ಮಕ್ಕಳ ಮನಸ್ಸಿನ ಸುತ್ತ “ಲಿಲ್ಲಿ’
ಮೊಬೈಲ್, ಮಗು ಮತ್ತು ತಾಯಿ
Team Udayavani, Jan 1, 2020, 7:02 AM IST
ಕನ್ನಡದಲ್ಲಿ ಹೊಸ ಆಲೋಚನೆಯೊಂದಿಗೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಲಿಲ್ಲಿ’ ಎಂಬ ಚಿತ್ರತಂಡವೂ ಸೇರಿದೆ. ಇದೊಂದು ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ಜಾನರ್‌ನ ಸಿನಿಮಾ. ಈ ಚಿತ್ರದ ಮೂಲಕ ವಿಜಯ್ ಎಸ್.ಗೌಡ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ “ನೀರ್‌ದೋಸೆ’, “ಗೋವಿಂದಾಯ ನಮಃ’ (ತೆಲುಗು ವರ್ಷನ್), “ರಂಗಿತರಂಗ’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ವಿಜಯ್ ಎಸ್.ಗೌಡ, ಅನಿಮೇಷನ್ ಹಿನ್ನೆಲೆಯಿಂದ ಬಂದವರು.
8 ವರ್ಷಗಳ ಕಾಲ ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅವರು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಿನಿಮಾಗಳಿಗೆ ಸಂಬಂಧಿಸಿದ ಕೆಲಸ ಮಾಡಿಕೊಂಡಿದ್ದವರು. ಆ ಅನುಭವದ ಮೇಲೆ “ಲಿಲ್ಲಿ’ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಹೇಳುವ ಅವರು, “ಮಕ್ಕಳನ್ನು ಪೋಷಕರು ಹೇಗೆ ಕಡೆಗಣಿಸುತ್ತಾರೆ, ಮೊಬೈಲ್ ಎಂಬುದು ಹೇಗೆಲ್ಲಾ ಮಾನವೀಯ ಸಂಬಂಧಗಳನ್ನು ದೂರ ಮಾಡಿದೆ.
ಮೊಬೈಲ್ ವ್ಯಾಮೋಹದಿಂದ ಮಾನವೀಯ ಮೌಲ್ಯಗಳು ಹೇಗೆ ಕುಸಿಯುತ್ತಿವೆ. ಮೊಬೈಲ್‌ನಿಂದ ಉಂಟಾಗುವ ಭಯಾನಕ ಕಾಯಿಲೆಯೊಂದು, ಆರೇಳು ವರ್ಷದ ಮಕ್ಕಳು ತಮ್ಮ ಹೆತ್ತವರನ್ನೇ ಕೊಲೆ ಮಾಡಬೇಕು ಎಂದು ನಿರ್ಧಾರಕ್ಕೆ ಬರುವಷ್ಟರ ಮಟ್ಟಿಗೆ ಮೊಬೈಲ್ ಕಾರಣವಾಗುತ್ತೆ ಎಂಬ ಸೂಕ್ಷ್ಮ ಅಂಶ ಚಿತ್ರದ ಹೈಲೈಟ್. ಚಿತ್ರವನ್ನು ನಾಗರಾಜ್ ಮತ್ತು ಎಸ್.ಸುಬ್ರಮಣಿ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.
ಇದು ಯುನಿರ್ವಸಲ್ ಕಥೆ ಆಗಿದ್ದರಿಂದ ಸಿಮ್ರಾನ್ ಆವರನ್ನು ಕನ್ನಡಕ್ಕೆ ಕರೆತರಬೇಕು ಎಂಬ ಉದ್ದೇಶದಿಂದ ಕಥೆ ಹೇಳಲಾಗಿತ್ತು. ಅದು ಅವರಿಗೆ ಇಷ್ಟವಾಗಿ, ತಮಿಳಿನಲ್ಲೇ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಇದು ಕನ್ನಡದಲ್ಲೇ ಶುರುವಾಗಬೇಕು ಎಂಬ ಆಸೆ ಚಿತ್ರತಂಡದ್ದಾಗಿದ್ದರಿಂದ ಅದು ಕೈಗೂಡಲಿಲ್ಲ. ಈಗ ಕನ್ನಡದ ರಾಧಿಕಾ ಕುಮಾರಸ್ವಾಮಿ, ಜಾಕಿ ಭಾವನಾ ಅಥವಾ ರಚಿತಾರಾಮ್ ಅವರಿಗೆ ಕಥೆ ಹೇಳುವ ತಯಾರಿ ನಡೆಯುತ್ತಿದೆ. ಇಲ್ಲಿ ತಾಯಿ ಪಾತ್ರ ಪ್ರಮುಖವಾಗಿದೆ. ಸಾಕಷ್ಟು ಎಮೋಶನ್ಸ್ ಕೂಡ ಇದೆ.
ಉಳಿದಂತೆ ಚಿತ್ರದಲ್ಲಿ ತಬಲನಾಣಿ ಇತರರು ಇರಲಿದ್ದಾರೆ. ಈಗಾಗಲೇ “ಲಿಲ್ಲಿ’ ಶೀರ್ಷಿಕೆ ನೋಂದಣಿಯಾಗಿದ್ದು, ಹೊಸ ವರ್ಷಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗುವುದು. ಜನವರಿಯಲ್ಲಿ ಮುಹೂರ್ತ ನಡೆಸಿ, ಚಿತ್ರೀಕರಣಕ್ಕೆ ಹೋಗುವ ಯೋಚನೆ ಇದೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ. ವೀರೇಶ್ ಎಸ್.ಗೌಡ ಸಂಗೀತವಿದೆ. ಶ್ರೀಕಾಂತ್ ಸಂಕಲನ ಮಾಡಲಿದ್ದಾರೆ. ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದ್ದು, ಎರಡು ದೊಡ್ಡ ಸೆಟ್ ಹಾಕಿ 60 ದಿನಗಳ ಚಿತ್ರೀಕರಣ ನಡೆಸುವುದಾಗಿ ಹೇಳುತ್ತಾರೆ ವಿಜಯ್ ಎಸ್.ಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.