ಹಸೆಮಣೆ ಏರಲು ತಯಾರಾದ ಚೇತನ್
ಅಸ್ಸಾಂ ಹುಡುಗಿಯನ್ನು ವರಿಸಲಿರುವ ನಟ
Team Udayavani, Jan 2, 2020, 7:01 AM IST
ಹೊಸವರ್ಷ ಆರಂಭದಲ್ಲಿಯೇ ಸ್ಯಾಂಡಲ್‌ವುಡ್‌ನ ನಾಯಕ ನಟ, “ಆ ದಿನಗಳು’ ಖ್ಯಾತಿಯ ಚೇತನ್ ಕುಮಾರ್ ಮದುವೆ ಸುದ್ದಿ ಹೊರಬಿದ್ದಿದೆ. ಹೌದು, ಚೇತನ್ ಕುಮಾರ್ ಸದ್ದಿಲ್ಲದೆ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಚೇತನ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಅಂತೆ. ಸುಮಾರು ಎರಡು ವರ್ಷಗಳಿಂದ ಚೇತನ್ ಕುಮಾರ್, ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಇಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಸಮ್ಮತಿ ನೀಡಿದ್ದು, ಇದೇ ಫೆಬ್ರವರಿ ವೇಳೆಗೆ ಮದುವೆ ನಡೆಯಲಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಚೇತನ್, “ಸದ್ಯಕ್ಕೆ ಮದುವೆ ಆಗುತ್ತಿರುವುದು ಮತ್ತು ಮದುವೆಯ ಒಂದಷ್ಟು ತಯಾರಿಗಳು ನಡೆಯುತ್ತಿರುವುದು ನಿಜ. ನಾನು ಸರಳವಾಗಿ ಮದುವೆಯಾಗಬೇಕು ಅನ್ನೋದು ನನ್ನ ಮತ್ತು ಮನೆಯವರ ಆಶಯ. ಅದರಂತೆ ಸರಳವಾಗಿ ವಿವಾಹಕ್ಕೆ ಪ್ಲಾನಿಂಗ್ ಮಾಡಿಕೊಳ್ಳುತ್ತಿದ್ದೇನೆ. ನಾನು ಮದುವೆಯಾಗುತ್ತಿರುವ ಹುಡುಗಿ ಚಿತ್ರರಂಗದವರಲ್ಲ. ಆದಷ್ಟು ಬೇಗ ಆ ಹುಡುಗಿ, ಮದುವೆಯ ಬಗ್ಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ. ಇನ್ನು ಚೇತನ್ ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರಂತೆ.
ಜೊತೆಗೆ ತಾನು ಮದುವೆಯಾಗುತ್ತಿರುವ ಹುಡುಗಿಗೂ ಕನ್ನಡ ಕಲಿಸುತ್ತಿದ್ದಾರಂತೆ. ಒಟ್ಟಾರೆ ಕಳೆದ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಧ್ರುವ ಸರ್ಜಾ, ರಿಷಿ, ಕಿರಣ್, ಹಿತಾ ಚಂದ್ರಶೇಖರ್, ನಿತ್ಯ ರಾಮ್ ಹೀಗೆ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಆರಂಭದಲ್ಲಿಯೇ ಚೇತನ್ ಮದುವೆ ಸುದ್ದಿ ಹೊರಬೀಳುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಾರೆಯರ ವಿವಾಹ ಪ್ರಾರಂಭವಾಗಿದ್ದು, ಇನ್ನು ಯಾವ್ಯಾವ ತಾರೆಯರು ಈ ವರ್ಷ ಹಸೆಮಣೆ ಏರುತ್ತಾರೆ ಅನ್ನೋದು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.