ಸಮಗ್ರ ಪ್ರಶಸ್ತಿಯತ್ತ ಮಂಗಳೂರು ವಿವಿ ಓಟ

80ನೇ ಅಖೀಲ ಭಾರತ ಅಂತರ್‌ ವಿ.ವಿ. ಆ್ಯತ್ಲೆಟಿಕ್ಸ್‌

Team Udayavani, Jan 5, 2020, 11:57 PM IST

V-Athletics

ಜ್ಯೋತಿ ವೈ.ನರೇಂದ್ರ ಪ್ರತಾಪ್‌ ಸಿಂಗ್‌,ಮನು ಡಿ.ಪಿ.

ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖೀಲ ಭಾರತ ಅಂತರ್‌ ವಿ.ವಿ. ಕ್ರೀಡಾಕೂಟದ 4ನೇ ದಿನವಾದ ರವಿವಾರ ಸಂಜೆ ವೇಳೆಗೆ ಮಂಗಳೂರು ವಿ.ವಿ. 6 ಚಿನ್ನ, 9 ಬೆಳ್ಳಿ, 4 ಕಂಚು ಸಹಿತ 127 ಅಂಕ ಗಳಿಸಿ ಸಮಗ್ರ ಚಾಂಪಿಯನ್‌ ಆಗುವತ್ತ ಓಟ ಬೆಳೆಸಿದೆ.

70 ಅಂಕ ಗಳಿಸಿರುವ ಮದ್ರಾಸ್‌ ವಿ.ವಿ. ದ್ವಿತೀಯ, 47 ಅಂಕ ಗಳಿಸಿರುವ ಕೊಟ್ಟಾಯಂನ ಎಂ.ಜಿ. ವಿ.ವಿ. ತೃತೀಯ ಸ್ಥಾನದಲ್ಲಿದೆ.

ನರೇಂದ್ರ ಮತ್ತೂಂದು ಪ್ರತಾಪ
ಕೂಟದ 2ನೇ ದಿನ 20 ಕಿ.ಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿ.ವಿ.ಯ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್‌ ಸಿಂಗ್‌ ರವಿವಾರ 5 ಸಾವಿರ ಮೀ. ಓಟವನ್ನು 14 ನಿ., 17.77 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಇನ್ನೊಂದು ಕೂಟ ದಾಖಲೆ ಸ್ಥಾಪಿಸಿದರು. ಪಂಜಾಬ್‌ ವಿ.ವಿ.ಯ ಸುರೇಶ್‌ ಕುಮಾರ್‌ ಅವರ ದಾಖಲೆಯನ್ನು (14ನಿ. 19.39 ಸೆ.) ಮುರಿದರು.

ಇದೇ ಓಟವನ್ನು ಮಂಗಳೂರು ವಿ.ವಿ.ಯ ಆಳ್ವಾಸ್‌ ಕಾಲೇಜಿನ ಆದೇಶ್‌ 14 ನಿ., 30.02 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಗೆದ್ದರು. ಸಾವಿತ್ರಿ ಬಾಯಿ ಫ‌ುಲೆ ವಿ.ವಿ.ಯ ತದ್ವಿ ಕಿಸನ್‌ ಕಂಚಿನ ಪದಕ (14 ನಿಮಿಷ, 36.77 ಸೆ.) ಪಡೆದರು.

100 ಮೀ. ಹರ್ಡಲ್ಸ್‌ ದಾಖಲೆ
ಮಹಿಳೆಯರ ವಿಭಾಗದ 100 ಮೀ. ಹರ್ಡಲ್ಸ್‌ ನಲ್ಲಿ ಆಚಾರ್ಯ ನಾಗಾರ್ಜುನ ವಿ.ವಿ.ಯ ಜ್ಯೋತಿ ವೈ. ಕೂಟ ದಾಖಲೆ ನಿರ್ಮಿಸಿದರು. 13.037 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿದ ಜ್ಯೋತಿ, ಈ ಹಿಂದೆ ಮದ್ರಾಸ್‌ ವಿ.ವಿ.ಯ ಜಿ. ಗಾಯತ್ರಿ (13.72 ಸೆ.) ಹಾಗೂ ವಿನೋಭಾ ಬಾವೆ ವಿ.ವಿ.ಯ ಸಪ್ನಾ ಕುಮಾರಿ (13.72 ಸೆ.) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಅನುರಾಧಾ ಭಂಸ್ವಾಲ್‌ ಅವರ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಗಿಂತ (13.38 ಸೆ.) ಉತ್ತಮ ಸಾಧನೆಗೈದರು.

4ನೇ ದಿನ 2 ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು, ಚಾಂಪಿಯನ್‌ಶಿಪ್‌ನ ಒಟ್ಟು ಕೂಟ ದಾಖಲೆಗಳ ಸಂಖ್ಯೆ 7ಕ್ಕೆ ಏರಿದೆ.

