ಶಿಷ್ಟಾಚಾರ ಉಲ್ಲಂಘಿಸಿದರೆ ಮುಖ್ಯಸ್ಥರೇ ಹೊಣೆ

Team Udayavani, Jan 2, 2020, 2:55 PM IST

HV-TDY-2

ಹಾವೇರಿ: ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಸಭೆ-ಸಮಾರಂಭಗಳಿಗೆ ಶಿಷ್ಟಾಚಾರ ಪಾಲಿಸಬೇಕು. ಶಿಷ್ಟಾಚಾರ ಉಲ್ಲಂಘನೆಯಾದರೆ ಆಯಾ ಇಲಾಖಾ ಮುಖ್ಯಸ್ಥರೇ ಹೊಣೆಯಾಗಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಎನ್‌.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಇಲಾಖೆಯ ಸಭೆ-ಸಮಾರಂಭಗಳನ್ನು ಆಯೋಜಿಸುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಸಚಿವರು, ಶಾಸಕರೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ನಿಗಪಡಿಸಬೇಕು. ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಮುನ್ನ ಕನಿಷ್ಟ ಏಳು ದಿವಸ ಸಮಯಾವಕಾಶಗಳನ್ನು ಪಡೆಯಬೇಕು. ಇಲಾಖೆ ಮುಖ್ಯಸ್ಥರೇ ಶಿಷ್ಟಾಚಾರದ ಮಾರ್ಗಸೂಚಿ ಅನುಸಾರ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಬೇಕು. ಸಂಬಂಧಿಸಿದ ಜನಪ್ರತಿನಿಧಿ ಗಳಿಗೆ ಕಾರ್ಯಕ್ರಮದ ಮುಂಚಿತವಾಗಿ ನೀಡಬೇಕು. ತರಾತುರಿ ಒತ್ತಡದಲ್ಲಿ ನಿಗತ ಕಾಲಾವಕಾಶವಿಲ್ಲದೆ ಶಿಷ್ಟಾಚಾರದಲ್ಲಿ ಒಳಪಡುವ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಕಾರ್ಯಕ್ರಮ ನಿಗದಿಪಡಿಸಬಾರದು ಎಂದು ತಿಳಿಸಿದರು.

ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮವನ್ನು ಖಾಸಗಿ ನಿವಾಸದಲ್ಲಿ ಆಯೋಜಿಸುವಂತಿಲ್ಲ. ಆಯಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯಾ ಕ್ಷೇತ್ರದ ಶಾಸಕರೇ ವಹಿಸಬೇಕು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಿಸುವ ಏಳು ದಿವಸಗಳ ಮುನ್ನ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಅನುಮೋದನೆ ಪಡೆಯಬೇಕು. ವೇದಿಕೆ ಮೇಲೆ ಆನಸ ವ್ಯವಸ್ಥೆ ಮಾಡುವಾಗ ಮಾರ್ಗಸೂಚಿ ಅನುಸಾರವೇ ಆಸನ ವ್ಯವಸ್ಥೆ ಮಾಡಬೇಕು. ಶೀಲಾನ್ಯಾಸ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ ಅದೇ ಆದ್ಯತೆಯಲ್ಲಿ ಮುದ್ರಿಸಬೇಕು ಎಂದು ಸೂಚಿಸಿದರು.

ಯಾವುದೇ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಸರ್ಕಾರಿ ಅಧಿಕಾರಿಗಳು ಮಾಡುವಂತಿಲ್ಲ. ಅನಿವಾರ್ಯ ಸಂದರ್ಭ ಎದುರಾದಾಗ ಆಮಂತ್ರಿಸಿದ ಜನಪ್ರತಿನಿಧಿ ಗಳು ಭಾಗವಹಿಸದೇ ಇದ್ದಾಗ ಮಾತ್ರ ಅಭಿವೃದ್ಧಿ ಕಾಮಗಾರಿ ಹೊರತಾಗಿ ಜಯಂತಿ, ಉತ್ಸವ, ಅರಿವಿನ ಕಾರ್ಯಕ್ರಮಗಳನ್ನು ಮಾತ್ರ ಉದ್ಘಾಟಿಸಬಹುದು. ವಿರೋಧಪಕ್ಷದ ನಾಯಕರಿಗೂ ಸಹ ಅಧಿಕಾರಿಗಳ ಸಭೆ ಕರೆಯಲು ಅವಕಾಶವಿರುವುದಿಲ್ಲ. ಆದರೆ, ಅಗತ್ಯ ಮಾಹಿತಿಯನ್ನು ಕೇಳಿದಾಗ ಸೂಕ್ತವಾಗಿ ನೀಡಬಹುದು. ಸರ್ಕಾರಿ ಆದೇಶಗಳಲ್ಲಿ ಶಾಸಕರು, ಖಾಸಗಿ ಪ್ರಮುಖರ ಅಧ್ಯಕ್ಷತೆಯಲ್ಲಿ ಹಲವು ಸಮಿತಿಗಳನ್ನು ನೇಮಕ ಮಾಡಲಾಗಿದೆ. ಆಯಾ ಸಮಿತಿಯ ಕಾರ್ಯವ್ಯಾಪ್ತಿಗೆ ಒಳಪಟ್ಟು ಸಮೀಕ್ಷಣಾ ಸಭೆಗಳನ್ನು ನಡೆಸಬಹುದು ಎಂದು ತಿಳಿಸುತ್ತ ಸರ್ಕಾರದ ಸಭೆ-ಸಮಾರಂಭಗಳ ಆಯೋಜನೆಯ ಶಿಷ್ಟಚಾರದ ಮಾಹಿತಿಯನ್ನು ವಿವರವಾಗಿ ತಿಳಿಸಿದರು.

ಆಯಾ ಇಲಾಖಾ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿದಾಗ ಆಯಾ ಇಲಾಖಾ ಅಧಿಕಾರಿಗಳೇ ಶಿಷ್ಟಾಚಾರದ ಪ್ರಕಾರ ಆತಿಥ್ಯವನ್ನು ವಹಿಸಿಕೊಳ್ಳಬೇಕು. ಕೇವಲ ಕಂದಾಯ ಇಲಾಖೆಗೆ ಮಾತ್ರ ಶಿಷ್ಟಚಾರಪಾಲನೆ ಜವಾಬ್ದಾರಿ ಎಂಬ ಮನೋಭಾವ ಬೇಡ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು.

ಟಾಪ್ ನ್ಯೂಸ್

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

By election; ಶಿಗ್ಗಾವಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ

Havery ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

Haveri: ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

4

Savanur: ಮನೆಯವರು ಟ್ರಿಪ್‌ ಹೋದ ಸಂದರ್ಭದಲ್ಲಿ ಮನೆಯಿಂದ ಕಳ್ಳತನ

ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯ-ಡಾ|ವಿಜಯಮಹಾಂತೇಶ

ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯ-ಡಾ|ವಿಜಯಮಹಾಂತೇಶ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.