ಜಗತ್ತು ಬೆಳಗಿಸಬಹುದು ನಮ್ಮ ದೇಹಶಾಖ
ಮುಂಬಯಿ ಐಐಟಿಯಿಂದ ಸಂಶೋಧನೆ ಥರ್ಮೋ ಎಲೆಕ್ಟ್ರಿಕ್ ಡಿವೈಸ್ ಬಳಸಿ ವಿದ್ಯುತ್
Team Udayavani, Jan 5, 2020, 7:30 AM IST
ಬೆಂಗಳೂರು: ಸೂರ್ಯ ರಶ್ಮಿ , ಗಾಳಿಯ ವೇಗದಿಂದ ವಿದ್ಯುತ್ ಉತ್ಪಾದಿಸುವಂತೆ ನಮ್ಮ ದೇಹದ ಶಾಖದಿಂದಲೂ ಯಾಕೆ ವಿದ್ಯುತ್ ಉತ್ಪಾದನೆ ಮಾಡಬಾರದು-ಈ ನಿಟ್ಟಿನಲ್ಲಿ ಸಂಶೋಧನೆಗೆ ಮುಂಬಯಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮುಂದಾಗಿದೆ.
ಮಳೆ ನೀರು ಕೊಯ್ಲು ಅಥವಾ ಸೂರ್ಯನ ಕಿರಣಗಳಿಂದ ಉಂಟಾಗುವ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸುವಂತೆಯೇ ಮನು ಷ್ಯ ದೇಹದಿಂದಲೂ ಶಾಖ ಹೊರ ಹೊಮ್ಮುತ್ತದೆ. ಅದನ್ನು ವಿದ್ಯುತ್ ಆಗಿ ಪರಿವರ್ತಿಸಲು ಸಾಧ್ಯವಿದ್ದು, ಈ ಸಂಬಂಧ ಸಂಶೋಧನೆಯಲ್ಲಿ ಮುಂಬಯಿ ಐಐಟಿ ಸಕ್ರಿಯವಾಗಿದೆ. ಥರ್ಮೋ ಎಲೆಕ್ಟ್ರಿಕ್ ಡಿವೈಸ್‌ನಿಂದ ಶಾಖವನ್ನು ವೋಲ್ಟೆಜ್‌ಗೆ ಪರಿವರ್ತಿಸಿ, ಎಲೆಕ್ಟ್ರಿಕ್ ಉಪಕರಣ ಚಾರ್ಜಿಂಗ್ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಸುತ್ತಿದೆ.
ಥರ್ಮೋ ಎಲೆಕ್ಟ್ರಿಕ್ ಡಿವೈಸ್‌ನಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ಸಂಗ್ರ ಹಿಸುವ ವ್ಯವಸ್ಥೆ ಇಲ್ಲದಿರುವುದು ಇದುವರೆಗೆ ಇದ್ದ ಅಡ್ಡಿಯಾಗಿತ್ತು. ಆದರೆ ಈಗ ಆ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ, ಇದರ ಬೆನ್ನಲ್ಲೇ ಮನುಷ್ಯನ ದೇಹ ಶಾಖದಿಂದ ವಿದ್ಯುತ್ ಉತ್ಪಾದಿಸುವ ಸಂಶೋಧನೆ ನಡೆಯು ತ್ತಿದೆ. ಇದು ಸಾಕಾರಗೊಂಡರೆ ಇಂಧನ ಕ್ಷೇತ್ರ ದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ಮುಂಬಯಿ ಐಐಟಿಯ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸಿ. ಸುಬ್ರಮಣಿಯಂ “ಉದಯವಾಣಿ’ಗೆ ತಿಳಿಸಿದ್ದಾರೆ.
ಎಲ್‌ಇಡಿ ದೀಪವನ್ನೂ ಉರಿಸಬಹುದು!
ದೇಶದಲ್ಲಿ ಈ ರೀತಿಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು ಇದೇ ಮೊದಲು ಎಂದು ಸಂಶೋಧಕ ಸುಬ್ರಮಣಿಯಂ ಮಾಹಿತಿ ನೀಡಿದ್ದಾರೆ. ಇದರ ಮುಂದುವರಿದ ಭಾಗ ನಮ್ಮ ದೇಹ ಶಾಖದಿಂದ ವಿದ್ಯುತ್ ಉತ್ಪಾದನೆ ಮಾಡುವುದು. ದೇಹದ ಮೇಲಿನ ಒತ್ತಡದ ಪರಿಣಾಮ ಶಾಖ ಉಂಟಾಗುತ್ತದೆ. ಅದನ್ನು ಥರ್ಮೋಎಲೆಕ್ಟ್ರಿಕ್ ಡಿವೈಸ್‌ನಿಂದ ವೋಲ್ಟೆಜ್ ಆಗಿ ಪರಿವರ್ತಿಸಬಹುದು. ಅದರಿಂದ ಎಲೆಕ್ಟ್ರಿಕ್ ಉಪಕರಣಗಳನ್ನು ಚಾರ್ಜ್ ಮಾಡಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ವಿಜ್ಞಾನ ಲೋಕಕ್ಕೆ ಹೊಸದಲ್ಲ
ಈ ಆಲೋಚನೆ ವಿಜ್ಞಾನ ಲೋಕಕ್ಕೆ ಹೊಸದಲ್ಲ. ದೇಹದ ಶಾಖದಿಂದ ಕೆಲವು ಮಿಲಿವ್ಯಾಟ್‌ಗಳಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಸದ್ಯದ ಮಟ್ಟಿಗೆ ಆ ವಿದ್ಯುತ್ತನ್ನೂ ಪಡೆಯುವುದು ಕಷ್ಟ. ಯಾಕೆಂದರೆ, ಅದನ್ನು ಸಂಗ್ರಹಿಸಿಡುವ ವ್ಯವಸ್ಥೆಯೇ ಇಲ್ಲ.
- ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.