ಸಪ್ಲೈಯರ್ ಆಗಿದ್ದವನು, ಓನರ್‌ಆದೆ…


Team Udayavani, Jan 7, 2020, 5:01 AM IST

DOSA

ಎಸೆಸ್ಸೆಲ್ಸಿ ಫೇಲಾದ ಮೇಲೆ ಅಪ್ಪನಿಗೆ ನನ್ನ ಬಗೆಗಿನ ತಲೆ ನೋವು ಜಾಸ್ತಿಯಾಯಿತು. ಇವನಿಗೆ ಮದುವೆ ಮಾಡಿಬಿಡೋಣ ಅಂತಲೂ ಯೋಚನೆ ಮಾಡಿದ್ದರು. ಆದರೆ, ಕೂತು ತಿನ್ನುವಷ್ಟು ಆಸ್ತಿ ಇರಲಿಲ್ಲ. ಎಲ್ಲದಕ್ಕೂ ಮದುವೆ ಅನ್ನೋದು ಪರಿಹಾರ ಅಲ್ಲ. ಹೆಣ್ಣು ಕೊಡುವ ಬೀಗರೇ ಅಳಿಯನಿಗೆ ಕೆಲಸ ಕೊಡಿಸಲಿ ಅನ್ನೋದು ಅಪ್ಪನಿಗೆ ಇತ್ತೋ ಏನೋ.. ಸರಿಯಾದ ಉದ್ಯೋಗ ಗಳಿಸುವಿಕೆಯಿಂದ ತಪ್ಪಿಸಿಕೊಳ್ಳಲು ಮದುವೆ ಎಂಬುದು ರಹದಾರಿಯೇ ಆಗಿತ್ತು; ಆ ಕಾಲದಲ್ಲಿ.ಪಾಸ್‌ ಆಗೇ ಆಗುತ್ತೇನೆ ಅಂದುಕೊಂಡಿದ್ದವನಿಗೆ ಫೇಲ್‌ ಎದುರಾಗಿ, ಅಪ್ಪ ನನ್ನನ್ನು ಅಂಚೆ ಕಚೇರಿಗೆ ಬಂದ ಪೋಸ್ಟ್‌ಗಳನ್ನು ಹಂಚಲು, ಅವರ ಬದಲಿ ಸಹಾಯಕನಾಗಿ ಬಳಸಲು ಅಸ್ತ್ರಮಾಡಿಕೊಂಡರು. ತಿಂಗಳಿಗೆ 20ರೂ. ಕೊಡೋರು. ಅದೇ ನನ್ನ ಮೊದಲ ಪ್ರೊಫೆಷನ್‌. ಇದಾದ ನಂತರ ಮಧ್ಯಾಹ್ನದ ಹೊತ್ತು ಹೋಟೆಲ್‌ನಲ್ಲಿ ಸಪ್ಲೆ„ಯರ್‌ ಆದೆ; ಅಪ್ಪನಿಗೆ ಹೇಳದೇ.

