“ಸಮಾನ ಭಾವದಿಂದ ನೋಡುವುದೇ ಹಿಂದೂ ಧರ್ಮದ ಮೂಲ’
ಶಾಖೆಪುರ: 2ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ
Team Udayavani, Jan 1, 2020, 11:11 PM IST
ಉಪ್ಪಿನಂಗಡಿ: ಹಿರೇಬಂಡಾಡಿ-ಕೊಯಿಲ ಶಾಖೆಪುರ ಸಂಜೀವಿನಿ ಮಿತ್ರವೃಂದದ ಆಶ್ರಯದಲ್ಲಿ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಶಾಖೆಪುರ ಮೈದಾನದ ಸಂಜೀವಿನಿ ವೇದಿಕೆಯಲ್ಲಿ ಜರಗಿತು.
ಬೆಳಗ್ಗೆ ಶ್ರೀ ವೆಂಕಟರಮಣ ಕುದ್ರೆತ್ತಾಯ ಗಣಪತಿ ಹೋಮ ನೆರವೇರಿಸಿದರು. ಸಂಜೆ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಕಥಾ ಸಹಿತ ಸತ್ಯನಾರಾಯಣ ಪೂಜೆ ನಡೆಯಿತು. ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸನಾತನ ಹಿಂದೂ ಧರ್ಮವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಧರ್ಮದ ಮರ್ಮವನ್ನು ಅರಿತು ಬಾಳುವುದೇ ನಿಜವಾದ ಹಿಂದೂ ಧರ್ಮ. ಆಧುನಿಕ ಯುಗದಲ್ಲಿ ನಮ್ಮ ಮಕ್ಕಳು ಕೈ ತಪ್ಪುವ ಕಾಲ ಬಂದಿದೆ. ಮಾತೆಯರು ಮಕ್ಕಳಿಗೆ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಗುರು ಹಿರಿಯರಿಗೆ ಗೌರವಿಸುವುದನ್ನು ಕಲಿಸಬೇಕು. ಎಲ್ಲರನ್ನೂ ಸಮಾನ ಭಾವದಿಂದ ನೋಡುವುದೇ ಹಿಂದೂ ಧರ್ಮದ ಮೂಲ ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು. ಒಂದೇ ತಾಯಿಯ ಮಕ್ಕಳಂತೆ ಬಾಳ್ಳೋಣ. ಆ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗೋಣ ಎಂದು ಹೇಳಿದರು.
ಸುಳ್ಯ ಶಾಸಕ ಎಸ್. ಅಂಗಾರ ಮಾತನಾಡಿ, ಭಕ್ತಿಯ ಮೂಲಕ ಆರಾಧನೆ ಮಾಡಿದವರಿಗೆ ದೇವರು ಒಂದಲ್ಲ ಒಂದು ರೀತಿಯಲ್ಲಿ ಅನುಗ್ರಹಿಸುತ್ತಾನೆ. ನಮ್ಮಲ್ಲಿ ನಂಬಿಕೆ, ಭಕ್ತಿ, ವಿಶ್ವಾಸ ಇದ್ದಾಗ ಮುಂದೆ ಬರಲು ಸಾಧ್ಯ. ಎಲ್ಲಿ ಧಾರ್ಮಿಕತೆಯು ನೆಲೆಗೊಳ್ಳುತ್ತಿದೆಯೋ ಅಲ್ಲಿ ಭಯ ಭಕ್ತಿಯ ನೆಲೆಯಿರುತ್ತದೆ ಎಂದರು.
ಧಾರ್ಮಿಕ ಹಾಗೂ ಸಾಮಾಜಿಕ ನೇತಾರ ಕುಂಟಾರು ರವೀಶ ತಂತ್ರಿ ಮಾತನಾಡಿ, ಸನಾತನ ಹಿಂದೂ ಧರ್ಮಕ್ಕೆ ಅದರದ್ದೇ ಆದ ಗೌರವ ಇದೆ. ನಮ್ಮ ಸ್ವಾರ್ಥ ಚಿಂತನೆಯನ್ನು ಬಿಟ್ಟು ಮುನ್ನಡೆದಾಗ ಸಮಾಜ ಮೇಲೇರಲು ಸಾಧ್ಯವಾಗುತ್ತದೆ. ಶ್ರೀರಾಮನ ಆದರ್ಶವೇ ನಮಗೆಲ್ಲರಿಗೂ ದಾರಿದೀಪ. ಆತನ ಆದರ್ಶ ಜೀವನವನ್ನು ನಾವೆಲ್ಲರೂ ಪಾಲಿಸೋಣ ಎಂದರು.
ನಿವೃತ್ತ ಸೈನಿಕ ಚೆನ್ನಪ್ಪ ಗೌಡ ಬೆಂಗದಪಡು³ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಅಶೋಕ್ ಮಾಳ ಸ್ವಾಗತಿಸಿದರು. ಸೋಮೇಶ್ ಕೇಪುಳು ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿಯವರಿಂದ “ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.
ಟೆಂಡರ್ ಪ್ರಕ್ರಿಯೆಯಲ್ಲಿದೆ
ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯ ನಿನ್ನಿಕಲ್ಲಿಂದ ನೆಹರೂತೋಟ ತನಕ ರಸ್ತೆ ಐದೂವರೆ ಮೀ. ಅಗಲ, ಮರು ಡಾಮರು ಕಾಮಗಾರಿಗೆ 3.50 ಕೋಟಿ ರೂ.ಅನುದಾನ ಮಂಜೂರುಗೊಂಡಿದೆ. ಟೆಂಡರ್ ಆದ ತತ್‌ಕ್ಷಣ ಕಾಮಗಾರಿ ಆರಂಭಿ ಸಲಾಗುವುದು.
– ಸಂಜೀವ ಮಠಂದೂರು, ಶಾಸಕ, ಪುತ್ತೂರು
ಅನುದಾನ ಮಂಜೂರು
ಕೊçಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿಂದ ನೆಹರೂತೋಟ ಸಂಪರ್ಕಿಸುವ ರಸ್ತೆ ವಿಸ್ತೀರ್ಣ ಹಾಗೂ ಮರು ಡಾಮರು ಕಾಮಗಾರಿಗೆ 1.25 ಕೋಟಿ ರೂ. ಹಾಗೂ ಹಿರೇಬಂಡಾಡಿ ಗ್ರಾಮದ ನೆಹರೂತೋಟದಿಂದ ವಳಕಡಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 80 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು ಶೀಘ್ರ ಕೆಲಸ ಪ್ರಾರಂಭಗೊಳ್ಳಲಿದೆ.
– ಎಸ್.ಅಂಗಾರ, ಶಾಸಕ, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.