ಗತ ವೈಭವ ನೆನಪಿಸಿದ ವಜ್ರದ ಮೂಂಕುತ್ತಿ

Team Udayavani, Jan 3, 2020, 1:10 AM IST

56

ಹಿಂದೆಲ್ಲಾ ಕರಾವಳಿಯಲ್ಲಿ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ಊರ ಜಾತ್ರೆ ಉತ್ಸವಗಳ ಸಂದರ್ಭದಲ್ಲೆಲ್ಲ ಸ್ಥಳೀಯ ಯುವಕರು ಸೇರಿ ಅಭಿನಯಿಸುವ ನಾಟಕಗಳನ್ನು ಕಾಣಬಹುದಿತ್ತು. ಸಂಸಾರ ಧರ್ಮ, ಅತ್ತೆ ಸೊಸೆ, ಅಣ್ಣ ತಂಗಿ, ಕರುಳಬಳ್ಳಿಯ ಅಗಾಧತೆಯನ್ನೂ, ಸಾಮಾಜಿಕ ನ್ಯಾಯ ಮೌಲ್ಯಪ್ರಜ್ಞೆಯನ್ನೂ ಸತ್ವಪೂರ್ಣವಾಗಿ ಮನವರಿಕೆ ಮಾಡುವ ನೂರಾರು ನಾಟಕಗಳು ಪ್ರದರ್ಶನಗೊಳ್ಳುತಿದ್ದವು. ಈ ನಾಟಕಗಳ ಮೂಲಕ ಅನೇಕ ನಾಟಕ ರಚನೆಕಾರರು, ಹಿನ್ನೆಲೆ ಸಂಗೀತ ಕಲಾವಿದರು, ರಂಗಸಜ್ಜಿಕೆ ಕಲಾವಿದರು ಹೆಸರುವಾಸಿಯಾಗಿದ್ದರು. ಸ್ಥಳೀಯ ಪ್ರತಿಭೆಗಳ ಅಭಿನಯದ ಬಗ್ಗೆ ಗದ್ದೆ, ತೋಟ, ಹೋಟೆಲ್, ಸೆಲೂನ್‌ಗಳಲ್ಲಿ ಚರ್ಚೆಯಾಗುತಿದ್ದವು.

ಯುವಕರ ಆಸಕ್ತಿಯ ಕ್ಷೇತ್ರ ಬದಲಾಗುತ್ತಿದ್ದಂತೆ ಹಳ್ಳಿ ನಾಟಕಗಳು ಅಪರೂಪವೆನಿಸತೊಡಗಿದವು. ಹಾಗೂ ಈ ಜಾಗವನ್ನು ಸಂಗೀತ ಕಛೇರಿಗಳು, ನೃತ್ಯತಂಡಗಳು ಆಕ್ರಮಿಸಿದವು. ಇನ್ನೂ ಅನಿವಾರ್ಯವೆನಿಸಿದಾಗ ಪೇಟೆಯ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.

ಆದರೆ ಹಿಂದಿನ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಕೆಲವೇ ಊರುಗಳಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮವೂ ಒಂದು. ಇಲ್ಲಿ ಇತ್ತೀಚಿಗೆ ನಡೆದ ಮಲೆಯಾಳಿ ಬಿಲ್ಲವ ಸೇವಾ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಥಳೀಯ ಯುವಕರು ಪ್ರದರ್ಶಿಸಿದ ಶಶಿಧರ ಬಂಡಿತಡ್ಕ ರಚಿಸಿ, ವೈ.ಬಿ. ಸುಂದರ್‌ ಮುಂದಾಳತ್ವದಲ್ಲಿ, ನಿತಿನ್‌ ಹೊಸಂಗಡಿ ನಿರ್ದೇಶಿಸಿದ “ವಜ್ರದ ಮೂಂಕುತ್ತಿ’ ನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸುವುದರಲ್ಲಿ ಯಶಸ್ವಿಯಾಯಿತು.

ಪ್ರೀತಿಸಿದ ಯುವತಿಯನ್ನು ಮದುವೆಯಾಗದೆ ಚಡಪಡಿಸುವ ಮನಮಿಡಿಯುವ ಸೂರಜ್‌ನ ಪಾತ್ರದಲ್ಲಿ ವೈ.ಬಿ. ಪ್ರವೀಣ್‌ ಮನೋಜ್ಞ ಅಭಿನಯ ನೀಡಿದರೆ, ನಾಯಕಿಯ ಮನಮುಟ್ಟುವ ಪಾತ್ರದ ಮೂಲಕ ಮಿಥುನ್‌ ಪ್ರೇಕ್ಷಕರಿಂದ ಶಹಬಾಸ್‌ಗಿರಿ ಪಡೆದರು.ಇನ್ನು ವಿಶೇಷವಾಗಿ ತನ್ನ ವಿಭಿನ್ನ ಹಾಸ್ಯ ಅಭಿನಯದ ಅಜ್ಜಿಯ ಪಾತ್ರದಲ್ಲಿ ದಿನೇಶ್‌ ಚಪ್ಪಾಳೆ ಗಿಟ್ಟಿಸಿದರು. ಧೀರಜ್‌ ಮುಗುಳ್ಯ, ಸಂಜಿತ್‌ ಕುಕ್ಕಾಜೆ, ಅಶೋಕ್‌ ಚಟ್ಟೆಕಲ್ಲು, ಶರತ್‌ ಕೆಂಜಿಲ ಹೊಟ್ಟೆಹುಣ್ಣಾಗುವಷ್ಟು ನಗಿಸುವಲ್ಲಿ ಯಶಸ್ವಿಯಾದರು. ನಾಗೇಶ್‌ ಪೂಜಾರಿ-ದೇಜಪ್ಪ ಪೂಜಾರಿ ಅವರೂ ನಗು ತರಿಸಿದರು. ವೈ.ಬಿ ಸುಂದರ್‌, ಗಣೇಶ್‌ ಕಿನ್ನಿಮಜಲು, ರಕ್ಷಿತ್‌ ಇರಾ, ನಾರಾಯಣ ಸೂತ್ರಬೈಲ್, ಗೋಪಾಲ್‌ ಅಶ್ವಥಡಿ ಮುಂತಾದವರ ಉತ್ತಮ ಅಭಿನಯ ಎರಡೂವರೆ ತಾಸುಗಳ ಕಾಲ ಪ್ರೇಕ್ಷಕರನ್ನು ನಿರಾಸೆಗೊಳಿಸಲಿಲ್ಲ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ದೊರಕಿದರೆ ರಂಗಭೂಮಿ ಇನ್ನಷ್ಟು ಪ್ರಜ್ವಲಿಸಬಹುದು ಎಂಬುದು ನಿಜವಾಗಿದೆ.

ಸತೀಶ್‌ ಇರಾ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.