2020ರ ಒಡಲಲ್ಲಿ ಏನೇನಿದೆ ?
Team Udayavani, Jan 1, 2020, 7:35 AM IST
ಹೊಸ ವರ್ಷವೇ ರಾಮನ ದೇಗುಲ
ಕಳೆದ ವರ್ಷ ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬಿತ್ತು. ಈ ಹೊಸ ವರ್ಷದಲ್ಲೇ ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಾಣ ಕಾರ್ಯಾರಂಭವಾಗಲಿದೆ. ಈಗಾಗಲೇ ಶಿಲಾನ್ಯಾಸ ನೆರವೇರಿರುವುದರಿಂದ ಸಂಕ್ರಾಂತಿ ಅಥವಾ ಶ್ರೀರಾಮನವಮಿಗೆ ಮಂದಿರ ನಿರ್ಮಾಣದ ಕೆಲಸ ಅಧಿಕೃತವಾಗಿ ಶುರುವಾಗಲಿದೆ. 1.25 ಲಕ್ಷ ಕ್ಯೂಬಿಕ್ ಫೀಟ್ ಕಂಬಗಳು ಸಿದ್ಧವಾಗಿವೆ. ಅಗತ್ಯವಿರುವುದು 1.75 ಕ್ಯೂಬಿಕ್ ಫೀಟ್ ಮರಳು ಕಂಬಗಳು ಮಾತ್ರ. ಕ್ರೌಡ್ ಫಂಡಿಂಗ್(ಜನರಿಂದ ದೇಣಿಗೆ) ಮೂಲಕ ಹೈಟೆಕ್ ನಿರ್ಮಾಣಕ್ಕೆ ಸರ್ಕಾರ ತೀರ್ಮಾನಿಸಿದೆ. 2024ರ ಹೊತ್ತಿಗೆ ದೇಗುಲ ಸಂಪೂರ್ಣ.
ಆಟೊಮೊಬೈಲ್
ಕಳೆದ ವರ್ಷ ಜಿನೇವಾದಲ್ಲಿ ಜರುಗಿದ ಆಟೋ ಎಕ್ಸ್‌ಪೋನಲ್ಲಿ ಟಾಟಾ ಮೋಟಾರ್ ಸಂಸ್ಥೆ ಫ್ಯೂಚರಿಸ್ಟಿಕ್ ಆದ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಶಿಸಿತ್ತು. ಎಚ್2ಎಕ್ಸ್ ಎಂಬ ಹೆಸರಿನ ಆ ಕಾರು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸುದ್ದಿಯಿದೆ. ಇದರಲ್ಲಿ ಕೇವಲ ಪೆಟ್ರೋಲ್ ಆವೃತ್ತಿ ಮಾತ್ರವೇ ಲಭ್ಯವಾಗಲಿದೆ. ಮಹೀಂದ್ರಾ ಕೆಯುವಿ 100 ಕಾರಿಗೆ ಇದು ಪ್ರತಿಸ್ಪರ್ಧೆ ನೀಡಲಿದೆ.
ಫ್ರೆಂಚ್ ಆಟೊಮೊಬೈಲ್ ಸಂಸ್ಥೆ ಸಿಟ್ರೋಯೆನ್ ಭಾರತದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಹೊರಟಿದೆ. ಜಗತ್ತಿನಾದ್ಯಂತ ಜನಪ್ರಿಯವಾದ ತನ್ನ ಎಸ್‌ಯುವಿ ಕಾರು “ಸಿ5 ಏರ್‌ಕ್ರಾಸ್’ ಅನ್ನು ಭಾರತದ ರಸ್ತೆಗಳಲ್ಲಿ ಇಳಿಸಲು ತಯಾರಿ ನಡೆಸಿದೆ. ಈ ವರ್ಷದ ಮಧ್ಯಾರ್ಧದಲ್ಲಿ ಈ ಐಷಾರಾಮಿ ಕಾರಿನ ಲಾಂಚ್ ದಿನಾಂಕವನ್ನು ನಿರೀಕ್ಷಿಸಬಹುದಾಗಿದೆ.
ಎಸ್‌ಯುವಿಗಿಂತ ಕೊಂಚ ಪುಟ್ಟ ಗಾತ್ರದ, ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವರ್ಗಕ್ಕೆ ಸೇರುವ ಕಾರೊಂದನ್ನು ರೆನಾಲ್ಟ್ ಸಂಸ್ಥೆ ಹೊರತರುತ್ತಿದೆ. ಎಚ್‌ಬಿಸಿ ಎಂಬ ಹೆಸರಿನ ಈ ಕಾರು ಕೆಲ ಸಮಯದ ಹಿಂದಷ್ಟೇ ಬಿಡುಗಡೆಯಾದ “ಟ್ರೈಬರ್’ನ ಎಂಜಿನ್‌ಅನ್ನೇ ಹೊಂದಿದ್ದು “ಟಬೋì ಚಾರ್ಜ್’ ಸವಲತ್ತನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಮಾರುತಿ ಸುಝುಕಿ ವಿಟಾರಾ ಬ್ರೆಝಾ ಮತ್ತು ಹ್ಯುಂಡೈನ ವೆನ್ಯೂ ಕಾರುಗಳಿಗೆ ಈ ಕಾರು ಪೈಪೋಟಿ ನೀಡಲಿದೆ.
