ನಮೋ ಸಂದೇಶಕ್ಕೆ ಸಂತಸಗೊಂಡ ರೈತ


Team Udayavani, Jan 5, 2020, 3:00 AM IST

namo-sandesha

ಚನ್ನರಾಯಪಟ್ಟಣ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ ಹಣ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ ಹಾಗೂ ಹೊಸ ವರ್ಷದ ಶುಭಾಶಯಗಳು ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದೇ ತಡ ಅನ್ನದಾತರು ಸಂತಸಗೊಂಡಿದ್ದಾರೆ.  2019ರ ಡಿಸೆಂಬರ್‌ನಿಂದ 2020ರ ಮಾರ್ಚ್‌ ಅವಧಿಗೆ ಎರಡು ಸಾವಿರ ರೂ. ಜಮಾ ಮಾಡಲಾಗಿದೆ.

ನಾಲ್ಕು ತಿಂಗಳಿಗೊಮ್ಮೆ ಸಿಗುವ ಈ ಮೊತ್ತ ನಿಮ್ಮ ಕೃಷಿ ಖರ್ಚು ವೆಚ್ಚಕ್ಕೆ ಸಹಾಯ ಮಾಡುತ್ತದೆ ಎಂದ ಭಾವಿಸುತ್ತೇನೆ. ಹೊಸ ವರ್ಷದ ಶುಭಾಶಯಗಳು ನರೇಂದ್ರ ಮೋದಿ ಎಂಬ ಸಂದೇಶ ತಾಲೂಕಿನ ಸಾವಿರಾರು ರೈತರ ಮೊಬೈಲ್‌ಗೆ ಬಂದಿದೆ. ಕೂಡಲೇ ಹಲವು ಮಂದಿ ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಎರಡು ಸಾವಿರ ಹಣ ಬಂದಿದೆ ಇದರಿಂದ ಅನ್ನದಾತರಲ್ಲಿ ಖುಷಿ ಮೂಡಿದೆ.

ರೈತರ ಗಮನ ಸೆಳೆದ ಸಂದೇಶ: ಈ ರೀತಿ ಸಂದೇಶ ಬಂದಿರುವುದು ಬೇರೆ ದಿನವಲ್ಲ, ಅದು ದೇಶದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಕಾಲಿಟ್ಟಿರುವ ಸಮದಲ್ಲಿ. ತುಮಕೂರು ಜಿಲ್ಲೆಯಲ್ಲಿ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳೊಂದಿಗೆ ಸಂವಾದ ಮುಗಿಸಿ ಕಿಸಾನ್‌ ಸಮ್ಮೇಳನದಲ್ಲಿ ಪಾಲ್ಗೊಂಡು ಪ್ರಧಾನಿ ಮಾತು ಪ್ರಾರಂಭ ಮಾಡಿ ಕಿಸಾನ್‌ ಸಮ್ಮಾನ್‌ ಯೋಜನೆ ಬಗ್ಗೆ ತಿಳಿಸುವ ಸಮಯ ಜ.2ರ ಮಧ್ಯಾಹ್ನ ತಾಲೂಕಿನ ಸಾವಿರಾರು ಮಂದಿ ರೈತರ ಖಾತೆಗೆ ಸಮ್ಮಾನ್‌ ನಿಧಿ ಹಣ ಸಂದಾಯವಾಗಿದೆ ಇದರಿಂದ ಈ ಸಂದೇಶ ರೈತರ ಗಮನ ಸೇಳೆದಿದೆ.

ಮೋಡಿ ಮಾಡಿದ ಮೋದಿ ಎಸ್‌ಎಂಎಸ್‌: ವಾಟ್ಸಾಪ್‌ ಸಂದೇಶದ ಯುಗದಲ್ಲಿ ಎಸ್‌ಎಂಎಸ್‌ ಮಾಡುವುದನ್ನು ಮರೆತಿದ್ದವರಿಗೆ ಖುದ್ದು ಮೋದಿ ಅವರೇ ಎಸ್‌ಎಂಎಸ್‌ ಮೂಲಕ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ. ಮೊಬೈಲ್‌ಗೆ ಎಸ್‌ಎಂಎಸ್‌ ಬಂದಾಗ ಟೆಲಿಕಾಂ ಸಂಸ್ಥೆಯವರು ರೀಚಾರ್ಜ್‌ ಮಾಡಿಸುವಂತೆ ಸಂದೇಶ ಕಳುಹಿಸಿದ್ದಾರೆ. ಕೆಲಸ ಲೇವಾದೇವಿ ವ್ಯವಹಾರ ಸಂಸ್ಥೆಯವರು ಸಾಲ ನೀಡುತ್ತೇವೆ ಎಂಬ ಸಂದೇಶ ಕಳುಹಿಸಿದ್ದಾರೆ ಎಂಬ ಭಾವನೆಯಿಂದ ನೂರಾರು ರೈತರು ಸಂದೇಶ ಓದುವ ಗೋಜಿಗೆ ಹೋಗಿಲ್ಲ. ಮೋದಿ ನನಗೆ ಸಂದೇಶ ಕಳುಹಿಸಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ಹರಡಿದ್ದೇ ತಡ ಎಲ್ಲರೂ ತಮ್ಮ ತಮ್ಮ ಮೊಬೈಲ್‌ ತೆಗೆದು ನೋಡಲು ಪ್ರಾರಂಭಿಸಿದ್ದಾರೆ ಒಂದು ಸಂದೇಶದಿಂದ ರೈತರನ್ನು ಮೋಡಿ ಮಾಡಿದ್ದಾರೆ ಮೋದಿ.

