ಮಂಗಳೂರಿಗೆ ನೀರು ಸರಬರಾಜು ಸದ್ಯಕ್ಕಿಲ್ಲ ನೀರಿನ ಸಮಸ್ಯೆ
Team Udayavani, Jan 5, 2020, 4:43 AM IST
ಮಂಗಳೂರಿನಲ್ಲಿ ಸದ್ಯದ ಮಟ್ಟಿಗೆ ನೀರಿನ ಅಭಾವವಿಲ್ಲವಾದರೂ ಮುಂದೆ ಬರುವ ಸಮಸ್ಯೆಗೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಬಾರಿಯೂ ಕಳೆದ ವರ್ಷದಂತೆ ಮೇ-ಜೂನ್‌ನಲ್ಲಿ ಆತಂಕ ಎದುರಾಗುವ ಅಪಾಯವೂ ಇದೆ. ಹೀಗಾಗಿ ಕೆಲವು ಎಚ್ಚರಿಕೆ ಸೂತ್ರಗಳಿಗೆ ಪಾಲಿಕೆ ವಿಶೇಷ ಗಮನಹರಿಸಬೇಕಾಗಿದೆ. ಪರ್ಯಾಯ ಮೂಲಗಳತ್ತ ವಿಶೇಷ ಆದ್ಯತೆ ನೀಡುವ ಬಗ್ಗೆಯೂ ಪಾಲಿಕೆ ಕ್ರಮ ಕೈಗೊಂಡರೆ ಭವಿಷ್ಯಕ್ಕೆ ಉತ್ತಮವಾಗಲಿದೆ.
ಸದ್ಯ ಮಂಗಳೂರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ; ತುಂಬೆ ಡ್ಯಾಂನಲ್ಲಿ ಸಾಕಷ್ಟು ನೀರಿನ ಲಭ್ಯತೆಯಿದ್ದು, ಒಳಹರಿವೂ ಉತ್ತಮವಾಗಿದೆ. ಆದರೆ, ಕುಡಿಯುವ ನೀರಿನ ಬಗ್ಗೆ ನಗರದಲ್ಲಿ ಜಾಗೃತಿ ಮನೋಭಾವ ಈಗಿನಿಂದಲೇ ಮೂಡದಿದ್ದರೆ ಕಳೆದ ವರ್ಷದಂತೆಯೇ ಈ ಬಾರಿಯೂ ನೀರಿನ ಹಾಹಾಕಾರ ಎದುರಾಗಲೂಬಹುದು.
ಮಂಗಳೂರು ಪಾಲಿಕೆಯ ಕುಡಿಯುವ ನೀರು ಪೂರೈಕೆ ನಿರ್ವಹಿಸುವ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ (2019)ಫೆಬ್ರವರಿ 14ರವರೆಗೆ ಒಳಹರಿವು ಇತ್ತು. ಆ ಬಳಿಕ ಒಳಹರಿವಿನ ಪ್ರಮಾಣ ಕಡಿಮೆಯಾಗಿತ್ತು. ಫೆ. 23ರ ಬಳಿಕ 6 ಮೀಟರ್ ಸಂಗ್ರಹವಾಗಿದ್ದ ನೀರಿನ ಪ್ರಮಾಣ ಕಡಿಮೆಯಾಗಲು ಆರಂಭವಾಗಿತ್ತು. ಇಷ್ಟಿದ್ದರೂ ಮೇ-ಜೂನ್ ವೇಳೆಗೆ ಮಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ಅಂದಹಾಗೆ, ಸದ್ಯದ ಮಾಹಿತಿ ಪ್ರಕಾರ ಈಗಲೂ ತುಂಬೆ ಡ್ಯಾಂನಲ್ಲಿ ಒಳಹರಿವು ಉತ್ತಮವಾಗಿಯೇ ಇದೆ. 