ರಾತ್ರಿ ಮನೆಗೆ ಬಂದಾಗ ನಾನಾ ನಮೂನೆಯ ಅನುಮಾನಗಳು ಅವರಲ್ಲಿತ್ತು. ಆದರೂ, ಒಳ್ಳೆ ಉದ್ಯೋಗ ಹಿಡಿಯಬೇಕು ಇಲ್ಲವೇ ಕೂತು ತಿನ್ನುವಷ್ಟು ಹಣ ಮಾಡಿಟ್ಟುಕೊಳ್ಳಬೇಕು. ಇವರಡೇ ನನ್ನ ಕಣ್ಣ ಮುಂದೆ ಇದ್ದ ಗುರಿಗಳು. ಹಾಗಾಗಿ, ಹೋಟೆಲ್‌ಗೆ ಸೇರಿದೆ, ಪ್ರಸ್ಟೀಜ್‌ ಇಷೂÂ ಆಗುತ್ತದೆ ಅಂತ ತಿಳಿದು ಮೆಲ್ಲಗೆ , ಚಾರ್ಟೆಡ್‌ ಅಕೌಂಟೆಂಟ್‌ರ ಹತ್ತಿರ ಕೆಲಸಕ್ಕೆ ಸೇರಿದೆ. ಮನೆಯಲ್ಲಿ ಒಳ್ಳೆ ಕೆಲಸ ಅಂತ ಹೇಳಿದ್ದೆನಾದರೂ, ಅಲ್ಲಿ ಕಸ ಗುಡಿಸುವ, ಕಾಫಿ ತಂದು ಕೊಡುವುದೇ ಮುಖ್ಯ ವೃತ್ತಿಯಾಗಿತ್ತು. ಪಾಪ, ನಮ್ಮ ಬಾಸ್‌ ಬಹಳ ಒಳ್ಳೆಯವ. ನನಗೆ ಮತ್ತೆ 10ನೇತರಗತಿ ಪರೀಕ್ಷೆ ಕಟ್ಟಿಸಿದ. ಊಟದ ಸಮಯ, ಸಂಜೆಯ ಹೊತ್ತು ಓದುತಲಿದ್ದೆ. ಹೇಗೋ ಮಾಡಿ, ಆ ವರ್ಷ ಪಾಸು ಮಾಡಿದೆ. ಇಂಗ್ಲೀಷ್‌ ತಕ್ಕಮಟ್ಟಿಗೆ ಇತ್ತು. ಟ್ಯಾಲಿಗೆ ಕಳುಹಿಸಿದರು. ಸಂಜೆ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡೆ. ಹೀಗೆ ಮಾಡುತ್ತಿದ್ದಾಗ ಅಪ್ಪನ ಪೋಸ್ಟ್‌ ಮನ್‌ ಕೆಲಸ ಮತ್ತೆ ನನ್ನ ಕೈ ಹಿಡಿಯಿತು. ಬಂದ ಕಾಗದ, ಗಿಫ್ಟ್ಗಳನ್ನು ಬಹಳ ನಿಯತ್ತಾಗಿ ವಾರಸುದಾರರಿಗೆ ತಲುಪಿಸುತ್ತಿದ್ದೆ. ಒಂದು ದಿನ ಬೀಟ್‌ ಬದಲಾಯಿತು. ಆ ಬೀಟ್‌ನಲ್ಲಿದ್ದವರು ಆ ಪ್ರದೇಶದ ಯಾರಿಗೂ ಪಾರ್ಸೆಲ್‌ಗ‌ಳನ್ನು ಕೊಡುತ್ತಿರಲಿಲ್ಲವಂತೆ. ಆತ ನನಗೆ ಗೆಳೆಯನೂ ಆಗಿದ್ದರಿಂದ, ಅವನ ಬೀಟ್‌ನಲ್ಲಿ ಕೆಲಸ ಮುಂದುರಿಸುವಾಗಲೇ ಕಂಪ್ಲೇಂಟ್‌ಗಳು ನನ್ನನ್ನೂ ಆವರಿಸಿಕೊಂಡವು. ಪ್ರತಿಷ್ಠಿತ ರಾಜಕೀಯ ವ್ಯಕ್ತಿ ಪ್ರಬಲವಾಗಿ ಕಂಪ್ಲೇಂಟ್‌ ಮಾಡಿದರು. ವಿಚಾರಣೆ ನಡೆಯಿತು. ಅವನ ಗೆಳೆಯನಾಗಿದ್ದರ ತಪ್ಪಿಗೆ ನಾನೂ ಕೆಲಸ ಕಳೆದುಕೊಂಡೆ.

ಮುಂದೇನು? ಬೆಂಗಳೂರೇ ಬೇಡ ಅಂತ ಸೋದರ ಮಾವನ ಊರಿಗೆ ಹೋಗಿ, ಅವರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದೆ. ನಿಯತ್ತಾಗಿದ್ದರೆ ಬದುಕಬಹುದು ಅಂತ ತಿಳಿದದ್ದೇ ಅಲ್ಲಿ.

ಸಪ್ಲೆ„ಯರ್‌, ಮಧ್ಯೆ ಮಧ್ಯೆ ಕ್ಯಾಷಿಯರ್‌ ಆದೆ. ಬಹಳ ನಾಜೂಕಾಗಿ, ಗ್ರಾಹಕರ ಮನಃಸ್ಥಿತಿಗೆ ತಕ್ಕಂತೆ ಸಪ್ಲೆ„ ಮಾಡುವುದನ್ನು, ಪ್ರೀತಿಯಿಂದ ಮಾತನಾಡುವುದನ್ನು ಕಲಿತೆ. ರಾಜ್‌ಕುಮಾರ್‌ರಿಂದ ಪ್ರಭಾವದಿಂದ ವಿಶಿಷ್ಟ ಮ್ಯಾನರಿಸಂ ಕೂಡ ರೂಢಿಯಾಯಿತು. ಇದರಿಂದ, ನನ್ನ ಸಪ್ಲೆ„ಅನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಿತು. ನಾನು ಇದ್ದಾಗ ಗಿರಾಕಿಗಳ ಸಂಖ್ಯೆ ಏರ ತೊಡಗಿತು, ಇಡೀ ಊರಲ್ಲಿ ಚಿರಪರಿಚತನಾದೆ. ಸೋದರಮಾವನವರಿಗೆ ವಯಸ್ಸಾಯಿತು. ಹೋಟೆಲ್‌ ನಡೆಸುವ ಹೊಣೆಗಾರಿಕೆ ನನ್ನ ಮೇಲೆ ಬಿತ್ತು. ಇದನ್ನು ಯಶಸ್ವಿಯಾಗಿ ನಿಭಾಯಿಸಿ ಇವತ್ತು ನಿವೃತ್ತನಾಗಿದ್ದೇನೆ.

ಆದರೆ, ಆವತ್ತು ತೀರ್ಮಾನಿಸಿದಂತೆ ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿದ್ದೇನೆ. ಈಗ ನೆಮ್ಮದಿಯ ಜೀವನ.

-ಅಪ್ಪಿರಾವ್‌, ಕದಿರೇನಹಳ್ಳಿ

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.