ಕನ್ನಡದಲ್ಲಿ ಬಂದ ಸಂದೇಶ: ಮೋಬೈಲ್‌ಗೆ ಆಂಗ್ಲ ಭಾಷೆಯಲ್ಲಿ ಈ ರೀತಿ ಸಂದೇಶ ಬಂದಿದ್ದರೆ ರೈತರು ಖುಷಿ ಪಡಲಾಗುತ್ತಿರಲಿಲ್ಲ. ಆದರೆ ಕಿಸಾನ್‌ ಎಂಬ ಹೆಸರಿನಲ್ಲಿ ಅದು ಸಂಪೂರ್ಣ ಕನ್ನಡದಲ್ಲಿ ಸಂದೇಶ ಬಂದಿದ್ದು ರೈತರಿಗೆ ಮತಷ್ಟು ಖುಷಿ ತಂದಿದೆ. ಹಿಂದಿ ಭಾಷೆ ಹೇರಿಕೆ ಎಂದು ಕನ್ನಡಪರ ಹೋರಾಟಗಾರರಿಂದ ಅಪಾದನೆಗೆ ಒಳಗಾಗುವ ನಮೋ ಸರ್ಕಾರ ರೈತರಿಗೆ ರವಾನೆ ಮಾಡಿರುವ ಸಂದೇಶ ಸಂಪೂರ್ಣ ಕನ್ನಡದಲ್ಲಿ ಇರುವುದರಿಂದ ಪ್ರಾದೇಶಕತೆಗೆ ಒತ್ತು ನೀಡುವ ಸರ್ಕಾರ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಿದ್ದಾರೆ.

ಮೋದಿ ಸಂದೇಶ ವೈರಲ್‌: ರೈತರ ಮೊಬೈಲ್‌ಗೆ ಬಂದ ಪ್ರಧಾನಿಗಳ ಹೊಸ ವರ್ಷ ಶುಭಾಶಯ ಸಂದೇಶವನ್ನು ರೈತರ ಮಕ್ಕಳು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಮಾಡಿದ್ದಾರೆ. ತುಮಕೂರಿನಲ್ಲಿ ರೈತ ಸಮಾವೇಶ ಉದ್ಘಾಟಿಸಿ ಮೋದಿ ಭಾಷಣ ಮುಗಿಯುವುದರೊಳಗೆ ನಮ್ಮ ತಂದೆ ಖಾತೆಗೆ ಎರಡು ಸಾವಿರ ಹಣ ಬಂದಿದೆ ಎಂದು ಬರೆದುಕೊಂಡಿರುವುದಲ್ಲದೇ ದೇಶದ ಪ್ರಧಾನಿ ಅವರೇ ನಮಗೆ ಶುಭಾಶಯ ಕೋರಿದ್ದಾರೆ ಎಂದು ತಮ್ಮ ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುವ ಮೂಲಕ ಹಲವು ಮಂದಿ ಪುಳಕಗೊಂಡಿದ್ದಂತೂ ಸತ್ಯ.

ಗುರುವಾರ ಸಂಜೆ 5.30ರಲ್ಲಿ ಟೀವಿ ನೋಡುತ್ತಿದ್ದೆ. ಈ ವೇಳೆ ಪ್ರಧಾನಿ ಭಾಷಣ ಮಾಡುತ್ತಿದ್ದರು. ಇದೇ ಸಮಯದಲ್ಲಿ ನನ್ನ ಮೊಬೈಲ್‌ಗೆ ಒಂದು ಎಸ್‌ಎಂಎಸ್‌ ಬಂತು ಅದನ್ನು ನೋಡಿದರೆ ಪ್ರಧಾನಿ ನಮೋ ಹೊಸ ವರ್ಷಕ್ಕೆ ಶುಭಾಶಯ ಕೋರಿರುವುದಲ್ಲದೇ ನನ್ನ ಖಾತೆಗೆ 2 ಸಾವಿರ ಹಣ ಹಾಕಿರುವುದಾಗಿ ತಿಳಿಸಿದ್ದರು. ಇದರಿಂದ ನನಗೆ ಬಹಳ ಸಂತೋಷ ತಂದಿದೆ.
-ಲೋಕಮಾತೆ, ರೈತ ಮಹಿಳೆ ಅಣ್ಣೇನಹಳ್ಳಿ ಗ್ರಾಮ

ಜ.2 ರಂದು ನನ್ನ ತಂದೆ ನಾಗರಾಜು ಅವರ ಎಸ್‌ಬಿಐ ಖಾತೆಗೆ ಎರಡು ಸಾವಿರ ಹಣ ಜಮಾ ಆಗಿರುವ ಸಂದೇಶ ಬಂದಿದ್ದು ಸಂದೇಶದಲ್ಲಿ ಕಿಸಾನ್‌ ಸಮ್ಮಾನ್‌ ನಿಧಿ ಎಂದು ತಿಳಿಸಲಾಗಿದೆ. ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿರುವುದರಿಂದ ಸಂತಸವಾಗಿದೆ.
-ಶರತ್‌ಕುಮಾರ್‌, ಚನ್ನರಾಯಪಟ್ಟಣ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.