ಪೇಜಾವರ ಶ್ರೀ ಬದುಕಿನ ಸಾರ


Team Udayavani, Dec 31, 2019, 1:33 AM IST

bg-68

ಆತನೂ ಅದೇ ಗುಂಪಿನವ…!
ಬೆಂಗಳೂರಿನಲ್ಲಿ ಒಂದು ಸಭೆ ನಡೆಯುತ್ತಿತ್ತು. ಪೇಜಾವರ ಶ್ರೀಗಳ ಹೆಸರಿನಲ್ಲಿ ನಡೆಯುವ ಸಾಮಾಜಿಕ ಯೋಜನೆಗಳಿಗೆ ದೇಣಿಗೆ ನೀಡುವ ಅವಕಾಶವಿತ್ತು. ಈ ಅವಕಾಶವನ್ನು ಒಬ್ಬ ದುರುಪಯೋಗಿಸಿಕೊಂಡ. ಸಿಕ್ಕಿ ಬಿದ್ದಾಗ ಆತನನ್ನು ಸ್ವಾಮಿಗಳ ಮುಂದೆ ಹಾಜರುಪಡಿಸಲಾಯಿತು. ಅವರು ಮೊದಲು ಕೇಳಿದ್ದು “ಊಟ ಆಗಿದೆಯೆ?’. ಆತ “ಇಲ್ಲ’ ಎಂದ. ಅವನಿಗೆ ಊಟ ಹಾಕಿಸಿ ದುಡ್ಡನ್ನೂ ಕೊಟ್ಟು ಇನ್ನು ಮುಂದೆ ಹೀಗೆ ಮಾಡಬೇಡ ಎಂದು ಕಳುಹಿಸಿದರು. “ನಾನು ಯಾರಿಗಾಗಿ ಹಣ ಕೇಳುವುದು, ನನಗಾಗಿಯೋ? ಅಲ್ಲ, ನೊಂದವರಿಗಾಗಿ. ಅವನೂ ಅದೇ ಗುಂಪಿನಲ್ಲಿ ಸೇರಿದವ. ನನ್ನ ಹೆಸರಿನಿಂದ ಅವನಿಗೆ ಹೀಗೆ ಸಂದಾಯವಾಯಿತು. ಅದು ದೈವೇಚ್ಛೆ’. ಇದು ಶ್ರೀ ವಿಶ್ವೇಶತೀರ್ಥರ ವಿಚಾರ ಸರಣಿ.

ಜೀವನೋಪಾಯಕ್ಕೆ ಕಳವು
ಶ್ರೀಕೃಷ್ಣ ಮಠದಲ್ಲಿ ಅವರ ಮೂರನೇ ಪರ್ಯಾಯ ಅವಧಿಯಲ್ಲಿ ಹೀಗೆಯೇ ಒಂದು ಘಟನೆ ನಡೆಯಿತು. ಬಡಗುಮಾಳಿಗೆಯಲ್ಲಿ ಒಬ್ಬ ಹಿಂಬಾಗಿಲಿನಿಂದ ಬಂದು ಗೋಣಿ ಚೀಲ ಕದಿಯುತ್ತಿದ್ದ. ಒಂದು ದಿನ ಸಿಕ್ಕಿಬಿದ್ದ. ಹತ್ತಾರು ಸಿಬಂದಿ ಸೇರಿ ಹೊಡೆಯುತ್ತಿದ್ದರು. ಸ್ವಾಮಿಗಳು ನೋಡಿದರು. ಏನು ಎಂದು ವಿಚಾರಿಸಿದಾಗ ಕಳ್ಳ ಎಂದರು. ವಿಷಯ ತಿಳಿದುಕೊಂಡ ಸ್ವಾಮೀಜಿ, “ಆತ ಜೀವನೋಪಾಯಕ್ಕಾಗಿ ಕದಿಯುತ್ತಿದ್ದಾನೆ. ಬಿಟ್ಟುಬಿಡಿ’ ಎಂದರು. “ಊಟ ಆಯಿತೇ’ ಎಂದು ವಿಚಾರಿಸಿ ಊಟ ಆಗಿಲ್ಲ ಎಂದಾಗ ಊಟಕ್ಕೆ ಕಳುಹಿಸಿಕೊಟ್ಟರು.

