ಸಮರ್ಥ ವೇಗಿಗಳು ತಂಡಕ್ಕೆ ಅಗತ್ಯ: ಕುಂಬ್ಳೆ
Team Udayavani, Jan 1, 2020, 1:10 AM IST
ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಪ್ರತಿಯೊಂದು ತಂಡಗಳು ಬಲಿಷ್ಠ ಯೋಜನೆ ರೂಪಿಸಿಕೊಳ್ಳುತ್ತಿದೆ. ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವುದರತ್ತ ಎಲ್ಲ ತಂಡಗಳು ಕಾರ್ಯಮಗ್ನವಾಗಿದೆ. ಟೀಮ್ ಇಂಡಿಯಾ ಸಹ ನೂತನ ತಂಡದ ರಚನೆಯ ಹುಡುಕಾಟದಲ್ಲಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ ಅನಿಲ್ ಕುಂಬ್ಳೆ, ಆಲ್‌ರೌಂಡರ್‌ಗಳಿಗಿಂತ ವಿಕೆಟ್ ಪಡೆ ಯಬಲ್ಲ ವೇಗದ ಬೌಲರ್‌ಗಳು ತಂಡಕ್ಕೆ ಆವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಆಯೋಜನೆಯಾಗಲಿದೆ. ವೇಗಿಗಳಿಗೆ ಹೆಚ್ಚು ಸಹಕಾರಿ ಯಾಗುವ ಆಸೀಸ್ ಪಿಚ್‌ನಲ್ಲಿ ವಿಕೆಟ್ ಉರುಳಿಸಬಲ್ಲ ವೇಗಿಗಳು ಹೆಚ್ಚು ಪ್ರಭಾವಿ ಎನಿಸಿಕೊಳ್ಳುವ ಸಾಧ್ಯತೆಯಿದೆ.
ಇಬ್ಬರು ಸ್ಪಿನ್ನರ್ ತಂಡದಲ್ಲಿರಲಿ
ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ ಅವರಂತಹ ವಿಕೆಟ್ ಪಡೆಯಬಲ್ಲ ಬೌಲರ್‌ಗಳು ತಂಡದಲ್ಲಿರಬೇಕು. ಯಾಕೆಂದರೆ ತೇವಯುಕ್ತವಾದ ಮೈದಾನದಿಂದ ಚೆಂಡು ಒದ್ದೆಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಇಬ್ಬರು ಸ್ಪಿನ್ನರ್‌ಗಳು ತಂಡದಲ್ಲಿರಬೇಕಾಗಿರುವುದು ಅತಿ ಅಗತ್ಯ ಎಂದು ಕುಂಬ್ಳೆ ಹೇಳಿದ್ದಾರೆ.
ವಿಕೆಟ್ ಕಬಳಿಸಬಲ್ಲ ಬೌಲರ್‌ಗಳ ಆಯ್ಕೆಯತ್ತ ಟೀಮ್ ಇಂಡಿಯಾ ಗಮನ ಹರಿಸಿದರೆ ಸೂಕ್ತ. ಉಳಿದಂತೆ ಆಸ್ಟ್ರೇಲಿಯದ ಪರಿಸ್ಥಿತಿಗೆ ಹೊಂದಿಕೊಂಡು ನಿರ್ವಹಣೆ ನೀಡಬಲ್ಲ ಆಟಗಾರರನ್ನು ಗುರುತಿಸಿದರೆ ಬಲಿಷ್ಠ ತಂಡದ ರಚನೆ ಸಾಧ್ಯ ಎಂದು ಕುಂಬ್ಳೆ ಸೂಕ್ತವಾದ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.