ಇಂದಿನಿಂದ ಹೊಸಬರ ವೇಷ

ಅರಿಷಡ್ವರ್ಗಗಳ ಸುತ್ತ ಸಿನಿಮಾ

Team Udayavani, Jan 3, 2020, 4:43 AM IST

15

ಹೊಸಬರ ತಂಡವೊಂದು ಸದ್ದಿಲ್ಲದೇ ಸಿನಿಮಾ ಮಾಡಿ ಮುಗಿಸಿದೆ. ಅದು “ವೇಷಧಾರಿ’. ಹೀಗೊಂದು ಶೀರ್ಷಿಕೆ ಇರುವ ಸಿನಿಮಾ ಆರಂಭವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಇಂದು (ಜ.03) ರಂದು ತೆರೆಕಾಣುತ್ತಿದೆ. ಅರಿಷಡ್ವರ್ಗಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಮನುಷ್ಯನಿಗೆ ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲುವ ತಾಕತ್ತು ಇದೆಯಾ, ಒಂದು ವೇಳೆ ನಿಲ್ಲಬಹುದಾದರೆ ಅದು ಹೇಗೆ ಎಂಬ ಅಂಶದ ಜೊತೆಗೆ ಮನುಷ್ಯ ಬಯಸಿದ್ದೆಲ್ಲವೂ ಸುಲಭವಾಗಿ ಸಿಕ್ಕಿದರೆ ಅವನು ಏನು ಮಾಡಬಹುದು ಎಂಬ ಅಂಶವನ್ನು ಸೇರಿಸಿ ಈ ಸಿನಿಮಾ ಮಾಡಲಾಗಿದೆಯಂತೆ. ಶಿವಾನಂದ.ಬಿ.ಭೂಷಿ ರಚನೆ, ಚಿತ್ರಕತೆ ಸಂಭಾಷಣೆ, ಸಾಹಿತ್ಯ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾಮಾಜಿಕ ವಿಡಂಬನೆ ಮಾಡಲಾಗಿದೆಯಂತೆ. ಹುಡುಗನೊಬ್ಬ ತನ್ನ ಆಸೆಯನ್ನು ತೀರಿಸಿಕೊಳ್ಳಲು ನಾನಾ ವೇಷಗಳನ್ನು ಹಾಕುತ್ತಾನೆ. ಆದರೆ ಏನೇ ಮಾಡಿದರೂ ಆತನ ಆಸೆ ಈಡೇರುವುದಿಲ್ಲ. ಕೊನೆಗೆ ಜಿಗುಪ್ಸೆ ಹೊಂದಿ ಎಲ್ಲವನ್ನು ತ್ಯಜಿಸಲು ಮುಂದಾಗುತ್ತಾನೆ. ಈ ವೇಳೆ ಒಂದು ಘಟನೆ ನಡೆಯುತ್ತದೆ. ಆ ನಂತರ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ.

ಚಿತ್ರದಲ್ಲಿ ಆರ್ಯನ್‌ ನಾಯಕರಾಗಿ ನಟಿಸಿದ್ದಾರೆ. ಹಳ್ಳಿ ಹುಡುಗನಾಗಿ ಆಸೆಗಳ ಹಿಂದೆ ಬಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಎಂಬ ಪಾತ್ರ ಸಿಕ್ಕಿದೆಯಂತೆ. ಶೃತಿ ರಾಜೇಂದ್ರ ಹಳ್ಳಿ ಹುಡುಗಿಯಾಗಿ ನಟಿಸಿದರೆ, ಶಾಸಕರ ಮಗಳಾಗಿ ದರ್ಪ ತೋರಿಸುವ ಪಾತ್ರದಲ್ಲಿ ಸೋನಂ ರೈ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿರಾದಾರ್‌, ಮೈಕೆಲ್‌ ಮಧು, ಮೋಹನ್‌ ಜುನೇಜ, ಮಿಮಿಕ್ರಿ ಗೋಪಿ, ಕುರಿರಂಗ ನಟಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಹೊಸಕೋಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ, ಬೆಳಗಾವಿ, ಹುಕ್ಕೇರಿ, ಗೋಕಾಕ್‌, ಚಿಕ್ಕಮಗಳೂರು ಹಾಗೂ ಬಂಡಿಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್‌.ಎನ್‌.ವೀರಣ್ಣ, ಅನಿಲ್‌.ಹೆಚ್‌.ಅಂಬಿ ಮತ್ತು ಹೆಚ್‌.ಕೆ.ಫ್ರೆಂಡ್ಸ್‌ ಸಹಯೋಗದಲ್ಲಿ ಶ್ರೀ ಸಾಯಿಭಗವಾನ್‌ ಕಂಬೈನ್ಸ್‌ನಡಿ ಈ ಚಿತ್ರ ತಯಾರಾಗಿದೆ.

ಟಾಪ್ ನ್ಯೂಸ್

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.