6 ಮೀ. ನೀರು ನಿಲ್ಲಿಸುವ ಕಾರಣದಿಂದ 1 ಗೇಟ್ ಮೂಲಕ ನೀರನ್ನು ಹೊರಗೆ ಬಿಡಲಾಗುತ್ತಿದೆ. ಫೆಬ್ರವರಿ ಕೊನೆಯ ವೇಳೆಗಾಗುವಾಗ ಒಳಹರಿವಿನ ಪ್ರಮಾಣ ಕಡಿಮೆಯಾಗಲೂಬಹುದು. ಬಳಿಕ ಗೇಟ್ ಬಂದ್ ಮಾಡಿ 6 ಮೀಟರ್ ನೀರು ಸಂಗ್ರಹಿಸಲಾಗುತ್ತದೆ. 1 ಮೀಟರ್‌ನಷ್ಟು ಪ್ರಮಾಣದ ನೀರು 10-15 ದಿನದಲ್ಲಿ ಖಾಲಿಯಾಗಲಿದೆ. ಹೀಗಾಗಿ ಮುಂದಿನ ಎಪ್ರಿಲ್ ವೇಳೆಗೆ ಸುಬ್ರಹ್ಮಣ್ಯ ಭಾಗದಲ್ಲಿ ಮಳೆಯಾದರೆ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಬಹುದು ಎಂಬುದು ಪಾಲಿಕೆಯ ನಿರೀಕ್ಷೆ. ಒಂದು ವೇಳೆ ಆಗ ಮಳೆಯಾಗದಿದ್ದರೆ ಈ ಬಾರಿಯೂ ಕಳೆದ ವರ್ಷದಂತೆ ಮೇ-ಜೂನ್‌ನಲ್ಲಿ ಆತಂಕ ಎದುರಾಗುವ ಅಪಾಯವೂ ಇದೆ. ಹೀಗಾಗಿ ಈ ಎಲ್ಲಾ ಎಚ್ಚರಿಕೆ ಸೂತ್ರಗಳಿಗೆ ಪಾಲಿಕೆ ವಿಶೇಷ ಗಮನಹರಿಸಬೇಕಾಗಿದೆ.
ಕುಡಿಯುವ ನೀರಿನ ಸಂರಕ್ಷಣೆಗೆ ವಿಶೇಷ ಆದ್ಯತೆ, ಹನಿ ನೀರು ಕೂಡ ಅಮೂಲ್ಯ ಎಂಬ ಜಾಗೃತಿ, ಬೇಕಾ ಬಿಟ್ಟಿ ನೀರು ಬಳಕೆ ಮಾಡುವುದನ್ನು ತಡೆಗಟ್ಟುವುದು ಸೇರಿದಂತೆ ನೀರು ಉಳಿಕೆಯ ಬಗ್ಗೆ ವಿಶೇಷ ಜಾಗೃತಿ ಈಗಿನಿಂದಲೇ ಶುರುವಾದರೆ ಈ ಬಾರಿಯ ಬೇಸಗೆಯಲ್ಲಿ ನೀರಿನ ತಾಪತ್ರಯವನ್ನು ಕೊಂಚವಾದರೂ ಕಡಿಮೆ ಮಾಡಬಹುದು.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ (2019)ಎ.18ರ ಸಂಜೆ 6 ಗಂಟೆಯಿಂದಲೇ ನೀರು ರೇಷನಿಂಗ್ ಆರಂಭವಾಗಿತ್ತು. 2-3 ದಿನಕ್ಕೊಮ್ಮೆ ನೀರು ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಬಹುತೇಕ ಭಾಗಗಳಿಗೆ ಒಂದು ವಾರವಾದರೂ ನೀರು ಹೋಗದೆ ಸಮಸ್ಯೆ ಅನುಭವಿಸಿದ್ದೂ ಇದೆ. ಸುಮಾರು 2 ತಿಂಗಳು ನಗರದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿತ್ತು ಎಂಬುದನ್ನು ನೆನಪು ಮಾಡಬಹುದು.
