ರಾಜ್ಯದ ರಸ್ತೆ ಅಭಿವೃದ್ಧಿಗೆ ಆರ್ಥಿಕ ಸಂಕಷ್ಟ: ಕಾರಜೋಳ
Team Udayavani, Jan 5, 2020, 3:07 AM IST
ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಅನುಷ್ಠಾನಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019-20ನೇ ಸಾಲಿನಲ್ಲಿ ಇಲಾಖೆಗೆ 9549 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಡಿಸೆಂಬರ್ 2019ರ ಅಂತ್ಯಕ್ಕೆ 3649 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಗುತ್ತಿಗೆದಾರರ ಸುಮಾರು 1 ಸಾವಿರ ಕೋಟಿ ಬಾಕಿ ಕೊಡಬೇಕಿದೆ. ಮೂರು ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ 5,700 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಕಾಮಗಾರಿ ಸ್ಥಗಿತಗೊಳ್ಳದೆ ಪೂರ್ಣವಾಗಲು ಹಣ ಹೊಂದಿಸ ಲಾಗುವುದು ಎಂದರು. ಇಲಾಖೆಯ ವಲಯವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಲೋಕೋ ಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳ ಯೋಜನೆಗೆ 691.11 ಕೋಟಿ ರೂ.ಅನುದಾನವನ್ನು ಮೀಸಲಿಟ್ಟಿದ್ದು, ಅದರಲ್ಲಿ 193.33 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟು 43,388 ಕಿ.ಮೀ. ಉದ್ದದ ರಸ್ತೆ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ 39,041 ಕಿ.ಮೀ.(ಶೇ.90) ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳನ್ನು ಜ. 20ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ 1227.55 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದ್ದು, 7,122 ಕಾಮಗಾರಿಗಳ ಕೈಗೆತ್ತಿಕೊಳ್ಳಲು ಗುರಿಹೊಂದ ಲಾ ಗಿದೆ. ಅದರಲ್ಲಿ 320 ಕೋಟಿ ರೂ. ವೆಚ್ಚದ 2810 ಕಾಮ ಗಾರಿ ಗಳನ್ನು ಪೂರ್ಣಗೊಳಿಸಲಾಗಿದೆ. ಎಲ್ಲ ಕಾರ್ಯ ಪಾಲಕ ಎಂಜಿನಿಯರ್‌ಗಳಿಗೆ ಜ. 20ರೊಳಗೆ ಮಿಕ್ಕ ಕೆಲಸ ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ ಎಂದರು.
ಎಸಿಪಿ (ಡಾ.ನಂಜುಂಡಪ್ಪ ವರದಿ ಆಧರಿತ) ಯೋಜನೆಯಡಿ 370.70 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, 1,062 ಕಾಮಗಾರಿಗಳನ್ನು ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ. ಅದರಲ್ಲಿ 66.68 ಕೋಟಿ ರೂ. ವೆಚ್ಚದ 415 ಕಾಮಗಾರಿಗಳು ಪೂರ್ಣ ಗೊಂಡಿವೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 323.42 ಕೋಟಿ ರೂ. ಅನುದಾನವಿದ್ದು, 693 ಕಾಮಗಾರಿಗಳ ಗುರಿ ಹೊಂದ ಲಾಗಿದೆ. ಅದರಲ್ಲಿ 51 ಕೋಟಿ ರೂ. ವೆಚ್ಚದ 303 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ನೆರೆ ಪರಿಹಾರಕ್ಕೆ 500 ಕೋಟಿ: ನೆರೆ ಪರಿಹಾರ ಕಾಮಗಾರಿಗಳಿಗಾಗಿ 500 ಕೋಟಿ ರೂ. ವಿನಿಯೋಗಿ ಸುತ್ತಿದ್ದು, 1816 ಕಾಮಗಾರಿಗಳ ಗುರಿಯನ್ನು ಹೊಂದ ಲಾಗಿದೆ. ಅದರದಲ್ಲಿ 733 ಕಾಮಗಾರಿಗಳನ್ನು ಪೂರ್ಣ ಗೊಳಿ ಸಲಾಗಿದೆ. ನೆರೆಪರಿಹಾರ ಕಾಮಗಾರಿಗಳಡಿ 2ನೇ ಹಂತದಲ್ಲಿ 250 ಕೋಟಿ ರೂ. ಮೊತ್ತದಲ್ಲಿ ಗುಂಡಿ ಮುಚ್ಚುವುದರ ಜೊತೆಗೆ ರಸ್ತೆ ನಿರ್ವಹಣೆ, ರಸ್ತೆಗಳ ಇಕ್ಕೆಲೆಗಳಲ್ಲಿ ಚರಂಡಿಗಳ ನಿರ್ವಹಣೆಗೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಫೆಬ್ರವರಿಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.
ಕೆಶಿಪ್ ಯೋಜನೆಗಳು: ಕೆಶಿಪ್-3 ಹಾಗೂ ಎಡಿಬಿ-2ರಡಿ 5334 ಕೋಟಿ ರೂ.ವೆಚ್ಚದಲ್ಲಿ 418 ಕಿಮೀ ಉದ್ದದ 5 ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ. ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜನವರಿ 2020ರ ಅಂತ್ಯಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಕರಾರಿನಂತೆ 2 ವರ್ಷಗಳ ಅವಧಿಯಲ್ಲಿ ಕಾಮಗಾರಿ ಗಳನ್ನು ಪೂರ್ಣಗೊಳಿಸಬೇಕಿದೆ ಎಂದರು.
ಬೆಂಗಳೂರು ರಸ್ತೆಗೆ 2095 ಕೋಟಿ ರೂ.: ಕೆಆರ್‌ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 155 ಕಿಮೀ ಉದ್ದದ 4 ರಸ್ತೆಗಳ ಅಭಿವೃದ್ಧಿಯನ್ನು 10 ಪ್ಯಾಕೇಜ್‌ಗಳಲ್ಲಿ 2095 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ 545 ಕೋಟಿ ರೂ. ಮೊತ್ತವನ್ನು ಭೂಸ್ವಾಧೀನಕ್ಕಾಗಿ ಮೀಸಲಿಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿಗಮದ ವತಿಯಿಂದ 217 ಸೇತುವೆಗಳ ನಿರ್ಮಾಣವನ್ನು 1395 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸಮಗ್ರ ವಿವರಗಳು ವೆಬ್‌ಸೈಟ್‌ಗೆ ತುಂಬಲಾಗುತ್ತಿದ್ದು, ಇಲಾಖೆ ಪ್ರಾರಂಭವಾದ ದಿನದಿಂದ ಈವರೆಗಿನ ಮಾಹಿತಿ ಜ. 15ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.