ಭಾರತದ ಮೊತ್ತಮೊದಲ ಸೂಪರ್‌ಬೈಕ್ ಸ್ಟಾರ್ಟಪ್ ಸಂಸ್ಥೆ “ಎಮ್‌ಫ್ಲಕ್ಸ್’ ತನ್ನ ಮೊದಲ ಬೈಕನ್ನು ಈ ವರ್ಷಾಂತ್ಯದ ವೇಳೆಗೆ ಬಿಡುಗಡೆಗೊಳಿಸಲಿದೆ. ಮೂರೇ ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಈ ಬೈಕಿನ ಗರಿಷ್ಠ ವೇಗ ಮಿತಿ 200 ಕಿ.ಮೀ. ಅಂದಹಾಗೆ ಇದು “ಎಲೆಕ್ಟ್ರಿಕ್’ ಬೈಕು!
ಒಂದು ಕಾಲದಲ್ಲಿ ಮಧ್ಯಮ ವರ್ಗದ ಭಾರತೀಯರ ಕಣ್ಮಣಿಯಾಗಿದ್ದ ಬಜಾಜ್ ಚೇತಕ್ ಮತ್ತೆ ರೀಎಂಟ್ರಿ ಕೊಡುತ್ತಿದೆ. ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿರುವ ಚೇತಕ್ ಈ ವರ್ಷದ ಮೊದಲಾರ್ಧದೊಳಗೆ ಮಾರುಕಟ್ಟೆಗೆ ಬರಲಿದ್ದು, ಮತ್ತೆ ತನ್ನ ಜಾದೂವನ್ನು ಮರುಕಳಿಸುವುದೇ ಇಲ್ಲವೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ಅಟೊಮೊಬೈಲ್ ಸಂಸ್ಥೆ ಕಿಯಾ ಮಧ್ಯಮ ವರ್ಗದ ಗ್ರಾಹಕರಿಗಾಗಿ ರಿಯೋ ಹೆಸರಿನ ಕಾರನ್ನು ವಿನ್ಯಾಸಗೊಳಿಸಿದೆ. 2020ರ ಆಗಸ್ಟ್ ತಿಂಗಳಲ್ಲಿ ಕಾರು ಬಿಡುಗಡೆಯಾಗುವ ನಿರೀಕ್ಷೆ ಇದೆ. 6 ಏರ್‌ಬ್ಯಾಗುಗಳು, ಟೈರ್ ಪ್ರಷರ್ ಮಾನಿಟರಿಂಗ್ ಸಿಸ್ಟಮ್, ಆ್ಯಕ್ಸಿಡೆಂಟ್ ವಾರ್ನಿಂಗ್ ಸಿಸ್ಟಂ ಮುಂತಾದ ಸವಲತ್ತುಗಳನ್ನು ಸಂಸ್ಥೆ ಘೋಷಿಸಿರುವುದರಿಂದ ಕಾರು ಪ್ರಿಯರು ಕಾತರರಾಗಿದ್ದಾರೆ.
ಮಾರುತಿ ಸುಝುಕಿ ವ್ಯಾಗನ್‌ಆರ್ ಕಾರು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಜಪಾನಿ ಆಟೊಮೊಬೈಲ್ ಸಂಸ್ಥೆ ಸುಝುಕಿ ಈಗಾಗಲೇ ಟೊಯೊಟಾ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು. ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲಿ ಅವುಗಳ ನೆರವು ಪಡೆದುಕೊಳ್ಳುತ್ತಿದೆ. ಮೇ ತಿಂಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಇದರ ಪ್ರಮುಖ ಭಾಗವಾದ ಲೀಥಿಯಂ ಬ್ಯಾಟರಿ ನಮ್ಮ ದೇಶದಲ್ಲೇ ಅಭಿವೃದ್ಧಿಗೊಳ್ಳುತ್ತಿರುವುದು ವಿಶೇಷ.
ಅಂತರಿಕ್ಷ
ಭಾರತದ ಚಂದ್ರಯಾನ-2 ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ನಿಯಂತ್ರಣ ತಪ್ಪಿರಬಹುದು. ಆದರೆ ಈ ವರ್ಷ ಚಂದ್ರಯಾನ-3 ಯೋಜನೆಯಲ್ಲಿ ಮರಳಿ ಯತ್ನವ ಮಾಡುತ್ತಿರುವ ವಿಜ್ಞಾನಿಗಳು ಯಶಸ್ವಿಯಾಗಲಿರುವ ಆಶಾವಾದ ಸಮಸ್ತ ಭಾರತೀಯರದು. ನವೆಂಬರ್‌ನಲ್ಲಿ ಯೋಜನೆ ನೆರವೇರುವ ನಿರೀಕ್ಷೆ ಇದೆ.
ಇಸ್ರೋ ಸೌರಮಂಡಲಕ್ಕೆ ಬೆಳಕು ನೀಡುತ್ತಿರುವ ಸೂರ್ಯನ ಬಳಿಗೆ ಅಂತರಿಕ್ಷನೌಕೆಯನ್ನು ಕಳಿಸುವ ಯೋಜನೆ “ಆದಿತ್ಯ ಎಲ್ 1 ಮಿಷನ್’. ಏಪ್ರಿಲ್ ತಿಂಗಳಲ್ಲಿ ಹಾರಿಬಿಡಲಾಗುವುದೆಂದುಕೊಂಡಿರುವ ಈ ಉಪಗ್ರಹ, ಸೂರ್ಯನ ವಾತಾವರಣವನ್ನು ಸಮೀಪದಿಂದ ಅಧ್ಯಯನ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.