ಹೊಯ್ಸಳರ ಕಾಲದ ವೀರಗಲ್ಲು ಪತ್ತೆ
Team Udayavani, Dec 31, 2019, 1:13 PM IST
ಶಿವಮೊಗ್ಗ: ತಾಲೂಕಿನ ತೇವರ ಚಟ್ನಹಳ್ಳಿಯಲ್ಲಿ ಹೊಯ್ಸಳರ ಕಾಲದ ಶಾಸನಭರಿತ ಮೂರು ಇತರೆ ಎರಡು ವೀರಗಲ್ಲುಗಳು ಪತ್ತೆಯಾಗಿವೆ. ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಕಾಲದ ಶಾಸನಭರಿತ ಮೂರು ವೀರಗಲ್ಲುಗಳು ಇಂತಿವೆ. ಹೊಯ್ಸಳರ ಕಾಲದ ಶಾಸನವಿರುವ
ಒಂದನೇ ವೀರಗಲ್ಲು: ಇದು ಶಾಸನವಿರುವ ವೀರಗಲ್ಲಾಗಿದ್ದು, ಮೂರು ಪಟ್ಟಿಕೆಗಳಿಂದ ಕೂಡಿದೆ. ಇದು 1 ಮೀಟರ್ 88 ಸೆಂಮೀ ಉದ್ದ ಹಾಗೂ 64 ಸೆಂಮೀ ಆಗಲವಾಗಿದೆ. ಇದು- 18ನೇ ಶತಮಾನದಲ್ಲಿ ಹಾಳಾಗಿರುವ ಸಂಭವವಿದ್ದು ಮೂರುಪಟ್ಟಿಕೆಗಳಲ್ಲಿ ಕುಳಿಗಳನ್ನು ಮಾಡಿರುವುದರಿಂದ ಶಾಸನವು ಹಾಳಾಗಿರುವುದು ಕಂಡುಬರುತ್ತದೆ.
ಶಿಲ್ಪದ ವಿವರ-ಕೆಳಗಿನ ಪಟ್ಟಿಕೆ: ವೀರನು ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದು ಹೋರಾಡುತ್ತಿರುವುದು. ಮೇಲ್ಭಾಗದಲ್ಲಿ ಛತ್ರಿಯಿರುವುದು ಎದುರುಗಡೆ ಇಬ್ಬರು ವೀರರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತಿರುವುದು ಒಬ್ಬ ವೀರ ಕೆಳಗಡೆ ಬಿದ್ದಿರುವುದನ್ನು ಕಾಣಬಹುದು.
ಎರಡನೇ ಪಟ್ಟಿಕೆ: ಈ ಪಟ್ಟಿಕೆಗೆ ಮಂಟಪವನ್ನು ಮಾಡಿದ್ದು ವೀರನನ್ನು ಅಪ್ಸರೆಯರು ತಮ್ಮ ತೋಳುಗಳ ಮೂಲಕ ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಕಂಡುಬರುತ್ತದೆ.
ಮೂರನೇ ಪಟ್ಟಿಕೆ: ಇಲ್ಲಿ ವೀರನು ಕುಳಿತಿದ್ದು ಶಿವಲಿಂಗವಿದ್ದು ಇದರ ಎದುರಿಗೆ ನಂದಿ ಮೇಲ್ಭಾಗದಲ್ಲಿ ಎರಡು ಚಾಮರಗಳು ಚಂದ್ರವು ಹಾಳಾಗಿದ್ದು ಸೂರ್ಯನನ್ನು ಕಾಣಬಹುದು.
ಹೊಯ್ಸಳರ ಕಾಲದ ಎರಡನೇ ಶಾಸನವಿರುವ ವೀರಗಲ್ಲು: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು ಹಳೆಗನ್ನಡ ಶಾಸನವಿದ್ದು ತೃಟಿತವಾಗಿದೆ. ಇದು 1 ಮೀಟರ್ 39 ಸೆ.ಮೀ ಉದ್ದ 62 ಸೆ.ಮೀ ಆಗಲವಾಗಿದೆ.
ಶಿಲ್ಪದ ವಿವರ: ಕೆಳಗಿನ ಪಟ್ಟಿಕೆ: ಇಬ್ಬರು ವೀರರು ಕತ್ತಿ ಗುರಾಣಿ ಹಿಡಿದು ಹೋರಾಡುತ್ತಿರುವುದು, ಇನ್ನೊಬ್ಬ ವೀರನು ಕತ್ತಿಯನ್ನು ಹಿಡಿದು ಕುದುರೆಯ ಮೇಲೆ ಕುಳಿತು ಹೋರಾಡುತ್ತಿರುವುದು ಕಂಡುಬರುತ್ತದೆ.
ಎರಡನೇ ಪಟ್ಟಿಕೆ: ಇಲ್ಲಿ ಮಂಟಪವನ್ನು ನಿರ್ಮಾಣ ಮಾಡಿದ್ದು ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತದೆ.
ಮೂರನೇ ಪಟ್ಟಿಕೆ: ಇಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿರುವುದು ಲಿಂಗವಿದ್ದು ಎದುರುಗಡೆ ನಂದಿ ಮೇಲ್ಭಾಗದಲ್ಲಿ ಸೂರ್ಯಚಂದ್ರರನ್ನು ಕಾಣಬಹುದು. ಹೊಯ್ಸಳರ ಕಾಲದ ಮೂರನೇ ಶಾಸನವಿರುವ
ವೀರಗಲ್ಲು: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು, ಎರಡು ಪಟ್ಟಿಕೆಗಳಲ್ಲಿ ತೃಟಿತವಾದ ಆರು ಸಾಲುಗಳ ಹಳೆಗನ್ನಡದ ಶಾಸನವು ಕಂಡು ಬರುತ್ತದೆ. ಇದು 85 ಸೆಂಮೀ ಉದ್ದ 45 ಸೆಂಮೀ ಅಗಲವಾಗಿದ್ದು ಈ ವೀರಗಲ್ಲಿನ ಕೆಳಭಾಗ ತುಂಡಾಗಿರುವುದನ್ನು ಕಾಣಬಹುದು.
