“ವಿಶ್ವಾಸಂ’ ನಿರ್ಮಾಪಕರ ಚಿತ್ರದಲ್ಲಿ ಶಿವಣ್ಣ
ಕನ್ನಡಕ್ಕೆ ಬಂದ ತಮಿಳು ನಿರ್ದೇಶಕ
Team Udayavani, Jan 4, 2020, 8:03 AM IST
ತಮಿಳು ನಿರ್ದೇಶಕರ ಸಿನಿಮಾವೊಂದರಲ್ಲಿ ಶಿವರಾಜಕುಮಾರ್ ನಟಿಸಲಿದ್ದಾರೆಂಬ ಸುದ್ದಿಯನ್ನು ನೀವು ಈ ಹಿಂದೆ ಕೇಳಿರಬಹುದು. ಆದರೆ, ಆ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ, ಅದರ ನಿರ್ದೇಶಕರು ಯಾರು? ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ಈಗ ಬಹುತೇಕ ಎಲ್ಲವೂ ಅಂತಿಮವಾಗಿದೆ. ತಮಿಳಿನ ಸತ್ಯ ಜ್ಯೋತಿ ಫಿಲಂಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಈ ಹಿಂದೆ “ವಿಶ್ವಾಸಂ’, “ವಿವೇಗಂ’, “ಪಟ್ಟಾಸ್’, “ತೋದರಿ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಸತ್ಯಜ್ಯೋತಿ ಫಿಲಂಸ್ ಈಗ ಶಿವರಾಜ ಕುಮಾರ್ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿದೆ. ಈ ಚಿತ್ರವನ್ನು ರವಿ ಅರಸು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ “ಐನಾಗಾರನ್’ ಹಾಗೂ “ಎಟ್ಟಿ’ ಎನ್ನುವ ಸಿನಿಮಾ ನಿರ್ದೇಶಿಸಿರುವ ರವಿ ಈಗ ಶಿವರಾಜಕುಮಾರ್ ಅವರಿಗೆ ಸಿನಿಮಾ ಮಾಡಲಿದ್ದಾರೆ.
ಸದ್ಯ ಶಿವರಾಜಕುಮಾರ್ “ಭಜರಂಗಿ-2′ ಚಿತ್ರದಲ್ಲಿ ಬಿಝಿ ಇದ್ದಾರೆ. ಆ ಚಿತ್ರ ಮುಗಿದ ಬಳಿಕ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆಯೇ ಶಿವಣ್ಣ ಯೋಗಿ ಜಿ ರಾಜ್ ನಿರ್ದೇಶನದಲ್ಲೂ ನಟಿಸಲಿದ್ದು, ಆ ಚಿತ್ರದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ “ಭೈರತಿ ರಣಗಲ್’ ಚಿತ್ರದಲ್ಲೂ ಶಿವಣ್ಣ ನಟಿಸಲಿದ್ದು, ನಿರ್ಮಾಣ ಕೂಡಾ ಅವರದ್ದೇ ಇರಲಿದೆ. ಸದ್ಯ ಶಿವರಾಜಕುಮಾರ್ ಅವರ “ದ್ರೋಣ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.