ತಾವೇ ಬಡಿಸಿದರು
ನಾಲ್ಕನೇ ಪರ್ಯಾಯದಲ್ಲಿ ಅಪರಾಹ್ನ 3.30ಕ್ಕೆ ಉತ್ತರ ಕರ್ನಾಟಕ ಶಾಲಾ ಮಕ್ಕಳು ಬಂದು ಸ್ವಾಮೀಜಿಯವರನ್ನು ನೇರವಾಗಿ ಭೇಟಿ ಮಾಡಿದರು. ವಿಚಾರಿಸಿದಾಗ ಅವರ ಊಟ ಆಗಿರಲಿಲ್ಲ. ಊಟದ ವ್ಯವಸ್ಥಾಪಕರಿಗೆ ಹೇಳಿ ಊಟಕ್ಕೆ ಹೋಗಲು ತಿಳಿಸಿದರು. ಅಲ್ಲಿ ಬಡಿಸುವವರು ಉದಾಸೀನ ಮಾಡುವುದು ತಿಳಿದುಬಂತು. ಶ್ರೀಗಳೇ ಕಾವಿಶಾಟಿಯನ್ನು ಸೊಂಟಕ್ಕೆ ಕಟ್ಟಿ ಬಡಿಸಲು ಆರಂಭಿಸಿದಾಗ ಸಿಬಂದಿ ಎಚ್ಚರಗೊಂಡರು ಎನ್ನುತ್ತಾರೆ ಶ್ರೀಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸುಬ್ರಹ್ಮಣ್ಯ ಪೆರಂಪಳ್ಳಿ.

ಮಠಾಧಿಪತಿಗಳಿಗೆ ಈ ಉಸಾಬರಿ ಏಕೆ ಎಂದವರಿಗೆ ಉತ್ತರ
ಶ್ರೀಗಳು 1986ರಲ್ಲೊಮ್ಮೆ ಗದುಗಿನಿಂದ ಬಾಗಲಕೋಟೆಗೆ ಹೊರಟಿದ್ದರು. ಬಿಸಿಲ ಝಳ. ನೀರಿನ ಸುಳಿವೇ ಇಲ್ಲದ ಹಳ್ಳಿ. ಕುಡಿಯಲು ನೀರಿನ ಅನುಕೂಲವಿದೆಯೆ ಎಂದು ಒಬ್ಬರಲ್ಲಿ ಪ್ರಶ್ನಿಸಿದರು. “ಇನ್ನೆನ್ರಿಯಪ್ಪಾ ಗಂಗಾಳ, ಚರಿಗೆ ಮಾರೋದೊಂದು ಉಳಿದೈತಿ’ ಎಂದ. ಶ್ರೀಗಳ ಸೂಚನೆಯಂತೆ ವಿಹಿಂಪ ಕಾರ್ಯಕರ್ತರು ಸಹಾಯಕ್ಕೆ ಬಂದರು. 75,000 ರೂ. ಯೋಜನೆ ರೂಪಿಸಿ ಕಾರಡಗಿರಿ ಕೆರೆಯ ಹೂಳೆತ್ತಿದರು. ಜನರ ಹೊಟ್ಟೆ ತುಂಬಿತು, ಕೆರೆ ನೀರಿನಿಂದ ಕೂಡಿತು. ಪರ್ಯಾಯ ಮುಗಿಸಿದ ಬಳಿಕ ಶ್ರೀಗಳ ಮೊದಲು ಭೇಟಿ ನೀಡಿದ್ದು ಬಾಗಲಕೋಟೆಯ ಕರುವಿನಕೊಪ್ಪ ಗೋಶಾಲೆಗೆ. 1978ರ ಹಂಸಲದಿವಿ ಸಮುದ್ರದ ಅಲೆ ಅಬ್ಬರಕ್ಕೆ ತುತ್ತಾದ ಬಡಜನತೆಗೆ, 1995ರ ಗೋವಿಂದಪುರ ಭೂಕಂಪದ ಗುರಿಯಾದ ಸಂದರ್ಭ ಸಾರ್ವಜನಿಕರ ಕೊಡುಗೆಯಿಂದ 150 ಮನೆಗಳನ್ನು ಕಟ್ಟಿಸಿಕೊಟ್ಟರು.

ಟಾಪ್ ನ್ಯೂಸ್

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.