ಮಧ್ಯಮ ವರ್ಗದ ಕಣ್ಮಣಿ!

ರೆಡ್‌ಮಿ ನೋಟ್‌ 8 ಪ್ರೊ; ಅಲ್ಟ್ರಾ ವೈಡ್‌ ಲೆನ್ಸ್‌

Team Udayavani, Jan 6, 2020, 4:59 AM IST

10

ಪ್ರಸ್ತುತ ಮಧ್ಯಮ ದರ್ಜೆಯಲ್ಲಿ, ಅಂದರೆ 15 ಸಾವಿರದ ಆಸು ಪಾಸಿನಲ್ಲಿ ಉತ್ತಮ ಫೋನ್‌ ಬೇಕೆನ್ನುವವರು ರೆಡ್‌ಮಿ ನೋಟ್‌ 8 ಪ್ರೊ. ಅನ್ನು ಸಹ ತಮ್ಮ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಬಹುದು. ಈ ಫೋನಿನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಶಿಯೋಮಿ ಬ್ರಾಂಡ್‌, ಒಂದು ಫೋನಿನಲ್ಲಿರುವ ವೈಶಿಷ್ಟéಗಳಿಗೆ ಎಷ್ಟು ಬೇಕೋ ಅಷ್ಟು ದರ ನಿಗದಿ ಮಾಡಿ, ಗ್ರಾಹಕ ನೀಡುವ ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಬ್ರಾಂಡ್‌ ಆಗಿರುವುದು ಅದರ ಗ್ರಾಹಕರಿಗೆ ತಿಳಿದೇ ಇದೆ. ಹಾಗಾಗಿಯೇ ಅದು ಕ್ಷಿಪ್ರ ಗತಿಯಲ್ಲಿ ಭಾರತದ ಮೊಬೈಲ್‌ ಮಾರಾಟದಲ್ಲಿ ನಂ. 1 ಸ್ಥಾನ ಗಳಿಸಿಕೊಂಡಿದೆ.

ಮಧ್ಯಮ ವರ್ಗದಲ್ಲಿ ಅದು ಬಿಡುಗಡೆ ಮಾಡಿರುವ ಫೋನ್‌ಗಳು ಯಶಸ್ಸು ಕಾಣುತ್ತಲೇ ಬಂದಿವೆ. ಅದರ ಹಿಂದಿನ ಫೋನ್‌ ರೆಡ್‌ಮಿ ನೋಟ್‌ 7 ಪ್ರೊ. ಉತ್ತಮ ಮಿಡ್‌ರೇಂಜ್‌ ಫೋನ್‌ ಎಂಬ ಮೆಚ್ಚುಗೆ ಪಡೆದು ಈಗಲೂ ಬೇಡಿಕೆ ಪಡೆದಿದೆ. ಇದರ ಮುಂದಿನ ಫೋನಾಗಿ, ಒಂದೆರಡು ತಿಂಗಳ ಹಿಂದೆ ಅದು ಬಿಡುಗಡೆ ಮಾಡಿರುವ ರೆಡ್‌ ಮಿ ನೋಟ್‌ 8 ಪ್ರೊ. ಕೂಡ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಿಡುಗಡೆಯಾಗಿ ಎರಡು ತಿಂಗಳಾದರೂ ಈಗಲೂ ಅಮೆಜಾನ್‌ನಲ್ಲಿ ಫ್ಲಾಶ್‌ಸೇಲ್‌ನಲ್ಲಿ ಮಾರಾಟವಾಗುತ್ತಿದೆ.

ರ್ಯಾಮ್‌ ಮತ್ತು ಆಂತರಿಕ ಮೆಮೊರಿ
ಈ ಮೊಬೈಲ್‌ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. 6 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ: 14999 ರೂ.,) 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ (ದರ:15,999 ರೂ.), 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ. (ದರ: 17,999 ರೂ.). ನೀಲಿ, ಹಸಿರು ಮತ್ತು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಈ ಮೊಬೈಲ್‌ ದೊರಕುತ್ತದೆ. ಮಿ ಸ್ಟೋರ್‌ ಮತ್ತು ಅಮೆಜಾನ್‌ನಲ್ಲಿ ಲಭ್ಯ.

