ತೂಗಿರೆ ಕೃಷ್ಣನ… ತೂಗಿರೆ ರಂಗನ…
ಉಡುಪಿ ರಥಬೀದಿಯಲ್ಲಿ ನಿರ್ಮಿಸಿದ ಸುಧರ್ಮ ವೇದಿಕೆಯಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಶ್ರೀಕೃಷ್ಣನ ಉತ್ಸವಮೂರ್ತಿಗೆ ಸ್ವರ್ಣ ತುಲಾಭಾರ ನಡೆಯಿತು.
ಪಲಿಮಾರು ಕಿರಿಯ ಶ್ರೀ, ಅದಮಾರು ಶ್ರೀ, ಕಾಣಿಯೂರು ಶ್ರೀ ಸಹಿತ ಇತರ ಶ್ರೀಪಾದರು ಉಪಸ್ಥಿತರಿದ್ದರು.
ಶ್ರೀಕೃಷ್ಣ ತುಲಾಭಾರಕ್ಕೆ ಮುನ್ನ ಸೃಷ್ಟಿ ನೃತ್ಯ ಕಲಾ ಕುಟೀರದ ಡಾ| ಮಂಜರಿ ಅವರಿಂದ “ಶ್ರೀಕೃಷ್ಣ ಸಂದರ್ಶನಂ’ ನೃತ್ಯರೂಪಕ ನಡೆಯಿತು. ಇತಿಹಾಸ ನಿರ್ಮಿಸಿದ ಶ್ರೀಕೃಷ್ಣ ತುಲಾಭಾರವನ್ನು ಕಣ್ತುಂಬಿಕೊಳ್ಳಲು ರಥಬೀದಿಯಲ್ಲಿ ಭಕ್ತಜನರು ಕಿಕ್ಕಿರಿದು ನೆರೆದಿದ್ದರು .
ಚಿತ್ರಗಳು: ಆಸ್ಟ್ರೋ ಮೋಹನ್