ಮಂಗಳೂರಿಗೆ ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ಪಾಲಿಕೆ ಎಷ್ಟು ಪ್ರಯತ್ನಿಸಿದರೂ, ಪ್ರತೀದಿನ 20 ಎಂ.ಎಲ್.ಡಿ.(ಮಿಲಿಯನ್ ಲೀಟರ್ )ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ಪಾಲಿಕೆಯೇ ತಿಳಿಸಿರುವಂತೆ, ತುಂಬೆಯಿಂದ ಪ್ರತೀದಿನ 160 ಎಂ.ಎಲ್.ಡಿ. ನೀರು ಪಂಪಿಂಗ್ ಮಾಡಲಾಗುತ್ತಿದೆ. ಇದರಲ್ಲಿ 140 ಎಂ.ಎಲ್.ಡಿಯಷ್ಟು ಮಾತ್ರ ನೀರು ಬಳಕೆಯಾಗುತ್ತಿದೆ. ಉಳಿದ 20 ಎಂ.ಎಲ್.ಡಿ ನೀರು ಸೋರಿಕೆಯಾಗುತ್ತಿದೆ. ತುಂಬೆ ಪಂಪ್‌ಹೌಸ್‌ನಿಂದ ನೀರು ಪಂಪ್ ಮಾಡಿ ನಗರದ ಪಂಪ್‌ಹೌಸ್‌ಗಳಿಗೆ ಪೂರೈಕೆ ಮಾಡುವ ಹಂತದಲ್ಲಿ ಭಾರೀ ನೀರು ಸೋರಿಕೆಯಾಗುತ್ತಿದೆ. ಕಣ್ಣೂರು, ಫರಂಗಿಪೇಟೆ, ಅಡ್ಯಾರು ಮುಂತಾದ ವ್ಯಾಪ್ತಿಗಳಿಗೆ ಈ ನೀರು ಸರಬರಾಜಾಗುತ್ತದೆ. ವಿಶೇಷವೆಂದರೆ ಇದಕ್ಕೆ ಯಾವುದೇ ಶುಲ್ಕ ವಸೂಲಿ ಮಾಡಲಾಗುತ್ತಿಲ್ಲ. ಇದರ ವಿರುದ್ಧ ಪಾಲಿಕೆ ಕಳೆದ ವರ್ಷ ಆಂದೋಲನ ರೂಪಿಸಿ ಸೋರಿಕೆ ತಡೆಗಟ್ಟಲು ಪ್ರಯತ್ನಿಸಿದರೂ ಅದು ಯಾವುದೇ ಫಲ ನೀಡಿಲ್ಲ. ಹೀಗಾಗಿ ಸೋರಿಕೆಗೆ ಪರಿಹಾರ ದೊರೆತು ಆ ಭಾಗದವರಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿದರೆ ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಕೊಂಚ ಬ್ರೇಕ್ ಹಾಕಬಹುದು.
ನೀರಿನ ಬಿಲ್ ಸರಿಪಡಿಸಿ
ಸದ್ಯ ಕೆಲವರಿಗೆ ಬಂದಿರುವ ನೀರಿನ ಬಿಲ್‌ಗಳನ್ನು ಕಂಡು ಮನೆ ಮಂದಿ ಹೆದರುವ ಪರಿಸ್ಥಿಯಿದೆ. ನೂರು-ಇನ್ನೂರು ಬರುವ ನೀರಿನ ಬಿಲ್ ಕೆಲವರೆಗೆ 20,000 ರೂ. ಬಂದಿದ್ದೂ ಇದೆ. ಇನ್ನು ಕೆಲವೆಡೆಗೆ ಇನ್ನೂ ಕೂಡ ನೀರಿನ ಬಿಲ್ ಬರಲೇ ಇಲ್ಲ. ಅವರಿಗೆ ಅದೆಷ್ಟು ಸಾವಿರ ರೂ. ಬಿಲ್ ಬರಲಿದೆಯೋ? ಎಂಬ ಭಯದಲ್ಲಿದ್ದಾರೆ. ಇದರ ಜತೆಗೆ, ನಗರದ ಮುಖ್ಯ ನೆಲೆಯಲ್ಲಿ ಗುರುತಿಸಿದ ಸಂಸ್ಥೆಗಳು ಕೋಟಿಗಟ್ಟಲೆ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ. ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಮಾಡಲಾಗುವುದು ಎಂದು ಎಷ್ಟು ಬಾರಿ ಪಾಲಿಕೆ ಎಚ್ಚರಿಸಿದರೂ ಬಾಕಿ ಮೊತ್ತ ಇನ್ನೂ ಪಾವತಿಯಾಗಿಲ್ಲ.
