದ ಬೆಳವಣಿಗೆ. ಎಪ್ರಿಲ್‌ ಹಾಗೂ ನವೆಂಬರ್‌ ಚುನಾವಣೆಯ ಕಾಲವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದ ಪಂಪ್‌ವೆಲ್‌ ಫ್ಲೈಓವರ್‌ ಈ ವರ್ಷವೂ ಪೂರ್ಣವಾಗಲೇ ಇಲ್ಲ!

ಮಳೆಗಾಲದ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿ
ಮಳೆಗಾಲದಲ್ಲಂತು ನಗರದ ಹಲವೆಡೆ ನೂರಾರು ಸಮಸ್ಯೆಗಳು ಎದುರಾಯಿತು. ಡೆಂಗ್ಯೂ ಜ್ವರದಿಂದ ನಗರದ ಹಲವು ಭಾಗಗಳಲ್ಲಿ ನೂರಾರು ಮಂದಿ ನಲುಗಿದರು. ಡೆಂಗ್ಯೂ ವಿರುದ್ಧ ನಗರದಲ್ಲಿ ಅಆಂದೋಲನ ನಡೆಯಿತು. ನದಿ ತೀರದಲ್ಲಿ ನೀರು ಉಕ್ಕಿ ಬಂದು ಹಲವರನ್ನು ನಿರಾಶ್ರಿತರನ್ನಾಗಿಸಿದರೆ, ಸಿಟಿಯ ಮಧ್ಯೆ ತಗ್ಗುಪ್ರದೇಶದಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಯಿತು. ಸಿಡಿಲಿನ ಆಘಾತಕ್ಕೆ, ಮಣ್ಣು ಕುಸಿದು ನಗರದಲ್ಲಿ ಕೆಲವರು ಪ್ರಾಣ ಕಳೆದುಕೊಂಡರು. ಕೆಲವೆಡೆ ಪಾಲಿಕೆಯ ಎಡವಟ್ಟಿಗೆ ಇಂತಹ ಸಮಸ್ಯೆ ಎದುರಾಗಿದ್ದು, ಮುಂದೆಯಾದರೂ ಇಂತಹ ಸಮಸ್ಯೆಗಳಿಗೆ ಪಾಲಿಕೆ ಆಡಳಿತ ಇತಿಶ್ರೀ ಹಾಡುವ ಸಂಕಲ್ಪ ಹೊಸ ವರ್ಷದಲ್ಲಿ ಮಾಡಬೇಕಿದೆ.

ಸಂತ್ರಸ್ತರ ಬದುಕಿಗೆ ಸರಕಾರ ದಾರಿ ತೋರಲಿ
ಪಚ್ಚನಾಡಿಯ ತ್ಯಾಜ್ಯರಾಶಿಯು ಮಳೆಯ ರಭಸದಿಂದ ಕೊಚ್ಚಿ ಮಂದಾರವೆಂಬ ಹಸಿರ ಸಿರಿಗೆ ಎರಗಿ ಬಂದು 23 ಕುಟುಂಬಗಳು ಮನೆ ಕಳೆದುಕೊಂಡು ಇದೀಗ ನಿರ್ವಸಿತರಾಗಿ ಬದುಕು ನಡೆಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಘಟನೆ ನಡೆದರೂ ಇಲ್ಲಿಯವರೆಗೆ ನಿರಾಶ್ರಿತರಿಗೆ ಪರಿಹಾರ ಸಿಕ್ಕಿಲ್ಲ; ಹರಿದು ಬಂದ ತ್ಯಾಜ್ಯವನ್ನು ತೆಗೆಯುವ ಪ್ರಯತ್ನವೂ ನಡೆದಿಲ್ಲ. ಜನಪ್ರತಿನಿಧಿಗಳ ದಂಡು ಹತ್ತಾರು ಬಾರಿ ಇಲ್ಲಿಗೆ ಭೇಟಿ ನೀಡಿದರೂ ನಿರ್ವಸಿತರ ಶಾಶ್ವತ ಕಣ್ಣೊರೆಸುವ ಪ್ರಯತ್ನ ನಡೆದೇ ಇಲ್ಲ. 2020ರಲ್ಲಾದರೂ ಮಂದಾರ ಸಂತ್ರಸ್ತರ ಬದುಕಿಗೆ ಸರಕಾರ ದಾರಿ ತೋರಲಿ.

