ಉಡುಪಿ ತಾ| ಮಿನಿ ವಿಧಾನಸೌಧ ಉದ್ಘಾಟನೆಗೆ ಸಜ್ಜು
ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣ; 10 ಕೋಟಿ ರೂ. ವೆಚ್ಚದ ಕಾಮಗಾರಿ
Team Udayavani, Jan 6, 2020, 4:03 AM IST
ಉಡುಪಿ: ಬನ್ನಂಜೆಯಲ್ಲಿ ಹಳೆ ಡಿಸಿ ಕಚೇರಿ (ಈಗಿನ ತಾಲೂಕು ಕಚೇರಿ) ಆವರಣದಲ್ಲಿ ನಿರ್ಮಾಣಗೊಂಡ “ಮಿನಿ ವಿಧಾನಸೌಧ’ ಲೋಕಾರ್ಪಣೆಗೊಳ್ಳಲು ಕ್ಷಣಗಣನೆ ಪ್ರಾರಂಭವಾಗಿದೆ.
ನೆಲ ಮಹಡಿಯಲ್ಲಿ ತಹಶೀಲ್ದಾರ್ ಕಚೇರಿ, ಕೋರ್ಟ್ ಹಾಲ್, ಗ್ರೇಡ್ 2 ತಹಶೀಲ್ದಾರ್ ಚೇಂಬರ್, ತಹಶೀಲ್ದಾರ್ ದಾಖಲೆ ಕೊಠಡಿ, ಸಿಬಂದಿಗಳ ಕಚೇರಿ, ಭೂಮಿ, ಶಾಸಕರ ಕಚೇರಿ, ಮೀಟಿಂಗ್ ಹಾಲ್, ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿ ಇರಲಿದೆ. 1ನೇ ಮಹಡಿಯಲ್ಲಿ ಎಸಿ ಟ್ರಿಬ್ಯುನಲ್, ಮುಖ್ಯ ಕಚೇರಿ, ಎಸಿ ಸಿಬಂದಿ ಕಚೇರಿ, ದಾಖಲೆ ಕೊಠಡಿ, ಉಪನೋಂದಣಿ ಅಧಿಕಾರಿ ಕಚೇರಿ, ಚುನಾವಣೆ ಶಾಖೆ ಸಭಾಂಗಣ ಇರಲಿದೆ. 2ನೇ ಮಹಡಿಯಲ್ಲಿ ಎ.ಡಿ.ಎಲ್. ಆರ್ ಮತ್ತು ಸರ್ವೆಯರ್ ಶಾಖೆ, ತಹಶೀಲ್ದಾರ್ ಕಚೇರಿ ರೆಕಾರ್ಡ್ ಹಾಗೂ ಸಾಕಷ್ಟು ವಿಶಾಲ ಕಚೇರಿಗಳಿಗೆ ಸ್ಥಳಾವಕಾಶವಿದೆ.
10 ಕೋ.ರೂ. ವೆಚ್ಚದ ಕಾಮಗಾರಿ
ಬನ್ನಂಜೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಈ ಹೊಸ ಕಟ್ಟಡವು ಒಟ್ಟು 40,941 ಚದರಡಿ ವಿಸ್ತೀರ್ಣ ಹೊಂದಿದೆ. ತಹಶೀಲ್ದಾರ್ ಕೊಠಡಿ ಮತ್ತು ಶಾಸಕರ ಕಚೇರಿಗಳಿಗೆ ಹವಾ ನಿಯಂತ್ರಕವನ್ನು ಅಳವಡಿಸಲು ಅವಕಾಶ ನೀಡಲಾಗಿದೆ.
ಮಿನಿ ವಿಧಾನಸೌಧ-ವ್ಯವಸ್ಥೆಗಳು
ಮಿನಿ ವಿಧಾನ ಸೌಧ ಮೂರು ಮಹ ಡಿಯ ಕಟ್ಟಡವಾಗಿದೆ. ಇಲ್ಲಿ ಲಿಫ್ಟ್ ವ್ಯವಸ್ಥೆ, ಅಂಗವೈಕಲ್ಯ ಇರುವವರ ಅನುಕೂಲಕ್ಕೆ ರ್‍ಯಾಂಪ್, ನೆಲ ಮತ್ತು ಮೊದಲ ಮಹಡಿಯಲ್ಲಿ ಶೌಚಗೃಹ, ಅಂಗವಿಕಲರಿಗೆ ಪ್ರತ್ಯೇಕ ಶೌಚಗೃಹವಿದೆ.