ನೀರಿನ ಸಂಕಷ್ಟ ಎದುರಾದಾಗ ಮಾತ್ರ ಕೆರೆ, ಬಾವಿ, ಬೋರ್‌ವೆಲ್ ನೆನಪು!
ನೇತ್ರಾವತಿಯ ಒಡಲು ಬರಿದಾಗುತ್ತಿರುವಂತೆ ಪರ್ಯಾಯ ಮೂಲಗಳಾಗಿರುವ ಕೆರೆ, ಬಾವಿ, ಬೋರ್‌ವೆಲ್‌ಗಳತ್ತ ಮಂಗಳೂರು ಪಾಲಿಕೆ ಅಧಿಕಾರಿಗಳು ದೌಡಾಯಿಸುವುದು ಸಾಮಾನ್ಯ. ಆದರೆ, ತುಂಬೆಯಲ್ಲಿ ಸಾಕಷ್ಟು ನೀರು ಇರುವವರೆಗೂ ಪಾಲಿಕೆ ಅಧಿಕಾರಿಗಳು ಪರ್ಯಾಯ ನೀರಿನ ಮೂಲಗಳತ್ತ ಯೋಚಿಸುವುದೇ ಇಲ್ಲ ಎಂಬುದು ಬಹುದೊಡ್ಡ ಅಪವಾದ. ಜತೆಗೆ ಮನೆ ಪಕ್ಕದಲ್ಲಿರುವ ಬಾವಿ, ಕೆರೆಗಳ ಬಗ್ಗೆಯೂ ಮೇ ವರೆಗೂ ಮೌನವಾಗಿರುವ ಅಧಿಕಾರಿಗಳು ನೀರಿನ ಕೊರತೆ ಎದುರಾಗುವಾಗ ಮಾತ್ರ ಪರ್ಯಾಯ ನೀರಿನ ವ್ಯವಸ್ಥೆಗಳ ಬಗ್ಗೆ ಲೆಕ್ಕಹಾಕಲು ಶುರು ಮಾಡುತ್ತಾರೆ. ಅಲ್ಲಿಯವರೆಗೆ ಕೆರೆ, ಬಾವಿ, ಬೋರ್‌ವೆಲ್‌ಗಳನ್ನು ಕೇಳುವವರೇ ಇಲ್ಲ. ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಪರ್ಯಾಯ ಮೂಲಗಳತ್ತ ವಿಶೇಷ ಆದ್ಯತೆ ನೀಡುವ ಬಗ್ಗೆಯೂ ಪಾಲಿಕೆ ಕ್ರಮ ಕೈಗೊಂಡರೆ ಭವಿಷ್ಯಕ್ಕೆ ಉತ್ತಮ.
ಮುಂದಿದೆ ಅಪಾಯದ ಸೂಚನೆ!
ಪ್ರತೀ ದಿನ 160 ಎಂ.ಎಲ್.ಡಿ ನೀರು ಪಂಪಿಂಗ್
ಗೃಹಬಳಕೆಗಾಗಿ 80 ಎಂ.ಎಲ್.ಡಿ ನೀರು
ಗೃಹೇತರ/ವಾಣಿಜ್ಯ ಬಳಕೆ 39.50 ಎಂ.ಎಲ್.ಡಿ
ಭಾರೀ ಕೈಗಾರಿಕೆಗಳ ಬಳಕೆಗಾಗಿ 11 ಎಂ.ಎಲ್.ಡಿ
ಇತರ ಶೇ.22.75, ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆಗಳು, ಕಟ್ಟಡ ರಚನೆ 5.50 ಎಂ.ಎಲ್.ಡಿ
ಒಟ್ಟು 140 ಎಂ.ಎಲ್.ಡಿ
ಟ್ರಾನ್ಸ್‌ಮಿಶನ್ ಲೋಸಸ್, ಕೊಳವೆ ಹಾದುಹೋಗಿರುವ ಹಳ್ಳಿಗಳಲ್ಲಿ ನೀರು ಸೋರುವಿಕೆ 20 ಎಂ.ಎಲ್.ಡಿ
ಒಟ್ಟು 160 ಎಂ.ಎಲ್.ಡಿ
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.