ಹೀಲಿಯೋ ಪ್ರೊಸೆಸರ್‌
ರೆಡ್‌ಮಿ ಸಾಮಾನ್ಯವಾಗಿ ಭಾರತದಲ್ಲಿ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ಗಳನ್ನೇ ತನ್ನ ಫೋನ್‌ಗಳಿಗೆ ಅಳವಡಿಸುತ್ತಿತ್ತು. ನ್ಯಾಯಾಲಯದಲ್ಲಿದ್ದ ವಿವಾದವೊಂದರ ಕಾರಣ ಭಾರತದ ಫೋನುಗಳಿಗೆ ಮೀಡಿಯಾ ಟೆಕ್‌ ಪ್ರೊಸೆಸರ್‌ ಅಳವಡಿಸುತ್ತಿರಲಿಲ್ಲ. ಆದರೆ ಈಗ ವಿವಾದ ಬಗೆ ಹರಿದ ಕಾರಣ, ಭಾರತದಲ್ಲಿ ಮೀಡಿಯಾಟೆಕ್‌ ಪ್ರೊಸೆಸರ್‌ಗಳನ್ನು ಬಳಸುತ್ತಿದೆ. ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ಗಳನ್ನೇ ಇಷ್ಟಪಡುವ ಫ್ಯಾನ್‌ ವರ್ಗವಿದೆ. ಅಂಥವರಿಗೆ ಮೀಡಿಯಾ ಟೆಕ್‌ ಪ್ರೊಸೆಸರ್‌ಗಳು ಇಷ್ಟವಾಗುವುದಿಲ್ಲ. ಆದರೆ, ಮಿತವ್ಯಯ ದರದ ಉದ್ದೇಶದಿಂದ ಶಿಯೋಮಿ ಈ ಪೋನಿನಲ್ಲಿ ಮೀಡಿಯಾಟೆಕ್‌ನ ಹೀಲಿಯೋ ಜಿ.90 ಟ9 ಪ್ರೊಸೆಸರ್‌ ಬಳಸಿದೆ. ಇದು 12ಎನ್‌ಎಮ್‌ ಎಂಟು ಕೋರ್‌ಗಳ ಪ್ರೊಸೆಸರ್‌. 2.05 ಗಿ.ಹ. ವೇಗ ಹೊಂದಿದೆ. ಗೇಮ್‌ಗಳನ್ನು ಆಡುವಾಗ ಮೊಬೈಲ್‌ ಬಿಸಿಯಾಗಬಾರದೆಂದು ಪ್ರೊಸೆಸರ್‌ಗೆ ಲಿಕ್ವಿಡ್‌ ಕೂಲಿಂಗ್‌ ಸಿಸ್ಟಂ ಇದೆ. ಇದು ಅಂಡ್ರಾಯ್ಡ 9 ಪೈ ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ. ಗ್ರಾಹಕರ ಬಳಕೆಯನ್ನು ಇನ್ನಷ್ಟು ಸರಳಗೊಳಿಸಲು, ಹೆಚ್ಚುವರಿಯಾಗಿ ಇದಕ್ಕೆ ಎಂಐಯುಐ 10 ಯೂಸರ್‌ ಇಂಟರ್‌ಫೇಸ್‌ ನೀಡಲಾಗಿದೆ. ಇಷ್ಟು ಲೇಟೆಸ್ಟ್‌ ಆಗಿ ನೀಡಿರುವ ಮೊಬೈಲ್‌ಗೆ ಅಂಡ್ರಾಯ್ಡ 10 ಸೌಲಭ್ಯವನ್ನು ಕಲ್ಪಿಸಬಹುದಿತ್ತು.

