“ಕೌವ್‌ಬಾಯ್ ಕೃಷ್ಣ’ ಮೇಲೆ ಪ್ರೀತಿ
ಟೈಟಲ್ ರಿಜಿಸ್ಟರ್ ಮಾಡಿಸಿದ ರಿಷಭ್
Team Udayavani, Jan 1, 2020, 7:03 AM IST
ಕೆಲವು ಸಿನಿಮಾಗಳಲ್ಲಿನ ಪಾತ್ರಗಳ ಹೆಸರುಗಳೇ ಹಾಗೆ, ಬೇಗನೇ ಕ್ಲಿಕ್ ಆಗುತ್ತವೆ. ಪಾತ್ರ ಚಿಕ್ಕದಿದ್ದರೂ ಆ ಪಾತ್ರದ ಹೆಸರು ಕೂಡಲೇ ಗಮನ ಸೆಳೆಯುತ್ತದೆ. ಜನ ಇಡೀ ಸಿನಿಮಾವನ್ನು ಮರೆತರೂ ಕೆಲವು ಪಾತ್ರಗಳನ್ನು ಮಾತ್ರ ಮರೆಯಲ್ಲ. ಈಗ ರಿಷಭ್ ಶೆಟ್ಟಿ ಮಾಡಿರುವ ಪಾತ್ರವೊಂದರ ಹೆಸರು ಸಖತ್ ಕ್ಲಿಕ್ ಆಗಿದೆ. ಅದು ಯಾವ ಮಟ್ಟಿಗೆ ಎಂದರೆ ಸ್ವತಃ ರಿಷಭ್ ಶೆಟ್ಟಿ ಆ ಹೆಸರನ್ನೇ ಟೈಟಲ್‌ನ್ನಾಗಿ ರಿಜಿಸ್ಟರ್ ಮಾಡಿಸುವಷ್ಟು.
ಅಂದಹಾಗೆ, ರಿಷಭ್ ನೋಂದಾಯಿಸಿರುವ ಟೈಟಲ್ “ಕೌವ್‌ಬಾಯ್ ಕೃಷ್ಣ’. ನೀವು ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನೋಡಿದ್ದರೆ ನಿಮಗೆ ಈ ಹೆಸರು ನೆನಪಿಗೆ ಬರುತ್ತದೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ಕೂಡಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಆಗಾಗ ಕಾಣಿಸಿಕೊಳ್ಳುವ ರಿಷಭ್‌ಗೆ ಇಲ್ಲಿ ಮಾತಿಲ್ಲ, ಬರೀ ಎಕ್ಸ್‌ಪ್ರೆಶನ್‌ನಲ್ಲೇ ಅವರ ಪಾತ್ರ ಸಾಗುತ್ತದೆ.
ಕೌಯ್‌ಬಾಯ್ ಕೃಷ್ಣ ಎನ್ನುವ ಆ ಪಾತ್ರವನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಈ ಹೆಸರಿನ ಬಗ್ಗೆ ಚರ್ಚೆಯಾಗಲಾರಂಭಿಸಿದ ಬೆನ್ನಲ್ಲೇ ರಿಷಭ್ ತಮ್ಮ ಬ್ಯಾನರ್‌ನಲ್ಲಿ ಆ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಹಾಗಂತ ಯಾವಾಗ ಸಿನಿಮಾ ಮಾಡುತ್ತಾರೆಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಸದ್ಯ ಟೈಟಲ್ ಬಿಟ್ಟರೆ ಮಿಕ್ಕ ಯಾವ ಅಂಶವೂ ಅಂತಿಮವಾಗಿಲ್ಲ.
“ಟೈಟಲ್ ಬಗ್ಗೆ ಒಂದಷ್ಟು ಕ್ರೇಜ್ ಇದ್ದ ಕಾರಣ ಅದನ್ನು ರಿಜಿಸ್ಟರ್ ಮಾಡಿಸಿದೆ ಅಷ್ಟೇ. ಅದು ಬಿಟ್ಟರೆ ಸ್ಕ್ರಿಪ್ಟ್ ಆಗಲೀ, ಸಿನಿಮಾ ಯಾವಾಗ ಆಗುತ್ತದೆ ಎಂಬ ಅಂಶ… ಯಾವುದೂ ಅಂತಿಮವಾಗಿಲ್ಲ’ ಎನ್ನುವುದು ರಿಷಭ್ ಮಾತು. ಸದ್ಯ ರಿಷಭ್ “ರುದ್ರಪ್ರಯಾಗ’ ಚಿತ್ರದ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರ ಆರಂಭವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.