ರಾಜ್ಯದ ಅರಣ್ಯ ಪ್ರದೇಶ ವಿಸ್ತಾರ; ಕರಾವಳಿಯಲ್ಲಿಯೂ ಹೆಚ್ಚಳ
ಭಾರತೀಯ ಅರಣ್ಯ ಸರ್ವೇ ವರದಿಯಲ್ಲಿ ಉಲ್ಲೇಖ; ಫಲ ನೀಡಿದ ಜನಜಾಗೃತಿ, ಅರಣ್ಯ ಇಲಾಖೆ ಯೋಜನೆಗಳು
Team Udayavani, Jan 3, 2020, 8:15 AM IST
ಮಂಗಳೂರು: ರಾಜ್ಯದ ಅರಣ್ಯ ಪ್ರದೇಶ ಕಳೆದೆರಡು ವರ್ಷದಲ್ಲಿ ಹೆಚ್ಚಳವಾಗಿರುವ ಬಗ್ಗೆ ಭಾರತೀಯ ಅರಣ್ಯ ಸರ್ವೇ (ಎಫ್‌ಎಸ್‌ಐ) ತನ್ನ ವರದಿಯಲ್ಲಿ ಉಲ್ಲೇಖೀಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ.
ಎಫ್‌ಎಸ್‌ಐ ವರದಿ ಪ್ರಕಾರ, ದ.ಕ. ಜಿಲ್ಲೆಯಲ್ಲಿ 140 ಚ.ಕಿ.ಮೀ. ಮತ್ತು ಉಡುಪಿಯಲ್ಲಿ 145 ಚ.ಕಿ.ಮೀ.ನಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ದ.ಕ. ಜಿಲ್ಲೆ ಒಳಗೊಂಡ ಮಂಗಳೂರು ಅರಣ್ಯ ವಿಭಾಗ ಮತ್ತು ಉಡುಪಿ ಜಿಲ್ಲೆ ಒಳಗೊಂಡ ಕುಂದಾಪುರ ವಿಭಾಗದ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ಈ ಹೆಚ್ಚಳ ಕಂಡುಬಂದಿದೆ.
“ಭಾರತೀಯ ಅರಣ್ಯ ಸರ್ವೇ’ಯು ಉಪಗ್ರಹ ಮಾಹಿತಿ ಮತ್ತು ವಿವಿಧ ಮೂಲಗಳ ಆಧಾರದಲ್ಲಿ ಕರಾವಳಿಯ ವಿವಿಧ “ಅರಣ್ಯಾಚ್ಛಾದಿತ’ ಮತ್ತು “ವೃಕ್ಷಾಚ್ಛಾದಿತ’ ಪ್ರದೇಶ ಅಧ್ಯಯನ ಕೈಗೊಂಡಿತ್ತು. ವರದಿಯನ್ನು ಕಳೆದ ಸೋಮವಾರ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕರಾವಳಿಯ ಯಾವ ನಿರ್ದಿಷ್ಟ ಭಾಗದಲ್ಲಿ ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ ಎಂಬ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.
ಶಾಲೆ, ಕಾಲೇಜು, ಪರಿಸರ ಪ್ರಿಯ ಸಂಘಟನೆ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕೈಗೊಂಡ ಗಿಡ ನೆಡುವ ಮತ್ತು ಮರ ಉಳಿಸುವ ಯೋಜನೆಗಳು ಅರಣ್ಯ ಪ್ರದೇಶ ವಿಸ್ತರಣೆಗೆ ಸಹಕಾರಿಯಾಗಿವೆ. ಜತೆಗೆ, ಅರಣ್ಯ ಇಲಾಖೆಯು ಶಾಲೆಗೊಂದು ವನ, ಸಿರಿಚಂದನ ವನ, ಹಸಿರು ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಗಿಡ ನೆಡುವ ಕಾರ್ಯಗಳಿಗೆ ಪ್ರೋತ್ಸಾಹ ನೀಡಿರುವುದೂ ಫಲ ನೀಡಿದೆ.
