ಡಿಜಿಟಲ್ ಪಾವತಿಗೆ ಉತ್ತೇಜನ ಕೊಡದಿದ್ದರೆ 5 ಸಾವಿರ ರೂ.ದಂಡ
ವಾರ್ಷಿಕ 50 ಕೋಟಿ ರೂ.ಗಳಷ್ಟು ವ್ಯವಹಾರದ ಕಂಪನಿಗಳ ಕಡೆಗೆ ಕೇಂದ್ರದ ಅಸ್ತ್ರ
Team Udayavani, Dec 31, 2019, 10:59 PM IST
– ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲು ಜ. 31ರ ಗಡುವು
– ನಗದು ರಹಿತ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳದ ಕಂಪನಿಗಳಿಗೆ ದಿನಕ್ಕೆ 5,000 ರೂ. ದಂಡದ ಎಚ್ಚರಿಕೆ.
– ನಗದು ರಹಿತ ವಹಿವಾಟು ಉತ್ತೇಜನಕ್ಕೆ ಹೊಸ ಆದೇಶ ಜಾರಿ
ನವದೆಹಲಿ: ನಗದು ರಹಿತ ಆರ್ಥಿಕ ವಹಿವಾಟನ್ನು ಮತ್ತಷ್ಟು ಸರ್ವವ್ಯಾಪಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ವಾರ್ಷಿಕವಾಗಿ 50 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳು ತಮ್ಮಲ್ಲಿ ಡಿಜಿಟಲ್ ಪಾವತಿ ಸೌಲಭ್ಯಗಳನ್ನು 2020ರ ಜ. 31ರೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ, ದಿನವೊಂದಕ್ಕೆ ಆ ಕಂಪನಿಯ ಮೇಲೆ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಕಟ್ಟುನಿಟ್ಟಾದ ಆದೇಶ ನೀಡಿದೆ.
2020ರ ಫೆ. 1ರಿಂದ ಈ ಕಂಪನಿಗಳ ವ್ಯವಹಾರ ವ್ಯಾಪ್ತಿಗೆ ಬರುವ ಯಾವುದೇ ಗ್ರಾಹಕನಿಕೆ ಡಿಜಿಟಲ್ ಪಾವತಿಯ ಆಯ್ಕೆಯನ್ನು ಆ ಕಂಪನಿಗಳು ಕಡ್ಡಾಯವಾಗಿ ನೀಡಲೇಬೇಕಿದ್ದು, “ರುಪೇ’ ಹಾಗೂ “ಯುಪಿಐ’ ಮಾದರಿಯ ಪಾವತಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಂದು ಸರ್ಕಾರ ತಾಕೀತು ಮಾಡಿದೆ.
ಈ ಸೂಚನೆಗಳನ್ನು ಒಳಗೊಂಡ ಸುತ್ತೋಲೆಯನ್ನು ಡಿ. 30ರಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮೂಲಕ ಎಲ್ಲಾ ಸಂಸ್ಥೆಗಳಿಗೆ, ಕಂಪನಿಗಳಿಗೆ ರವಾನಿಸಲಾಗಿದೆ ಎಂದು “ಸಿಎನ್‌ಬಿಸಿಟಿವಿ 18′ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.