ಆಟೋ ಓಡಿಸಿ ಬದುಕು ಕಟ್ಟಿಕೊಂಡ ಪೋಲಿಯೋ ಪೀಡಿತೆಯ ಮಾದರಿ ಜೀವನ..

ಸುಹಾನ್ ಶೇಕ್, Jan 1, 2020, 6:53 PM IST

00

ಕೆಲವೊಂದು ಪರಿಸ್ಥಿತಿಗಳು ನಮ್ಮನ್ನು ಪೂರ್ತಿಯಾಗಿ ಬದಲಾಯಿಸಿ ಬಿಡುತ್ತವೆ. ಸಂಕಷ್ಟಗಳು ಬಂದಾಗ ನಾವು ಕುಗ್ಗದೇ ದಿಟ್ಟರಾಗಿ ನಿಂತರೆ ಅಲ್ಲಿ ನಮ್ಮ ಸಾಮರ್ಥ್ಯವನ್ನು ಮೀರಿದ ಒಬ್ಬ ವ್ಯಕ್ತಿ ಹೊರ ಬರುತ್ತಾನೆ ಅವನೇ/ ಅವಳೇ ಸಾಧಕ ಅಥವಾ ಸಾಧಕಿ.

ಅಹಮದಬಾದ್ ನಲ್ಲಿ ಹುಟ್ಟಿದ ಅಂಕಿತಾ ಶಾ. ಬಾಲ್ಯದಿಂದ ಅಂಟಿಕೊಂಡ ಪೋಲಿಯೋದಿಂದ ತತ್ತರಿಸುತ್ತಾಳೆ. ಅಡ್ಡವಾಗಿ, ಓರೆ ಆಗಿ ಬೆಳೆದ ಕಾಲು, ಹೆಜ್ಜೆಗಳನ್ನು ಸರಿಯಾಗಿ ಇಟ್ಟು ನಡೆಯದ ಪರಿಸ್ಥಿತಿ. ಇಂಥ ಸ್ಥಿತಿಯಲ್ಲಿ ಬಾಲ್ಯ ಕಳೆಯುವ ಅಂಕಿತಾ ಅಂಗಳದಲ್ಲಿ ಆಡುವ ಆಟ, ಗೆಳತಿಯರೊಂದಿಗೆ  ತಿರುಗುವ ದಾಹ, ಅಪ್ಪನೊಂದಿಗೆ ಪೇಟೆಗೆ ಹೋಗುವ ಖುಷಿ ಹೀಗೆ ಎಲ್ಲಾ ಕ್ಷಣಗಳಿಂದ ವಂಚಿತಳಾಗಿ ಪೋಲೀಯೋ ಪಿಡುಗಿನಿಂದ ಒಂದು ಸಂಕೋಲೆಯಲ್ಲಿ ಬಂಧಿಯ ಹಾಗೆ ಇರುತ್ತಾಳೆ.

ಈ ನಡುವೆ ಕಲಿಯುವ ಉಮೇದಿನಿಂದ ಕುಂಟುವ ತನ್ನ ಕಾಲಿನೊಂದಿಗೆ ಶಾಲಾ- ಕಾಲೇಜಿನ ಮೆಟ್ಟಿಲನ್ನು ಹತ್ತುತ್ತಾಳೆ. ದೇಹದ ನೊನ್ಯತೆಯನ್ನು ಮರೆತು, ಅಕ್ಷರಗಳನ್ನು ನಂಟು ಆಗಿಸಿಕೊಂಡು ಕಲಿಯುತ್ತಾಳೆ, ವರ್ಷಗಳು ಕಳೆದಂತೆ ಬೆಳೆಯುತ್ತಾಳೆ. ಕಾಲೇಜು ವ್ಯಾಸಂಗವನ್ನು ಪೂರ್ತಿಗೊಳಿಸಿ ಪದವಿಧಾರೆ ಆಗುತ್ತಾಳೆ.