ನಗದು ಪುರಸ್ಕಾರ ಘೋಷಣೆ
ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನಗದು ಬಹುಮಾನ ಘೋಷಿಸಿದ್ದಾರೆ. ದಾಖಲೆ ನಿರ್ಮಿಸಿದವರಿಗೆ ರೂ. 25 ಸಾವಿರ, ಚಿನ್ನ ಗೆದ್ದವರಿಗೆ 15 ಸಾವಿರ ರಜತ ಪದಕ ವಿಜೇತರಿಗೆ 10 ಸಾವಿರ ಹಾಗೂ ಕಂಚಿನ ಪದಕ ವಿಜೇತರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

ಮೂವರಿಗೆ ಅವಳಿ ಚಿನ್ನ
ಈ ಕೂಟದಲ್ಲಿ ಮೂವರು ಅವಳಿ ಚಿನ್ನದ ಪದಕ ಗೆದ್ದ ಸಾಧನೆಗೈದರು. ಪುರುಷರ ವಿಭಾಗದಲ್ಲಿ ಮಂಗಳೂರು ವಿ.ವಿ.ಯ ನರೇಂದ್ರ ಪ್ರತಾಪ್‌ (20ಕಿ. ಮೀ. ನಡಿಗೆ, 5 ಸಾವಿರ ಮೀ. ಓಟ), ಮಹಿಳೆಯರ ವಿಭಾಗದಲ್ಲಿ ಪುಣೆಯ ಸಾವಿತ್ರಿ ಬಾಯಿ ಫ‌ುಲೆ ವಿ.ವಿ.ಯ ಕೋಮಲ್‌ ಜಗದಾಲೆ (3 ಸಾವಿರ ಮೀ. ಸ್ಟೀಪಲ್‌ ಚೇಸ್‌, 5 ಸಾವಿರ ಮೀ. ಓಟ) ಹಾಗೂ ಆಚಾರ್ಯ ನಾಗಾರ್ಜುನ ವಿ.ವಿ.ಯ ಜ್ಯೋತಿ ವೈ. (100 ಮೀ, ಮತ್ತು 100 ಮೀ. ಹರ್ಡಲ್ಸ್‌) ಈ ಸಾಧಕರು.

