ಉಚಿತ ಜ್ಯೋತಿಷ್ಯ ಶಿಬಿರಕೆ ಚಾಲನೆ
Team Udayavani, Jan 2, 2020, 11:06 AM IST
ಹುಬ್ಬಳ್ಳಿ: ಜ್ಯೋತಿಷ್ಯದ ಕುರಿತು ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡಿರುವುದರಿಂದ ಕೆಲವರು ಇದನ್ನು ಹಣ ಮಾಡಿಕೊಳ್ಳುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸುರೇಶ ಜೈನ್ ಹೇಳಿದರು.
ಇಲ್ಲಿನ ವಿಶ್ವೇಶ್ವರ ನಗರದ ವರದಿಸಿದ್ಧ ವಿನಾಯಕ ಮಂದಿರದಲ್ಲಿ ಶ್ರೀ ಪರಮಾತ್ಮ ಮಹಾಸಂಸ್ಥಾನದಿಂದ ಜ.1ರಿಂದ ಫೆಬ್ರವರಿ 1ರ ವರೆಗೆ ಆಯೋಜಿಸಿರುವ ಉಚಿತ ಜ್ಯೋತಿಷ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಋಷಿಮುನಿಗಳು ನೀಡಿದ ಜ್ಯೋತಿಷ್ಯ ಶಾಸ್ತ್ರ ಇಂದು ದೇಶ-ವಿದೇಶಗಳಲ್ಲಿ ನಂಬುಗೆಗೆ ಅರ್ಹವಾಗಿದೆ. ಸಂಕಷ್ಟ ನಿವಾರಣೆ ಮತ್ತು ಮುಂದಾಗುವ ಗಂಡಾಂತರಗಳನ್ನು ತಪ್ಪಿಸಲು ಹಾಗೂ ಅದಕ್ಕೆ ಸೂಕ್ತ ಮತ್ತು ಸರಳ ಪರಿಹಾರಗಳನ್ನು ಪಡೆಯಲು ಜ್ಯೋತಿಷ್ಯಶಾಸ್ತ್ರ ದಾರಿದೀಪವಾದ ಅನೇಕ ಉದಾಹರಣೆಗಳಿವೆ. ನಂಬಿಕೆಗೆ ಅರ್ಹವಾದ ಭಾರತೀಯ ಜ್ಯೋತಿಷ್ಯಶಾಸ್ತ್ರದ ಸದುಪಯೋಗ ಪಡೆದುಕೊಳ್ಳಬೇಕು. ಜ್ಯೋತಿಷ್ಯ ಹಣ ಮಾಡುವ ಸಾಧನವಾಗಬಾರದು ಎಂದು ಹೇಳಿದರು.
ಶ್ರೀ ಪರಮಾತ್ಮಾಜಿ ಮಹಾರಾಜ ಸಾನ್ನಿಧ್ಯ ವಹಿಸಿ, ಜ್ಯೋತಿಷ್ಯಕ್ಕಾಗಿ ಸಾವಿರಾರು ರೂಪಾಯಿ ಹಣಕೊಟ್ಟು ಜನರು ಜ್ಯೋತಿಷಿಗಳನ್ನು ಭೇಟಿಯಾಗಬೇಕಾದ ಇಂದಿನ ದಿನದಲ್ಲಿ, ಉಚಿತವಾಗಿ ಜ್ಯೋತಿಷ್ಯವನ್ನು ಹೇಳುವ ವ್ಯವಸ್ಥೆಯನ್ನು ಮಾಡಿ, ಜನಸಾಮಾನ್ಯರಿಗೆ ಉಪಯುಕ್ತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಮಕೃಷ್ಣ ಹೆಗಡೆ, ಸಿ.ಸಿ ದೀಕ್ಷಿತ್, ಭಾರತಿ ಪಾಟಿಲ, ಜಿ. ಮಂಗಳಮೂರ್ತಿ, ವಸಂತ ಕೇಣಿ, ರಮೇಶ ಕುಲಕರ್ಣಿ, ರಾಮಭದ್ರನ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.