ಶಿಲ್ಪದ ವಿವರ-ಕೆಳಗಿನ ಪಟ್ಟಿಕೆ: ಈ ಪಟ್ಟಿಕೆಯಲ್ಲಿ ಇಬ್ಬರು ಯೋಧರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಕೆಳ ಭಾಗ ತುಂಡಾಗಿರುವುದನ್ನು ಕಾಣಬಹುದು.
ಎರಡನೇ ಪಟ್ಟಿಕೆ: ಇಲ್ಲಿ ವೀರನನ್ನು ಅಪ್ಸರೆಯರು ಚಾಮರ ಹಿಡಿದು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಕಾಣಬಹುದು.
ಮೂರನೇ ಪಟ್ಟಿಕೆ: ವೀರನು ಸ್ವರ್ಗದಲ್ಲಿ ಕುಳಿತಿರುವುದು ಇಲ್ಲಿ ಶಿವಲಿಂಗವಿದ್ದು ಲಿಂಗದ ಎದುರು ನಂದಿಯಿದ್ದು ಮೇಲ್ಭಾಗದಲ್ಲಿ ಸೂರ್ಯಚಂದ್ರರಿರುವುದನ್ನು ಕಾಣಬಹುದು.
ಶಾಸನದ ಪಾಠ: ಶಾಸನವು ಆರು ಸಾಲುಗಳಿಂದ ಕೂಡಿದ್ದು ಮೇಲ್ಭಾಗದ ಮೂರು ಸಾಲುಗಳು ತೃಟಿತವಾಗಿದ್ದು, ಎರಡನೇ ಪಟ್ಟಿಕೆಯ ಮೂರು ಸಾಲುಗಳನ್ನು ಓದಲಾಗಿದೆ. ಮೊದಲ ಪಟ್ಟಿಕೆ ಲಿಪಿಯು ತೃಟಿತವಾಗಿದೆ.
ಎರಡನೇ ಪಟ್ಟಿಕೆ : ಹಡೆವಳ ಬೀರಂ ಸುರಲೋಕ 6, ಪ್ರಾಪ್ತನಾದ ಹೊಯ್ಸಳರ ಮಹಾಮಂಡಳೇಶ್ವರನ ಅಧಿಕಾರಿಯಾದ ನನ್ನಿಯ ಗಂಗ ಎಂಬ ಅಧಿಕಾರಿಯ ಆಳ್ವಿಕೆಯಲ್ಲಿ ಕೆಸಲಿನಲಕೊಪ್ಪಯ ಕಾಳಗದಲ್ಲಿ- ಈ ಕೆಸಲಿನಕೊಪ್ಪ ಇಂದೂ ಬೆಚಾರಕ್ ಗ್ರಾಮವಾಗಿರಬಹುದು. ಈ ಗ್ರಾಮದ ಕಾಳಗದಲ್ಲಿ ಬೀರ ಎಂಬ ತುಕಡಿಯ (ಗುಂಪಿನ)ನಾಯಕ ಹೋರಾಡಿ ಮರಣ ಹೊಂದಿ ಸುರಲೋಕ ಪ್ರಾಪ್ತನಾದನು ಎಂದು ತಿಳಿಸುತ್ತದೆ.
ಬಲಿದಾನದ ಸ್ಮಾರಕ: ಇಲ್ಲಿ ಇಬ್ಬರು ಭಕ್ತರು ಕೈ ಮುಗಿದು ನಿಂತಿದ್ದು ಇವರ ಮೇಲ್ಭಾಗದಲ್ಲಿ ಪದ್ಮಗಳಿದ್ದು- ಇದರ ಮೇಲ್ಭಾಗದಲ್ಲಿ ಮೂಕೊಡೆ ರೀತಿಯಿದ್ದು ಇದನ್ನು ಜೈನ ಪರಂಪರೆಯ ಸ್ಮಾರಕವಿರಬಹುದು ಎನ್ನಬಹುದು. ಮೇಲಿನ ಎಲ್ಲಾ ವೀರಗಲ್ಲುಗಳನ್ನು ಬಲಿದಾನದ ಸ್ಮಾರಕಗಳನ್ನು ಲಿಪಿ ಹಾಗೂ ಶಿಲ್ಪಗಳ ಆಧಾರಗಳ ಮೇಲೆ ಹೊಯ್ಸಳರ ಕಾಲದ ಕ್ರಿ.ಶ. 12-13ನೇ ಶತಮಾನಗಳ ವೀರಗಲ್ಲು ಶಾಸನಗಳು ಎನ್ನಬಹುದು.
ಉಪಸಂಹಾರ: ತೇವರಚಟ್ಟಹಳ್ಳಿಯು ರಾಷ್ಟ್ರಕೂಟರ ಕಾಲದಿಂದ ಅಂದರೆ ಕ್ರಿ.ಶ. 9-10ನೇ ಶತಮಾನದಿಂದ ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಆಡಳಿತದವರೆಗೂ ಇದ್ದಂತಹ ಗ್ರಾಮವಾಗಿದೆ ಎನ್ನಬಹುದು ಎಂದು ಶಿವಪ್ಪ ನಾಯಕ ಅರಮನೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.