ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ಆಲೂ ಪರೋಟ ಸರಳ ವಿಧಾನ
ಶ್ರೀರಾಮ್ ನಾಯಕ್, Jan 3, 2020, 7:15 PM IST
ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನಸ್ಸಿಗೆ ಬರುವುದು ಅಲೂ ಪರೋಟ. ಚುಮು ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಬಿಸಿ ಬಿಸಿ ಆಲೂ ಪರೋಟ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಅತೀ ಸರಳ ವಿಧಾನದಲ್ಲಿ ಆಲೂ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು:
6 ಬಟಾಟೆ, 8 ಹಸಿಮೆಣಸಿನ ಕಾಯಿ, 1 ದೊಡ್ಡ ಚಮಚ ತೆಂಗಿನ ತುರಿ, 1/4 ಕಂತೆ ಕೊತ್ತಂಬರಿ ಸೊಪ್ಪು,1 ಚಮಚ ಹಿಂಗಿನ ನೀರು, 2 ಕಪ್ ಗೋದಿ ಹಿಟ್ಟು, ರುಚಿಗೆ ಉಪ್ಪು.
ಮಾಡುವ ವಿಧಾನ:
ಬಟಾಟೆಯನ್ನು ನೀರಲ್ಲಿ ಬೇಯಿಸಿ ಅದರ ಸಿಪ್ಪೆಯನ್ನು ಸುಲಿದಿಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನ ಕಾಯಿಯ ಕೊಚ್ಚಲು ಮಾಡಿರಿ. ತೆಂಗಿನ ತುರಿಯನ್ನು ಪಾತ್ರೆಗೆ ಹಾಕಿ ಅದರೊಟ್ಟಿಗೆ ಪುಡಿಯುಪ್ಪು ಮತ್ತು ಮೆಣಸಿನಕಾಯಿ , ಕೊತ್ತಂಬರಿ ಸೊಪ್ಪಿನ ಕೊಚ್ಚಲು ಬೆರಸಿ, ಹಿಂಗಿನ ನೀರು ಸೇರಿಸಿ ಹೊರಣ ತಯಾರಿಸಿ. ಅದರೊಟ್ಟಗೆ ಬೇಯಿಸಿಟ್ಟ ಬಟಾಟೆಯನ್ನು ಹಿಸುಕಿ, ಹಿಟ್ಟಿನ ಸಣ್ಣ ಸಣ್ಣ ಉಂಡೆ ಕಟ್ಟಿರಿ. 1/2 ಕಪ್ ನೀರಿಗೆ 1 ಚಮಚ ಪುಡಿಯುಪ್ಪು ಹಾಕಿ 2 ಕಪ್ ಗೋದಿ ಹಿಟ್ಟು ಬೆರಸಿ ಗಟ್ಟಿ ಹಿಟ್ಟು ಕಲಿಸಿ ಬೇಕಾದಷ್ಟೇ ದೊಡ್ಡ ಉಂಡೆ ಪೂರಿ ತಯಾರಿಸಿರಿ. ಪ್ರತಿಯೊಂದು ಪೂರಿಯ ಮೇಲೆ ಬಟಾಟೆ ಹಿಟ್ಟಿನ ಉಂಡೆ ಇಟ್ಟು ಅದನ್ನು ಪೂರ್ತಿ ಮುಚ್ಚಿ.ಉಂಡೆ ಮಾಡಿ ಗೋದಿ ಹಿಟ್ಟಿನಲ್ಲಿ ಆ ಉಂಡೆಯನ್ನು ಹೊರಳಿಸಿ ತೆಗೆದು ಲಟ್ಟಿಸಿ ದೊಡ್ಡ ಗಾತ್ರದ ಚಪಾತಿ ಮಾಡಿರಿ. ಚಪಾತಿ ತವಗೆ ತುಪ್ಪ ಹಚ್ಚಿ ಒಲೆಯ ಮೇಲಿಟ್ಟು ಅದರ ಎರಡೂ ಬದಿಗಳನ್ನು ಕಾಯಿಸಿ ತೆಗೆಯಿರಿ. ಬಿಸಿ ಬಿಸಿ ಆಲೂ ಪರೋಟ ರೆಡಿ.ಪುದೀನ ಸೊಪ್ಪಿನ ಚಟ್ನಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.