ಒ.ಎಚ್.ಟಿ. 2500ಲೀ ಸಾಮರ್ಥ್ಯ, ಸಂಪ್ ಟ್ಯಾಂಕ್, ಟ್ರಾನ್ಸ್‌ಫಾರ್ಮರ್, ಡಿಸೇಲ್ ಜನರೇಟರ್, ಮುಖ್ಯ ದ್ವಾರಕ್ಕೆ ಟೀಕ್ ವಯಡ್ ಫ್ರೆàಮ್ ಮತ್ತು ಶಟ್ಟರ್ ಆಳವಡಿಸಲಾಗಿದೆ. ಪೌಡರ್ ಕೋಟೆಡ್ ಅಲ್ಯುನಿಯಮ್ ಕಿಟಿಕಿಗಳು, ಗ್ರಾನೈಟ್ ನೆಲ ಹಾಸು ಹಾಕಲಾಗಿದೆ.
ವರ್ಷದ ಬಳಿಕ ಉದ್ಘಾಟನೆ!
ಕರ್ನಾಟಕ ಗೃಹಮಂಡಳಿ ಮೂಲಕ ಈ ಕಟ್ಟಡ ನಿರ್ಮಿಸಲಾಗಿದೆ. ಜ.18, 2017ರಲ್ಲಿ ಕಟ್ಟಡದ ಕಾಮಗಾರಿಗೆ ಸಚಿವರಾಗಿದ್ದ ಪ್ರಮೋದ್ ಮಧ್ವರಾಜರು ಶಿಲಾನ್ಯಾಸ ನೆರವೇರಿಸಿದ್ದರು. 2019ರ ಜನವರಿ ತಿಂಗಳಲ್ಲಿ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿತ್ತು. ಕಾಮಗಾರಿ ಮುಗಿದ ಒಂದು ವರ್ಷದ ಬಳಿಕ ಮಿನಿ ವಿಧಾನಸೌಧಕ್ಕೆ ಉದ್ಘಾಟನಾ ಭಾಗ್ಯ ದೊರಕಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಜ. 8ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಅಂದಾಜು ಪಟ್ಟಿ
ಮಿನಿ ವಿಧಾನಸೌಧ 40,1941 ಚದರಡಿ ವಿಸ್ತೀರ್ಣ
10ಕೋ.ರೂ. ವೆಚ್ಚದ ಕಾಮಗಾರಿ
ಜ.18, 2017ರಲ್ಲಿ ಕಟ್ಟಡಕ್ಕೆ ಶಿಲಾನ್ಯಾಸ
ಕಾಮಗಾರಿ ಮುಗಿದ ವರ್ಷದ ಅನಂತರ ಉದ್ಘಾಟನೆ
ಉತ್ತಮ ಸೇವೆಯ ನಿರೀಕ್ಷೆ
ಮಎಲ್ಲ ಸೇವೆ ಒಂದೇ ಕಡೆ ಸಿಕ್ಕರೆ ಸಾರ್ವಜನಿಕರ ಸಮಯ ಒಳಿತಾಯವಾಗಲಿದೆ. ಹೊಸ ಕಟ್ಟಡಕ್ಕೆ ಕಚೇರಿಗಳು ಸ್ಥಳಾಂತರಗೊಂಡು ಅನಂತರ ಜನರಿಗೆ ಉತ್ತಮ ಸೇವೆ ದೊರಕುವಂತಾಗಲಿ.
-ಉಷಾ, ಉಡುಪಿ, ನಾಗರಿಕರು
ಕಾಮಗಾರಿ ಸಂಪೂರ್ಣ
ಮುಕ್ತಾಯಗೊಂಡಿದೆ. ಒಳಾಂಗಣ ವಿನ್ಯಾಸ ಬಾಕಿ ಇದೆ. ಹಣ ಬಿಡುಗಡೆಯಾದ ತತ್‌ಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಮಿನಿ ವಿಧಾನಸೌಧ ವಿಶಾಲವಾದ ಕಚೇರಿಯಾಗಿದ್ದು, ಇಲ್ಲಿ ಜನರಿಗೆ ಉತ್ತಮ ಸೇವೆ ಸಿಗಲಿದೆ.
-ಪ್ರದೀಪ್ ಕುಡೇಕರ್, ತಹಶೀಲ್ದಾರ್ ಉಡುಪಿ ತಾಲೂಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.