 ಹೊರೆಯಾಗಿಸಿದ ಕುಟುಂಬದ ಪರಿಸ್ಥಿತಿ :  ಅಂಕಿತಾ ಪದವಿಯನ್ನು ಪೂರ್ತಿಗೊಳಿಸಿ ಕೆಲಸವನ್ನು ಹುಡುಕಲು ಆರಂಭಿಸುತ್ತಾಳೆ. ತನ್ನ ನೂನ್ಯತೆ ಹೆಚ್ಚಾಗಿ ಕಾಡುವುದು ಇದೇ ಸಂದರ್ಭದಲ್ಲಿ. ಎರಡು ಮೂರು ಕಡೆ ಸಂದರ್ಶನವನ್ನು ಕೊಟ್ಟು ಕುಗ್ಗಿದಾಗ ಕೊನೆಗೆ ಒಂದು ಕಡೆ ಸಣ್ಣ ಕೆಲಸ ದೊರೆಯುತ್ತದೆ. ಆದರೆ ಅದೃಷ್ಟ ಅಲ್ಲಿಯೂ ತನ್ನ ಆಟವನ್ನುಆಡುತ್ತದೆ. ಕೆಲವು ಸಮಯದ ಬಳಿಕ ಅಂಕಿತಾಳನ್ನು ಅವಳ ನೂನ್ಯತೆಯ ಕಾರಣದಿಂದ ಕೆಲಸದಿಂದ ವಜಾಗೊಳಿಸುತ್ತಾರೆ.

ಈ ಸಂದರ್ಭದಲ್ಲಿ ಅಂಕಿತಾ ಕುಗ್ಗಿ ಹೋಗುತ್ತಾಳೆ. ಆದರೆ ಸೋಲು ಒಪ್ಪಿಕೊಳ್ಳಲು ಸಿದ್ಧರಾಗಲ್ಲ. ಆದರೆ ಕುಟುಂಬದಲ್ಲಿ ಇದೇ ಸಮಯದಲ್ಲಿ ತಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ . ಇದು ಅಂಕಿತಾಳನ್ನು ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿಸುತ್ತದೆ. ಇದೇ ವೇಳೆಯಲ್ಲಿ ಅಂಕಿತಾ ಒಂದು ಧೃಡ ನಿರ್ಧಾರವನ್ನು ಮಾಡುತ್ತಾಳೆ. ಈ ನಿರ್ಣಯ ಅಂಕಿತಾಳನ್ನು ಸ್ವತಂತ್ರವಾಗಿ ಗಟ್ಟಿಗೊಳಿಸುತ್ತದೆ.

ಆಟೋ ಓಡಿಸಿ ಬದುಕು ಕಟ್ಟಿಕೊಂಡ ದಿಟ್ಟೆ: ಕೆಲಸದಿಂದ ವಜಾ,ಅಪ್ಪನ ಕ್ಯಾನ್ಸರ್  ಈ ಎಲ್ಲಾ ಪರಿಸ್ಥಿತಿಗಳು ಅಂಕಿತಾಳನ್ನು ಗಟ್ಟಿಗೊಳಿಸುತ್ತದೆ. ಸಮಾಜದ ಮುಂದೆ ನಾಲ್ಕು ಜನರೊಂದಿಗೆ ಬೆರೆಯಲು ಆರಂಭಿಸುತ್ತಾಳೆ. ಇಂದು ಅಹಮದಬಾದ್ ನ ನಗರದಲ್ಲಿ ಅಂಕಿತಾ ಅಪ್ಪನ ಚಿಕಿತ್ಸೆಗಾಗಿ, ತನ್ನ ದೇಹ ಸ್ಥಿತಿಯ ಬಗ್ಗೆ ಯೋಚಿಸದೇ ಆಟೋ ಓಡಿಸಿ ಸಾಮಾನ್ಯ ಜನರ ಬಾಳಿನಲ್ಲಿ ಮಾದರಿಯಾಗಿ ನಿಂತಿದ್ದಾಳೆ. ಮಹಿಳೆಯರು ಕ್ರೀಡೆಗಳಲ್ಲಿ ಪದಕ ಗೆಲ್ಲುತ್ತಾರೆ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ, ನಾನು ಆಟೋ ಓಡಿಸುವುದರಲ್ಲಿ ದೊಡ್ಡ ಮಾತು ಏನಿದೆ ಎನ್ನುತ್ತಾರೆ ಅಂಕಿತಾ. ಆಟೋ ಓಡಿಸಿ ಬದುಕು ಕಟ್ಟಿಕೊಂಡ ಪೋಲಿಯೋ ಪೀಡಿತೆಯ ಮಾದರಿ ಜೀವನ..

-ಸುಹಾನ್ ಶೇಕ್

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.