ಇಂದು ಸಮಾರೋಪ
5 ದಿನಗಳ ಈ ಕೂಟ ಸೋಮವಾರ ಸಮಾಪನಗೊಳ್ಳಲಿದೆ. ಕೊನೆಯ ದಿನ ಒಟ್ಟು 14 ಸ್ಪರ್ಧೆಗಳ ಅಂತಿಮ ಹಣಾಹಣಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕುಲಪತಿ ಡಾ| ಎಸ್‌. ಚ್ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದ್ದು, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಕೆ. ಅಭಯಚಂದ್ರ, ಹಾಗೂ ಕೆ. ಅಮರನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನಾಲ್ಕನೇ ದಿನದ ಫಲಿತಾಂಶ
100 ಮೀ. ಹರ್ಡಲ್ಸ್‌ (ಮಹಿಳಾ ವಿಭಾಗ)
1. ಜ್ಯೋತಿ ವೈ. ( 13.037 ಸೆ.), ಆಚಾರ್ಯ ನಾಗಾರ್ಜುನ ವಿ.ವಿ.
2. ಸಪ್ನಾ ಕುಮಾರಿ (13.239 ಸೆ.), ವಿನೋಬಾ ಭಾವೆ ವಿ.ವಿ. ಹರ್ಯಾಣ.
3. ಅಪರ್ಣಾ ರಾಯ್‌ (13.554 ಸೆ.), ಕೇರಳ ವಿ.ವಿ.
5000ಮೀ. ಓಟ (ಮಹಿಳಾ ವಿಭಾಗ)
1. ಕೋಮಲ್‌ ಜಗದಾಲೆ (17 ನಿ., 04.13 ಸೆ.), ಸಾವಿತ್ರಿಬಾಯಿ ಪುಲೆ ವಿ.ವಿ.
2. ಕೆ.ಎಂ. ಜ್ಯೋತಿ (17 ನಿ., 04.92 ಸೆ.), ಪಂಜಾಬಿ ವಿ.ವಿ. ಚಂಡೀಗಢ.
3. ಸೀಮಾ (17 ನಿ., 08.03 ಸೆ.), ಪಂಜಾಬಿ ವಿ.ವಿ. ಪಟಿಯಾಲ.
ಹೆಪ್ಟತ್ಲಾನ್‌ (ಮಹಿಳಾ ವಿಭಾಗ)
1. ಸೋನು ಕುಮಾರಿ (4640 ಅಂಕ), ಲವಿÉ ಫೊÅಫೆಶನಲ್‌ ವಿ.ವಿ.
2. ರಿಂಪಿ ದಬಾಸ್‌ (4565 ಅಂಕ) ಮಂಗಳೂರು ವಿ.ವಿ.
3. ಮರಿಯಾ ತೋಮಸ್‌ (4492) ಮಹಾತ್ಮಾಗಾಂಧಿ ಕೊಟ್ಟಾಯಂ.
ಜಾವೆಲಿನ್‌ ತ್ರೋ (ಮಹಿಳಾ ವಿಭಾಗ)
1. ಎನ್‌. ಹೇಮಾಮಾಲಿನಿ (48.81 ಮೀ.), ಮದ್ರಾಸ್‌ ವಿ.ವಿ.
2. ಮೋನಿಕಾ (46.27 ಮೀ.), ಚೌಧರಿ ದೇವಿಲಾಲ್‌ ವಿ.ವಿ.
3. ಮನ್‌ಪ್ರೀತ್‌ ಕೌರ್‌ (45.67 ಮೀ), ಗುರುನಾನಕ್‌ ದೇವ್‌ ವಿ.ವಿ.
ಶಾಟ್‌ಪುಟ್‌ (ಮಹಿಳಾ ವಿಭಾಗ)
1. ಕಿರಣ್‌ ಬಲಿಯನ್‌ (15.69 ಮೀ.) ಮೀರತ್‌ ವಿ.ವಿ.
2. ಪೂರ್ಣಾ ರಾವ್‌ರಾಣಿ (14.45 ಮೀ) ಮುಂಬೆ„ ವಿ.ವಿ.
3. ಸೃಷ್ಟಿ ವಿಗ್‌ (14.32ಮೀ) ಎಂಜೆಪಿ ವಿ.ವಿ. ಬರೇಲಿ
110 ಮೀ. ಹರ್ಡಲ್ಸ್‌ (ಪುರುಷರ ವಿಭಾಗ)
1. ಎಲ್ದನ್‌ ನೊರೋನ್ಹ (14.26 ಸೆ.), ಮುಂಬೈ ವಿ.ವಿ.
2. ದೇಬಾರ್ಜುನ್‌ ಮುರ್ಮು (14.40ಸೆ.), ಮಂಗಳೂರು ವಿ.ವಿ.
3. ರೊನಾಲ್ಡ್‌ ಬಾಬು, (14.55 ಸೆ.), ಮಹಾತ್ಮಾ ಗಾಂ ಧಿ ವಿ.ವಿ. ಕೊಟ್ಟಾಯಂ.
5000 ಮೀ. ಓಟ (ಪುರುಷರ ವಿಭಾಗ)
1. ನರೇಂದ್ರ ಪ್ರತಾಪ್‌ ಸಿಂಗ್‌ (14 ನಿ. 17.77 ಸೆ.), ಮಂಗಳೂರು ವಿ.ವಿ.
2. ಅದೇಶ್‌ (14 ನಿ., 30.02 ಸೆ.), ಮಂಗಳೂರು ವಿ.ವಿ.
3. ತದ್ವಿ ಕಿಸನ್‌ (14 ನಿ., 36.77 ಸೆ.), ಸಾವಿತ್ರಿ ಬಾಯಿ ಫ‌ುಲೆ ವಿ.ವಿ. ಪುಣೆ.
ಜಾವೆಲಿನ್‌ ತ್ರೋ (ಪುರುಷರ ವಿಭಾಗ)
1. ಮನು ಡಿ.ಪಿ. (73.94 ಮೀ.), ಮಂಗಳೂರು ವಿ.ವಿ.
2. ಯಶ್‌ವೀರ್‌ ಸಿಂಗ್‌ (73.47 ಮೀ.), ಮಹರ್ಷಿ ದಯಾನಂದ ವಿ.ವಿ.
3. ಹರೀಶ್‌ ಕುಮಾರ್‌, (73.17 ಮೀ.) ಎಂಜಿಎಸ್‌ ವಿ.ವಿ. ಬಿಕಾನೇರ್‌
4/400 ಮಿ. ಮಿಕ್ಸ್‌ಡ್‌ ರಿಲೇ
1. ಕ್ಯಾಲಿಕಟ್‌ ವಿ.ವಿ. (3 ನಿ., 24.655 ಸೆ.).
2. ಮಹಾತ್ಮಾ ಗಾಂ ಧಿ ವಿ.ವಿ. ಕೊಟ್ಟಾಯಂ (3 ನಿ., 27.947 ಸೆ.)
3. ಪಂಜಾಬ್‌ ವಿ.ವಿ. ಪಟಿಯಾಲ (3 ನಿ., 28.189 ಸೆ.)

ಟಾಪ್ ನ್ಯೂಸ್

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.