ಈ ವರ್ಷದ ಕೊನೆಯಲ್ಲಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಮಧ್ಯೆ ನಡೆದ ಪ್ರತಿಭಟನೆ ತಾರಕಕ್ಕೆ ಹೋಗಿ ಪೊಲೀಸ್‌ ಗೋಲಿಬಾರ್‌ಗೆ ಇಬ್ಬರು ಪ್ರಾಣ ಕಳೆದುಕೊಂಡರು. ನಡೆಯಬಾರದ ಘಟನೆ ನಡೆದ ಪರಿಣಾಮದಿಂದ ನಗರದಲ್ಲಿ ಕರ್ಪ್ಯೂ ಹೇರಿ ಜನಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರಿತು. ಬಳಿಕ ರಾಜಕೀಯ ನಾಯಕರ ವಾಕ್ಸಮರಕ್ಕೆ ಮಂಗಳೂರು ನಲುಗಿ ಹೋಯಿತು.

“ಸ್ಮಾರ್ಟ್‌ಸಿಟಿ’; ಹೆಸರಿನಂತೆ ಕಾರ್ಯವಾಗಲಿ!
ಮಂಗಳೂರು ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮಂಜೂರಾಗಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆಯಿತು. ನಗರದ ಚಿತ್ರಣವೇ ಬದಲಾಗಬಹುದು ಎಂದು ಅಂದಾಜಿಸಿದ್ದ ಸ್ಮಾರ್ಟ್‌ಸಿಟಿ ಯೋಜ ನೆಗೆ ಇನ್ನೂ ಕೂಡ ಜೀವ ಕಲೆ ಬಂದಿಲ್ಲ. ಪಾಲಿಕೆ ಅನುಷ್ಠಾನಿಸಿದ್ದ “ಕ್ಲಾಕ್‌ ಟವರ್‌’ ಯೋಜ ನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸೇರಿಸಿರುವುದರಿಂದ ಇದೊಂದು ಯೋಜನೆ ಈ ವರ್ಷ ಮುಗಿದಿದೆ ಎನ್ನಬಹುದು. ಉಳಿದಂತೆ ಬಸ್‌ನಿಲ್ದಾಣ, ಒಳಚರಂಡಿ, ಅಂಡರ್‌ಪಾಸ್‌ ಸಹಿತ ಹಲವಾರು ಯೋಜನೆಗಳು ಈಗಷ್ಟೇ ಕಾಮಗಾರಿ ಆರಂಭ ಕಂಡಿದೆ. ಹೀಗಾಗಿ 2020ಕ್ಕೆ ಸ್ಮಾರ್ಟ್‌ಸಿಟಿಯ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿ ಎಂಬುದು ಅಪೇಕ್ಷೆ.

ಸಿದ್ದಾರ್ಥ್ ಆತ್ಮಹತ್ಯೆ-ಜಾರಿದ ವಿಮಾನ!
ಕಾಫಿ ಡೇ ಮಾಲಕ ಸಿದ್ಧಾರ್ಥ್ ಆತ್ಮಹತ್ಯೆ, ಮಂಗಳೂರು ಏರ್‌ಪೋರ್ಟ್‌ನಲ್ಲಿ ರನ್‌ವೇ ಬಿಟ್ಟು ವಿಮಾನ ಜಾರಿದ್ದು ಈ ವರ್ಷ ದೊಡ್ಡ ಸುದ್ದಿ ಮಾಡಿದ್ದರೆ, ವರ್ಷಾಂತ್ಯಕ್ಕೆ ಮಂಗಳೂರಿನಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ ರಾಷ್ಟ್ರೀಯವಾಗಿ ಗಮನಸೆಳೆಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸಹಿತ ರಾಷ್ಟ್ರೀಯ ಹಾಗೂ ರಾಜ್ಯದ ಜನನಾಯಕರು ಈ ವರ್ಷ ಮಂಗಳೂರಿಗೆ ಆಗಮಿಸಿದ್ದರು. ನಟಿ ಶಿಲ್ಪಾ ಶೆಟ್ಟಿ, ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಸಹಿತ ಹಲವು ಸ್ಟಾರ್‌ಗಳು ಮಂಗಳೂರಿಗೆ ಬಂದಿದ್ದರು. ನದಿ ಉತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಮಂಗಳೂರಿಗೆ ಹೊಸ ದಿಕ್ಕು ನೀಡುವಲ್ಲಿ ಯಶಸ್ವಿಯಾಯಿತು. ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಬೈಠಕ್‌, ಮಂಗಳೂರು ಲಿಟ್‌ಫೆಸ್ಟ್‌ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಗರ ಸಾಕ್ಷಿಯಾಯಿತು. ಕದ್ರಿ ಗೋಪಾಲ್‌ನಾಥ್‌ ಸಹಿತ ಹಲವು ಶ್ರೇಷ್ಠರನ್ನು ಇದೇ ವರ್ಷ ಕಳೆದುಕೊಂಡಿರುವುದು ಬೇಸರದ ಸಂಗತಿ.

ಟಾಪ್ ನ್ಯೂಸ್

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.