“ಬಂಗಾರ’ದಂಥ ಉಳಿತಾಯ
Team Udayavani, Jan 6, 2020, 5:31 AM IST
ಹಣದುಬ್ಬರದಿಂದಾಗಿ ಇಂದು ಚಿನ್ನವು ಹಣ ಹೂಡಿಕೆಯ ಉತ್ತಮ ವಿಧಾನವಾಗಿದೆ. ಬಂಗಾರದ ಬೆಲೆ ಗಗನಕ್ಕೆ ಏರುತ್ತಿದೆ. ಆದರೆ, ಒಮ್ಮೆಲೇ ತುಂಬಾ ಬಂಗಾರ ಕೊಳ್ಳುವುದು ಸುಲಭವಲ್ಲ. ಸ್ವಲ್ಪ ಸ್ವಲ್ಪ ಬಂಗಾರವನ್ನು ಕೊಳ್ಳುತ್ತಾ ಬಂದಲ್ಲಿ ಮುಂದೆ ಇದೊಂದು ಹೆಚ್ಚಿನ ನಿಧಿಯಾಗಿ ಉಳಿತಾಯದ ದೃಷ್ಟಿಯಿಂದಲೂ ಹಾಗೂ ಸಂಪತ್ತಿನ ದೃಷ್ಟಿಯಿಂದಲೂ ಬಹಳ ಸಹಾಯವಾಗುತ್ತದೆ. ವ್ಯಕ್ತಿಯ ಉಳಿತಾಯದಲ್ಲಿ “ಬಂಗಾರ’ ಒಂದು ಅಂಶವಾಗಿರಬೇಕು. ಸಾಧ್ಯವಾದರೆ ಪ್ರತಿ ತಿಂಗಳೂ ಅಥವಾ ಮೂರು, ಆರು ತಿಂಗಳಿಗೊಮ್ಮೆಯಾದರೂ ಆದಷ್ಟು ಬಂಗಾರವನ್ನು ಕೊಂಡುಕೊಳ್ಳುತ್ತಾ ಬಂದಲ್ಲಿ ಇದರ ಸದುಪಯೋಗ ಮುಂದಕ್ಕೆ ಆಗುತ್ತದೆ.
ಉಳಿತಾಯದ ದೃಷ್ಟಿಯಿಂದ ಹಾಗೂ ಒಡವೆಯ ದೃಷ್ಟಿಯಿಂದ ಬಂಗಾರವನ್ನು ಕೊಳ್ಳಬಹುದು. ಬಂಗಾರದ ಒಡವೆಗಳ ಫ್ಯಾಷನ್ ಬದಲಾಗುತ್ತಿರುತ್ತದೆ. ಬಂಗಾರದ ಒಡವೆಗಳನ್ನು ಮುರಿಸಿ ಬೇರೊಂದು ಒಡವೆ ಮಾಡಿಸುವಾಗ, ಸವಕಳಿ(ವೇಸ್ಟೇಜ್) ರೂಪದಲ್ಲಿ ಕೆಲವು ಗ್ರಾಂಗಳಷ್ಟು ದಂಡ ತೆರಬೇಕಾಗುತ್ತದೆ. ಇದಕ್ಕಾಗಿಯೇ ಬಂಗಾರದ ಒಡವೆಗಳನ್ನು ಮಾಡಿಸಬಾರದು ಎನ್ನುವ ಮಾತು ಸರಿಯಲ್ಲ. ಆದರೆ, ಆಗಾಗ ಮುರಿಸಿ ಹೊಸತು ಮಾಡಿಸುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ಬಂಗಾರದ ನಾಣ್ಯಗಳನ್ನು, ಬ್ಯಾಂಕಿನ ಆರ್.ಡಿ. ಖಾತೆಯ ಮಾದರಿಯಲ್ಲಿ, ಪ್ರತಿ ತಿಂಗಳೂ ಕೊಂಡು ಬ್ಯಾಂಕ್ ಲಾಕರ್‌ಗಳಲ್ಲಿ ಇಟ್ಟುಕೊಳ್ಳಿ. ಇದರಿಂದ ಮಕ್ಕಳ ಮದುವೆ ಸಮಯದಲ್ಲಿ, ಒಮ್ಮೆಲೇ ಬಂಗಾರ ಖರೀದಿಸುವಾಗ ಎದುರಾಗಬಹುದಾದ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಮುಂದಿನ ಮಾರ್ಗ ಬಹಳ ಸುಗಮವಾಗುತ್ತದೆ.
ಬಂಗಾರದ ಮೇಲೆ ಹಣ ಹಾಕುವುದು ಒಂದು ಜಡ (Dead Investment) ಥರದ ಹೂಡಿಕೆ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಆದರೆ, ಬಂಗಾರದ ಹೆಲೆ ಏರಿದ ರೀತಿಯನ್ನು ನೋಡುವಾಗ ಈ ಹೂಡಿಕೆಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ ಅನ್ನಿಸುತ್ತದೆ. ಸರಕು ಪೇಟೆ, ಶೇರು ಪೇಟೆ ಹಾಗೂ ಯಾವುದೇ ವಸ್ತುಗಳ ಬೆಲೆಗಳಲ್ಲಿ ಏರುಪೇರು ಕಂಡು ಬಂದರೂ, ಬಂಗಾರದ ಬೆಲೆ ಎಂದಿಗೂ ಕಡಿಮೆಯಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಬಂಗಾರವನ್ನು “ಅಮೂಲ್ಯ ಲೋಹ'(Precious metal) ಎಂಬ ಮಾತನ್ನು ಪ್ರಪಂಚಾದ್ಯಂತ ಒಪ್ಪಿಕೊಳ್ಳಲಾಗಿದೆ. ದೇಶದ ಸಂಪತ್ತನ್ನು ಪರಿಗಣಿಸುವಾಗ ಕೂಡಾ ಬಂಗಾರದ ಪಾತ್ರ ಅತೀ ಮುಖ್ಯವಾಗಿದೆ. ಬಂಗಾರವನ್ನು ಮ್ಯೂಚುವಲ್ ಫಂಡುಗಳ ಯುನಿಟ್‌ಗಳಲ್ಲಿಯೂ (G.E.T.F) ಕೊಂಡುಕೊಳ್ಳಬಹುದು. ಒಟ್ಟಿನಲ್ಲಿ ಬಂಗಾರದಲ್ಲಿ ಹಣ ಹೂಡುವುದರಿಂದ ಬಾಳೇ ಬಂಗಾರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.