ಬ್ಯಾಟರಿ ಬ್ಯಾಕಪ್‌
ಶಿಯೋಮಿ ಫೋನ್‌ಗಳಲ್ಲಿ ಎದ್ದು ಕಾಣುವ ಅಂಶ ಎಂದರೆ ಅವುಗಳ ದೊಡ್ಡ ಬ್ಯಾಟರಿ. ಸಾಮಾನ್ಯವಾಗಿ ಅನೇಕ ಶಿಯೋಮಿ ಫೋನ್‌ಗಳಲ್ಲಿ 4000 ಎಂಎಎಚ್‌ ಬ್ಯಾಟರಿ ಇದ್ದೇ ಇರುತ್ತದೆ. ಹೆಚ್ಚು ಬ್ಯಾಟರಿ ಬೇಕೆನ್ನುವ ಗ್ರಾಹಕರಿಗೆ ಇದು ಸಹಾಯಕ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದರಲ್ಲಿ 4500 ಎಂಎಎಚ್‌ ಬ್ಯಾಟರಿ ಹಾಕಲಾಗಿದೆ. ಅಷ್ಟೇ ಅಲ್ಲ, 18 ವ್ಯಾಟ್ಸ್‌ನ, ಟೈಪ್‌ ಸಿ, ವೇಗದ ಜಾರ್ಜರ್‌ ಅನ್ನು ಜೊತೆಗೆ ನೀಡಲಾಗಿದೆ! ಫೋನ್‌ ತೆರೆಯಲು ಬೆರಳಚ್ಚು ಶೋಧಕ (ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌) ಫೋನಿನ ಹಿಂಬದಿ ಇದೆ.

ನಾಲ್ಕು ಲೆನ್ಸ್‌ಗಳ ಹಿಂಬದಿ ಕ್ಯಾಮರಾ
64 ಮೆಗಾ ಪಿಕ್ಸಲ್‌ ಮುಖ್ಯ ಲೆನ್ಸ್‌ ಉಳ್ಳ ಕ್ಯಾಮರಾ ಇದರ ವೈಶಿಷ್ಟ್ಯ. ಇದಕ್ಕೆ 8 ಮೆ.ಪಿ. ಅಲ್ಟ್ರಾ ವೈಡ್‌ ಲೆನ್ಸ್‌, 2 ಮೆ.ಪಿ. ಸೂಕ್ಷ್ಮ ಲೆನ್ಸ್‌, ಮತ್ತು 2 ಮೆ.ಪಿ. ಡೆಪ್ತ್ ಸೆನ್ಸರ್‌ ಕ್ಯಾಮರಾಗಳನ್ನು ಸಹ ನೀಡಲಾಗಿದೆ. ಈ ಹಣಕ್ಕೆ ಉತ್ತಮ ಕ್ಯಾಮರಾ ಇದೆ ಎಂಬುದರಲ್ಲಿ ಸಂದೇಹವಿಲ್ಲ. ಸೆಲ್ಫಿ ಪ್ರಿಯರಿಗಾಗಿ 20 ಮೆಗಾ ಪಿಕ್ಸಲ್‌ ಮುಂಬದಿ ಕ್ಯಾಮರಾವಿದೆ.

ಗೊರಿಲ್ಲಾ ಗ್ಲಾಸ್‌ ರಕ್ಷಣೆ
ಇದು 6.53 ಇಂಚಿನ ಐಪಿಎಸ್‌ ಎಲ್‌ಸಿಡಿ ಪರದೆ ಹೊಂದಿದೆ. 1080×2340 ಪಿಕ್ಸಲ್‌, 395 ಪಿಪಿಐ, ಫ‌ುಲ್‌ಎಚ್‌ಡಿ ಪ್ಲಸ್‌ ರೆಸ್ಯೂಲೇಶನ್‌ ಹೊಂದಿದೆ. ಪರದೆಯ ರಕ್ಷಣೆಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಸಹ ಇದೆ. ಪರದೆಯ ಮಧ್ಯದಲ್ಲಿ ನೀರಿನ ಹನಿ ಬೀಳುವಂಥ ನಾಚ್‌ ಇದೆ. (ಇದು ಸೆಲ್ಫಿà ಕ್ಯಾಮರಾ ಲೆನ್ಸ್‌ ಇರಿಸುವ ಸಲುವಾಗಿ). ಇದಕ್ಕೆ ಎರಡು ಸಿಮ್‌ಕಾರ್ಡ್‌ ಹಾಕಿ, ಮೆಮೊರಿ ಕಾರ್ಡ್‌ ಸಹ ಹಾಕಬಹುದು. ಗಾಜಿನ ದೇಹ ಹೊಂದಿದೆ. ಹಿಂಬದಿಯ ಗಾಜಿನ ದೇಹಕ್ಕು ಸಹ ಕಾರ್ನಿಂಗ್‌ ಗೊರಿಲ್ಲಾ ಗಾಜಿನ ರಕ್ಷಣೆ ನೀಡಿರುವುದು ವಿಶೇಷ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.