ನ್ಯಾಯಾಂಗ ಸೇವೆಗೆ ಕರ್ನಾಟಕ ವಿರೋಧ
Team Udayavani, Jan 1, 2020, 1:50 AM IST
ಹೊಸದಿಲ್ಲಿ: ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕಾತಿ ಮಾದರಿಯಲ್ಲಿ “ಅಖಿಲ ಭಾರತ ನ್ಯಾಯಾಂಗ ಸೇವೆಗಳು (ಎಐಜೆಎಸ್) ಎಂಬ ಹೊಸ ಸೇವಾ ವಲಯದ ಮೂಲಕ ವಿವಿಧ ರಾಜ್ಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳು ತಿರಸ್ಕರಿಸಿವೆ ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಪ್ರಸ್ತಾವನೆ ಬಗ್ಗೆ ಎಲ್ಲ ರಾಜ್ಯ ಸರಕಾರಗಳಿಗೆ, ಹೈಕೋರ್ಟ್‌ಗಳ ಸಲಹೆ, ಅಭಿಪ್ರಾಯಗಳನ್ನು ಕೇಳಲಾಗಿತ್ತು. ರಾಜ್ಯ ಸರಕಾರಗಳ ಪೈಕಿ, ಕರ್ನಾಟಕ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪಂಜಾಬ್ ರಾಜ್ಯಗಳು ಸಮ್ಮತಿ ಸೂಚಿಸಿಲ್ಲ. ಆದರೆ, ಹರ್ಯಾಣ ಮತ್ತು ಮಿಜೋರಂ ಮಾತ್ರ ಇದನ್ನು ಬೆಂಬಲಿಸಿವೆ.
ಬಿಹಾರ, ಚತ್ತೀಸ್‌ಗಢ, ಉತ್ತರಾಖಾಂಡ, ಮಣಿಪುರ ಹಾಗೂ ಒರಿಸ್ಸಾ ಸರಕಾರಗಳು ಎಐಜೆಎಸ್‌ನಲ್ಲಿ ಮೀಸಲಾತಿ ಬೇಕು ಎಂದು ಆಗ್ರಹಿಸಿವೆ. ಗುಜರಾತ್ ಸೇರಿದಂತೆ 13 ರಾಜ್ಯಗಳು
ಅಭಿಪ್ರಾಯ ತಿಳಿಸಿಲ್ಲ.
ಕರ್ನಾಟಕ ಹೈಕೋರ್ಟ್ ಸಹಿತ 11 ಹೈಕೋರ್ಟ್ ಗಳು ಪ್ರಸ್ತಾವನೆ ವಿರೋಧಿಸಿವೆ. 6 ಹೈಕೋರ್ಟ್ ಗಳು ಪ್ರಸ್ತಾವನೆಯಲ್ಲಿ ಕೆಲವು ಬದ ಲಾವಣೆ ಆಗಬೇಕೆಂದು ಹೇಳಿವೆ. ಸಿಕ್ಕಿಂ ಮತ್ತು ತ್ರಿಪುರಾ ಹೈಕೋರ್ಟ್‌ಗಳು ಪ್ರಸ್ತಾವನೆಗೆ ಬೆಂಬಲ ವ್ಯಕ್ತ ಪಡಿಸಿವೆ. ಕೋಲ್ಕತಾ ಹಾಗೂ ಗುವಾಹಟಿ ಹೈಕೋರ್ಟ್ ಗಳು ಸಹಿತ ಆರು ಹೈಕೋರ್ಟ್‌ಗಳು ತಮ್ಮ ಅಭಿಪ್ರಾಯಗಳನ್ನು ಇನ್ನೂ ಸಲ್ಲಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.