ವೈದ್ಯರಿಲ್ಲದೆ ರೋಗಿಗಳ ಪರದಾಟ
Team Udayavani, Dec 31, 2019, 2:50 PM IST
ಯಲ್ಲಾಪುರ: ಮಾವಿನಮನೆ ವ್ಯಾಪ್ತಿಯ ಮಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ತುಂಬುವಂತೆ ಆಗ್ರಹಿಸಿ ಮಾವಿನಮನೆ ಗ್ರಾ.ಪಂ ಆಶ್ರಯದಲ್ಲಿ ಸಾರ್ವಜನಿಕರು ಹಕ್ಕೋತ್ತಾಯದ ಪ್ರತಿಭಟನೆ ನೆಡೆಸಿ ತಾಲೂಕಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ, ತಾಲೂಕಾ ಕೇಂದ್ರದಿಂದ ಸುಮಾರು 35 ರಿಂದ 40 ಕಿಮೀ ದೂರದಲ್ಲಿರುವ ಮಲವಳ್ಳಿ ಆರೋಗ್ಯ ಕೇಂದ್ರದಲ್ಲಿ ಕಳೆದ 3-4 ತಿಂಗಳಿಂದ ವೈದ್ಯಾಧಿಕಾರಿಗಳಿಲ್ಲ. ಸುಸಜ್ಜಿತ ಆಸ್ಪತ್ರೆ ಇದ್ದಾಗ್ಯೂ ಯಾವುದೇ ಸಿಬ್ಬಂದಿ ಇರುವುದಿಲ್ಲ. ಸ್ಥಳಿಯ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಸೇವಾ-ಸೌಲಭ್ಯಗಳು ಇರುವುದಿಲ್ಲ. ತುರ್ತು ಚಿಕಿತ್ಸೆ ಸಲುವಾಗಿ ಇಲ್ಲಿ ವೈದ್ಯರ ಕಾಯಂ ಉಪಸ್ಥಿತಿ ಅವಶ್ಯವಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಫಾರ್ಮಾಸಿಸ್ಟ್, ದ್ವಿತೀಯ ದರ್ಜೆ ಸಹಾಯಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗಳು ಖಾಲಿ ಇವೆ. ಸ್ಟಾಪ್ ನರ್ಸ್ ಮತ್ತು ಲ್ಯಾಬ್ ಟಿಕ್ನಿಷಿಯನ್ ಹುದ್ದೆಗಳ ಮಂಜೂರಾತಿ ತೀರಾ ಅವಶ್ಯಕವಾಗಿದೆ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ನರೇಂದ್ರ ಪವಾರ, ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ ತಕ್ಷಣದಿಂದ ಬೇರೆಡೆಯಿಂದ ಓರ್ವ ವೈದ್ಯರು ಹಾಗೂ ಎಎನ್‌ಎಂ ನಿಯೋಜಿಸಲಾಗುವುದು. ಒಂದೆರಡು ದಿವಸಗಳಲ್ಲಿ ನಂದೊಳ್ಳಿ ಹಾಗೂ ಮಲವಳ್ಳಿಗೆ ಕಾಯಂ ವೈದ್ಯರ ನೇಮಕ ಮಾಡಲಾಗುವುದೆಂದು ತಿಳಿಸಿದರು.
ತಾ.ಪಂ ಸದಸ್ಯ ಸುಬ್ಬಣ್ಣ ಬೋಳ್ಮನೆ, ಗ್ರಾಪಂ ಅಧ್ಯಕ್ಷ ನಾರಾಯಣ ಕುಣಬಿ, ಸದಸ್ಯರಾದ ಸುಬ್ಬಣ್ಣ ಕುಂಟೆಗಾಳಿ, ದೀಪಕ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕಾರ, ಪ್ರಮುಖರಾದ ರಾಘವೇಂದ್ರ ಲಿಂಗಣ್ಣ ಭಟ್ಟ, ಮಂಜಣ್ಣ ಮೊಠಾರಿ, ಸದಾನಂದ ಭಟ್ಟ, ರಸ್ಮಾ ಕುಣಬಿ, ರವಿ ಹುಳಸೆ, ಶಂಕರನಾರಾಯಣ ಗಾಂವ್ಕಾರ, ಎನ್.ಕೆ. ಭಟ್ಟ ಮೆಣಸುಪಾಲ, ಮಾಚಣ್ಣ ಬಾರೆ, ಎಸ್.ಎಂ. ಭಟ್ಟ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.