ಅರಣ್ಯ ಪ್ರದೇಶ ಕಡಿಮೆಯಾಗು ತ್ತಿದ್ದು, ಹವಾಮಾನ ವೈಪರೀತ್ಯ, ವಾಯು ಮಾಲಿನ್ಯ ಸೇರಿದಂತೆ ಹಲವು ವಿಕೋಪಗಳು ಸಂಭವಿಸುತ್ತಿರುವ ಈ ಕಾಲದಲ್ಲಿ ಮರಗಿಡಗಳೇ ಆಧಾರ ಎಂಬ ಜಾಗೃತಿ ಉಂಟಾಗಲಾರಂಭಿಸಿದೆ. ಜನರು ಮುತುವರ್ಜಿ ವಹಿಸಿರುವುದ ರಿಂದಲೂ ಅರಣ್ಯ ವಿಸ್ತರಿಸಲು ಸಾಧ್ಯ ವಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಗಿಡ ನೆಡಲು ಹೆಚ್ಚು ಒತ್ತು
ಇಲಾಖೆ ವತಿಯಿಂದ ಮಂಗಳೂರು ಅರಣ್ಯ ವಿಭಾಗದಲ್ಲಿ 2019ರಲ್ಲಿ 935.11 ಹೆಕ್ಟೇರ್ ಪ್ರದೇಶದಲ್ಲಿ 5.51 ಲಕ್ಷ ಗಿಡಗಳನ್ನು ನೆಡಲಾಗಿದೆ. 3.52 ಲಕ್ಷ ಸಸಿಗಳನ್ನು ಅರಣ್ಯ ಇಲಾಖೆಯಿಂದ ವಿತರಿಸಲಾಗಿದೆ. 2020ರಲ್ಲಿ 1,396 ಹೆಕ್ಟೇರ್ ಪ್ರದೇಶದಲ್ಲಿ 6.86 ಲಕ್ಷ ಸಸಿ ವಿತರಿಸುವ ಯೋಜನೆ ಹಾಕಲಾಗಿದೆ. ಉಡುಪಿ ಜಿಲ್ಲೆ ಒಳಗೊಂಡ ಕುಂದಾಪುರ ವಿಭಾಗದಲ್ಲಿ 2019ರಲ್ಲಿ 1,137.35 ಹೆಕ್ಟೇರ್ ಪ್ರದೇಶದಲ್ಲಿ 9.92 ಲಕ್ಷ ಗಿಡಗಳನ್ನು ನೆಡಲಾಗಿದೆ. 2.76 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. 2020ರಲ್ಲಿ 1,604 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೆಡುತೋಪುಗಾಗಿ ಮುಂಗಡ ಕಾಮಗಾರಿ ಯೋಜಿಸಲಾ ಗಿದೆ. 10.93 ಲಕ್ಷ ಸಸಿ ವಿತರಿಸಲು ಉದ್ದೇಶಿಸಲಾಗಿದೆ.
ದೇಶದ ಅರಣ್ಯಾಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಹೆಚ್ಚಳವಾದ ಬಗ್ಗೆ ಭಾರತೀಯ ಅರಣ್ಯ ಸರ್ವೆ ತನ್ನ ವರದಿಯಲ್ಲಿ ಉಲ್ಲೇಖೀಸಿದ್ದು, ಮಂಗಳೂರು ಅರಣ್ಯ ವಿಭಾಗ ವ್ಯಾಪ್ತಿಯ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಿಡಮರಗಳ ಬಗ್ಗೆ ವಿಶೇಷ ಕಾಳಜಿ, ಒತ್ತು ನೀಡಿರುವುದರಿಂದ ಅರಣ್ಯ ಪ್ರದೇಶದಲ್ಲಿ ಏರಿಕೆಯಾಗಿದೆ.
– ಡಾ| ವಿ. ಕರಿಕಲನ್, ಉಪಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ
ದೇಶದ ಅರಣ್ಯಾಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಹೆಚ್ಚಳವಾದ ಬಗ್ಗೆ ಭಾರತೀಯ ಅರಣ್ಯ ಸರ್ವೆ ತನ್ನ ವರದಿಯಲ್ಲಿ ಉಲ್ಲೇಖೀಸಿದ್ದು, ಮಂಗಳೂರು ಅರಣ್ಯ ವಿಭಾಗ ವ್ಯಾಪ್ತಿಯ ಇಲಾಖೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಿಡಮರಗಳ ಬಗ್ಗೆ ವಿಶೇಷ ಕಾಳಜಿ, ಒತ್ತು ನೀಡಿರುವುದರಿಂದ ಅರಣ್ಯ ಪ್ರದೇಶದಲ್ಲಿ ಏರಿಕೆಯಾಗಿದೆ.
– ಡಾ| ವಿ. ಕರಿಕಲನ್, ಉಪಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.