ಮನೆ ಬಾಗಿಲಿಗೆ ಬರಲಿದೆ ಡೀಸೆಲ್ ಬಂಕ್!
ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಿದರೆ ಸ್ಥಳಕ್ಕೆ ಇಂಧನ ಪೂರೈಕೆ
Team Udayavani, Jan 2, 2020, 6:30 AM IST
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಬುಧವಾರದಿಂದ ಮನೆ ಮನೆಗೆ ಡೀಸೆಲ್ ವಿತರಣೆ ಸೇವೆ ಆರಂಭವಾಗಿದೆ.
ಹಾಸನ: ಗ್ರಾಮೀಣ ಭಾಗಗಳಿಗೂ ಸುಲಭವಾಗಿ ಇಂಧನ ಪೂರೈಕೆಯಾಗಬೇಕೆಂಬ ಕೇಂದ್ರ ಸರಕಾರದ ಮಹತ್ವದ ಯೋಜನೆ ಸಂಚಾರಿ ಡೀಸೆಲ್ ಬಂಕ್‌ಗಳಿಗೆ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಬುಧವಾರ ಎರಡು ಸಂಚಾರಿ ಬಂಕ್‌ಗಳು ಆರಂಭವಾಗಿವೆ. ಬೆಂಗಳೂರಿನಲ್ಲಿ ಒಂದು ಸಂಚಾರಿ ಬಂಕ್ ಆರಂಭವಾಗಿದ್ದರೆ, ಮತ್ತೂಂದು ಚನ್ನರಾಯಪಟ್ಟಣ ತಾಲೂಕಿನಲ್ಲಿ ಆರಂಭವಾಗಿದೆ. ಗ್ರಾಹಕರು ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಿದರೆ ಸ್ಥಳಕ್ಕೆ 6 ಸಾವಿರ ಲೀ. ಸಾಮರ್ಥ್ಯದ ಡೀಸೆಲ್ ಟ್ಯಾಂಕರ್ ಬರಲಿದೆ. ಇದರಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿರುವಂತೆ ಡೀಸೆಲ್ ಹಾಕುವ ಗನ್ ಮತ್ತು ಡೀಸೆಲ್‌ನ ಪ್ರಮಾಣ ಮತ್ತು ದರದ ಮಾಹಿತಿಯ ಫಲಕಗಳು ಇರಲಿವೆ. ಇದಷ್ಟೇ ಅಲ್ಲ, ಅಗ್ನಿ ಅನಾಹುತ ತಡೆಗಟ್ಟುವ ಸಾಧನಗಳೂ ಇರಲಿವೆ.
ಯೋಜನೆಯ ಉದ್ದೇಶ?
ಗ್ರಾಮೀಣ ಭಾಗದಲ್ಲಿ ಕಾಮಗಾರಿ ಗಳು ನಡೆಯುವ ಪ್ರದೇಶದಲ್ಲಿ ಬೃಹತ್ ಯಂತ್ರಗಳಿಗೆ ಹಾಗೂ ಕೃಷಿ ಚಟು ವಟಿಕೆಗಳಿಗೆ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ. ಗ್ರಾಮೀಣ ಭಾಗದಲ್ಲಿರುವ ಯಂತ್ರೋಪ ಕರಣಗಳಿಗೆ ಇಂಧನದ ಕೊರತೆಯಾಗ ಬಾರ ದೆಂದು ಕೇಂದ್ರ ಸರಕಾರ ಈ ಯೋಜನೆ ಜಾರಿಗೆ ತಂದಿದೆ ಎನ್ನುತ್ತಾರೆ ಚನ್ನರಾಯ ಪಟ್ಟಣ ತಾಲೂಕಿನಲ್ಲಿ ಸಂಚಾರಿ ಡೀಸೆಲ್ ಬಂಕ್ ಲೈಸೆನ್ಸ್ ಪಡೆದು ಕೊಂಡಿರುವ ಹಿರೀಸಾವೆಯ ಕಾಂತರಾಜು ಅವರು.
ಹೇಗೆ ಬುಕ್ಕಿಂಗ್?
ಗ್ರಾಹಕರು ಮೊಬೈಲ್‌ನಲ್ಲಿ ಕರೆ ಮಾಡಿ ಅಥವಾ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಡೀಸೆಲ್ ಪ್ರಮಾಣ ತಿಳಿಸಿದರೆ ಆ ನಂಬರ್‌ಗೆ ಒಟಿಪಿ ದಾಖ ಲಾಗುತ್ತದೆ. ಅದನ್ನು ಆಧರಿಸಿ ಟ್ಯಾಂಕರ್ ಸ್ಥಳಕ್ಕೆ ಹೋಗಿ ಡೀಸೆಲ್ ಪೂರೈಕೆ ಮಾಡುತ್ತದೆ.
ಗ್ರಾಹಕರು ಕನಿಷ್ಠ 100 ಲೀಟರ್ ಡೀಸೆಲ್‌ಗೆ ಬೇಡಿಕೆ ಸಲ್ಲಿಸಿದರೆ ಕೋರಿದ ಸ್ಥಳಕ್ಕೆ ಹೋಗಿ ಡೀಸೆಲ್ ಪೂರೈಕೆ ಮಾಡುತ್ತೇವೆ. ದೇಶದಲ್ಲಿ 100, ರಾಜ್ಯದಲ್ಲಿ ಎರಡು ಬಂಕ್‌ಗಳಿಗೆ ಮಾತ್ರ ಈಗ ಅನುಮತಿ ದೊರೆತಿದೆ. 100 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಡೀಸೆಲ್ ಪೂರೈಕೆ ಮಾಡುತ್ತೇವೆ. ಭಾರತ್ ಪೆಟ್ರೋಲಿಯಂ ಕಂಪೆನಿ ವಿಶೇಷವಾದ ಟ್ಯಾಂಕರ್‌ನ್ನು ಒದಗಿಸಿದೆ. ಪ್ರಾರಂಭದಲ್ಲಿ ಡೀಸೆಲ್ ಪೂರೈಕೆಗೆ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಪೂರೈಕೆಗೂ ಅನುಮತಿ ಸಿಗಬಹುದು ಎನ್ನುತ್ತಾರೆ ಅವರು.
ಗ್ರಾಮೀಣ ಭಾಗದಲ್ಲಿ ಬೃಹತ್ ಪ್ರಮಾಣದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಯಂತ್ರೋಪಕರಣ ಗಳಿಗೆ ಸಂಚಾರಿ ಡೀಸೆಲ್ ಬಂಕ್‌ಗಳು ಸ್ಥಳಕ್ಕೆ ಹೋಗಿ ಡೀಸೆಲ್ ಪೂರೈಸುವುದರಿಂದ ವೆಚ್ಚ ಕಡಿಮೆಯಾಗುತ್ತದೆ.
– ಕಾಂತರಾಜು, ಸಂಚಾರಿ ಡೀಸೆಲ್ ಬಂಕ್ ಮಾಲಕ
- ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.