ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ
Team Udayavani, Jan 6, 2020, 1:19 PM IST
ನರಗುಂದ: ಪಟ್ಟಣದಲ್ಲಿ ರವಿವಾರ ಭಾರತೀಯ ಜನತಾ ಪಕ್ಷದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿಎಎ) ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಲು ಮನೆ-ಮನೆ ಭೇಟಿ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ನಾಯಕ ಉಮೇಶಗೌಡ ಪಾಟೀಲ, ಭಾರತದಲ್ಲಿ ಜನಿಸಿದ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆಯಿಲ್ಲ. ಸುಮ್ಮನೆ ಸುಳ್ಳು ಮಾಹಿತಿ ನೀಡಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. ಈ ಬಗ್ಗೆ ಗೊಂದಲ ಬೇಡ ಎಂದು ಹೇಳಿದರು.
ಪಟ್ಟಣದ ಹೊರಕೇರಿ ಓಣಿಯ ಮೌಲಾಸಾಬ್ ಮುನವಳ್ಳಿ, ಭಾಷೇಸಾಬ್ ಡೆಂಗೆನ್ನವರ, ರಿಯಾಜ್ ಕೊಣ್ಣೂರ, ಪುರಸಭೆ ಮಾಜಿ ಸದಸ್ಯ ಉಮೇಶ ಕುಡೆನ್ನವರ, ಹಸನಸಾಬ್ ತಹಶೀಲ್ದಾರ್, ಸಿದ್ದಪ್ಪ ಯಲಿಗಾರ, ಇಮಾಮ್ ಮಟಗೇರ, ಮಹ್ಮದ್ ಬಿಚಗತ್ತಿ, ಅಮೀನಸಾಬ್ ಮುನವಳ್ಳಿ, ಬಾಬುಸಾಬ್ ಬೈರೇಕದಾರ್, ಲಾಲಸಾಬ್ ಚಿಮ್ಮನಕಟ್ಟಿ, ರಂಗಪ್ಪ ಪೊಲೀಸ್, ಬಸವರಾಜ ಹುಲಕುಂದ, ಅನ್ವರ್ ಮಟಗೇರ, ಶಿವಾಜಿ ಪವಾರ, ಭರತ ಕಟ್ಟಿಮನಿ, ಹುಸೇನಸಾಬ್ ಬಿಚಗತ್ತಿ, ಭಾಷೆಸಾಬ್ ದಫೇದಾರ, ಮಾಬುಸಾಬ್ ಶಿರೋಳ, ಮಕು¤ಮಸಾಬ್ ನಾಯ್ಕರ, ಸದು ನರಗುಂದ, ತಾಲೂಕು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಹಸನಸಾಬ್‌ನವದಿ, ಪ್ರಧಾನ ಕಾರ್ಯದರ್ಶಿ ಗೌಸುಸಾಬ್ ತಾಲೀಮನವರ ಮತ್ತು ಬಿಜೆಪಿ ಕಾರ್ಯಕರ್ತರು, ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.