ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ
Team Udayavani, Jan 5, 2020, 1:44 AM IST
ಕರ್ನಾಟಕ ನಾಟಕ ಅಕಾಡೆಮಿಯ 2019-20ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ.
ವಿಜಯ್ ಕುಮಾರ್ ಕೊಡಿಯಾಲ್‌ಬೈಲ್
ಮಂಗಳೂರು: “ಒರಿಯ ರ್ದೊರಿ ಅಸಲ್’ ಚಿತ್ರದ ಮೂಲಕ ತುಳು ಚಿತ್ರರಂಗ ಹಾಗೂ ರಂಗ ಭೂಮಿಗೆ ಹೊಸ ಛಾಪು ನೀಡಿದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರದ್ದು ರಂಗಭೂಮಿ ಮತ್ತು ತುಳು ಚಿತ್ರರಂಗದಲ್ಲಿ 30 ವರ್ಷಗಳ ಅಗಾಧ ಅನುಭವ.
ಒರಿಯೆ ಮಗೆ, ಸೀತಾ ಟೀಚರ್, ಸಂಸಾರದ ಸರ್ಕಸ್, ಮದಿಮೆ, ಕಡಲಮಗೆ, ಒಯಿಕ್ಲಾ ಆವಂದಿನಕುಲು ಸೇರಿದಂತೆ 19ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ದೇವು ಪೂಂಜಾ, ಅಪ್ಪೆ ಮೂಕಾಂಬಿಕೆ, ಬಜರಂಗ ಬಲಿ, ಶಿವದೂತೆ ಗುಳಿಗೆ ಮುಂತಾದ ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ತುಳುನಾಡ ಬಿರ್ಸೆ-2012, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2011, ಮುಂಬಯಿ ಶ್ರೀಕೃಷ್ಣ ವಿಠಲ ಪ್ರತಿಷ್ಠಾನದಿಂದ ಕಲಾಚಕ್ರವರ್ತಿ ಪ್ರಶಸ್ತಿ-2006, ಜೇಸೀ ಬೆಸ್ಟ್ ಔಟ್‌ಸ್ಟಾಂಡಿಂಗ್ ಯಂಗ್ ಪರ್ಸನ್ ಸೇರಿದಂತೆ ವಿವಿಧ ಪ್ರಶಸ್ತಿ, ಸಮ್ಮಾನಗಳಿಗೆ ಭಾಜನರಾಗಿದ್ದಾರೆ. 28ಕ್ಕೂ ಮೀರಿದ ತುಳು ಧ್ವನಿ ಸುರುಳಿಗಳಿಗೆ ಸಾಹಿತ್ಯ, “ಬರವುದ ಬಂಡಸಾಲೆ’ ಮಕ್ಕಳ ಕಿರುಚಲನಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವುದು, 2015ರಲ್ಲಿ ಅದ್ದೂರಿ ವೆಚ್ಚದ “ಮದಿಮೆ’ ಚಲನಚಿತ್ರ ನಿರ್ದೇಶನ ಮಾಡಿದ್ದಾರೆ.
ಪ್ರಶಸ್ತಿ ಬಂದಿರು ವುದು ತುಂಬ ಸಂತೋಷ ವಾಗಿದೆ. ನನ್ನೊಂದಿಗೆ 30 ವರ್ಷಗಳ ಕಾಲ ದುಡಿದ ಎಲ್ಲ ಕಲಾವಿದರು, ತಂತ್ರಜ್ಞರು, ಪ್ರತ್ಯಕ್ಷ, ಪರೋಕ್ಷವಾಗಿ ಪ್ರೋತ್ಸಾಹಿಸಿದ ಕಲಾಭಿಮಾನಿಗಳಿಗೆ ಸಂದ ಗೌರವ ಇದು.
– ವಿಜಯಕುಮಾರ್ ಕೊಡಿಯಾಲ್‌ಬೈಲ್
ಭಾಸ್ಕರ ಪೂಜಾರಿ ಮಣಿಪಾಲ
ಉಡುಪಿ: ಸುಮಾರು ನಲ್ವತ್ತು ವರ್ಷಗಳಿಂದ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಮಣಿಪಾಲದ ಈಶ್ವರನಗರದ ನಿವಾಸಿ ಭಾಸ್ಕರ ಪೂಜಾರಿ ಅವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
80ರ ದಶಕದಲ್ಲಿ ಮಣಿಪಾಲದ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಛದ್ಮವೇಷದಲ್ಲಿ ತೊಡಗಿದ್ದು ಬಳಿಕ ನಾಟಕ ಕ್ಷೇತ್ರಕ್ಕೆ ಒಲವು ಹರಿಸಿದರು. ಸಂಗಮ ಕಲಾವಿದರು ನಾಟಕ ಸಂಸ್ಥೆಯ ಮೂಲಕ ರಂಗಕಲಾವಿದರಾಗಿ ನಾಟಕದಲ್ಲಿ ಅಭಿನಯಿಸಿರುವ ಅವರು 60ಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ನಾಯಕನ ಪಾತ್ರ, ಹಾಸ್ಯ ಕಲಾವಿದರಾಗಿ, ಅಜ್ಜನ ಪಾತ್ರ, ಕುಡುಕನ ಪಾತ್ರ ಇತ್ಯಾದಿಯಾಗಿ ನಟಿಸಿದರು.
ಪುರಂದರನ ಪುನರ್‌ಜನ್ಮ ನಾಟಕವು ಮದ್ಯಪಾನದಿಂದಾಗುವ ಹಾನಿಯ ಬಗ್ಗೆ ಸಂದೇಶ ನೀಡಿತು.¤ ಅದರಲ್ಲಿ ಅವರ ಕುಡುಕನ ಮನೋಜ್ಞ ಪಾತ್ರ ನಿರ್ವಹಣೆ ನೋಡಿದ ಹಲವರು ಮದ್ಯ ತ್ಯಜಿಸಿದ್ದರು.
ಚಂದ್ರಪ್ಪನ ಚಟ್ಟದ ಯಾತ್ರೆ, ಪುರಂದರನ ಪುನರ್‌ಜನ್ಮ, ಮಿನಿಸ್ಟರ್ ಮಾಮಣ್ಣೆ, ಅಂಗಾರ, ಹಸಿರು ನಾಡಿನ ಕೆಂಪು ಹಾದಿ, ಅಟಿಲ್ದಾಯೆ ಇತ್ಯಾದಿ ಅವರ ಪ್ರಮುಖ ನಾಟಕಗಳು. ಕೆಮೂ¤ರು ದೊಡ್ಡಣ್ಣ ಶೆಟ್ಟಿ ನಾಟಕ ಸ್ಪರ್ಧೆಯಲ್ಲಿ ಶೇಷ್ಠ ನಟ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಸಂದಿವೆ.
ಅಕಾಡೆಮಿ ಪ್ರಶಸ್ತಿ ತುಂಬ ಖುಷಿ ತಂದಿದೆ. ಮಕ್ಕಳಿಗೆ ನಾಟಕ ತರಬೇತಿ ನೀಡುವ ಸಂಸ್ಥೆ ಹುಟ್ಟುಹಾಕುವ ಯೋಜನೆ ಇದೆ.
-ಭಾಸ್ಕರ ಪೂಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.