ಕನ್ನಡ ಅನುಷ್ಠಾನ ಸಮಸ್ಯೆ ಬಿಚ್ಚಿಟ್ಟ ಶಿಕ್ಷಕರು
Team Udayavani, Jan 4, 2020, 10:45 AM IST
ಸಾಂಧರ್ಬಿಕ ಚಿತ್ರ
ಬೆಂಗಳೂರು: ಖಾಸಗಿ ಶಾಲೆಯ ಕನ್ನಡ ಶಿಕ್ಷಕರಿಗೆ ವೇತನ ತಾರತಮ್ಯವಾಗುತ್ತಿದೆ, ಕನ್ನಡ ಎಂದರೆ ಅಸಡ್ಡೆಯಿಂದ ನೋಡುತ್ತಾರೆ, ಕನ್ನಡ ಬೋಧನೆಗೆ ತರಗತಿ ನೀಡುತ್ತಿಲ್ಲ, ಅಲ್ಪಸಂಖ್ಯಾತ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡದಂತೆ ಒತ್ತಡ ಹಾಕಲಾಗುತ್ತಿದೆ.
ಹೀಗೆಂದು, ಶಿಕ್ಷಣ ಸಚಿವರ ಬಳಿ ಖಾಸಗಿ ಶಾಲೆಗಳ ಕನ್ನಡ ಶಿಕ್ಷಕರು ನೋವನ್ನು ಬಿಚ್ಚಿಟ್ಟ ಪರಿ. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರ ವಾರ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ “2015ರ ಕನ್ನಡ ಭಾಷಾ ಕಲಿಕಾ ಅಧಿನಿಯಮ’ ಜಾಗೃತಿ ಹಾಗೂ ಯಶಸ್ವಿ ಅನುಷ್ಠಾನ ಸಂಬಂಧ ಕನ್ನಡ ಭಾಷಾ ಬೋಧನಾ ಶಿಕ್ಷಕರ ಕಾರ್ಯಾಗಾರ ಹಾಗೂ ಸಂವಾದ ನಡೆಯಿತು. ಸಂವಾದದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ಐಜಿಸಿ ಎಸ್‌ಇ, ಅಂತಾರಾಷ್ಟ್ರೀಯ ಪಠ್ಯ ಬೋಧನಾ ಕ್ರಮದ ಶಾಲೆ, ವಿವಿಗಳ ಪ್ರಾಂಶುಪಾಲರು ಸೇರಿದಂತೆ 500ಕ್ಕೂ ಹೆಚ್ಚು ಕನ್ನಡ ಶಿಕ್ಷಕರು ಭಾಗವಹಿಸಿದ್ದರು. ಈ ವೇಳೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್
ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಮುಂದೆ ಕನ್ನಡ ಅನುಷ್ಠಾನಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಶಿಕ್ಷಕರು ಹೇಳಿಕೊಳ್ಳುವ ಜತೆಗೆ ಕೆಲ ಸಲಹೆಗಳನ್ನೂ ಶಿಕ್ಷಣ ಇಲಾಖೆಗೆ ನೀಡಿದರು. ಬೆಂಗಳೂರಿನ ಕೆಲ ಅಲ್ಪ ಸಂಖ್ಯಾತ ಶಾಲೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡದಂತೆ, ಕನ್ನಡ ಬಳಸದಂತೆ ನಿರ್ಬಂಧ ಹಾಕಲಾಗುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಕಿಯೊಬ್ಬರು ದೂರಿದರು. ಮತ್ತೂಬ್ಬ ಶಿಕ್ಷಕಿ ಬಹುತೇಕ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಭಾಷಾ ತರಗತಿಗಳನ್ನು ವಾರಕ್ಕೆ 2-3 ಮಾತ್ರ ನೀಡುತ್ತಿದ್ದಾರೆಂದರು.
ಸೂಕ್ತ ಅನುಷ್ಠಾನವಾಗಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಪರಿಸ್ಥಿತಿ ಹೀಗಾದರೆ, ಮುಂದೊಂದು ದಿನ ಎಲ್ಲರೂ ಪಾಶ್ಚಾತ್ತಾಪಪಡುವ ದಿನ ಬರುತ್ತವೆ ಎಂದರು. ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ. ಜಗದೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.