ಬಟ್ಟೆ ಬ್ಯಾನರ್, ಕಮಾನುಗಳ ಸ್ಥಾಪನೆ
ಪ್ಲಾಸ್ಟಿಕ್‌ಮುಕ್ತ ಪರ್ಯಾಯ
Team Udayavani, Jan 7, 2020, 5:55 AM IST
ಉಡುಪಿ: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೋಗಲಾಡಿಸುವುದು ಹೇಗೆಂದು ಅದನ್ನು ಉತ್ಪಾದಿಸಲು ಹಸಿರುನಿಶಾನೆ, ಅನುಮತಿ, ಸಬ್ಸಿಡಿ ಒದಗಿಸಿದ ಸರಕಾರವೇ ತರಬೇತಿ, ಸ್ವಚ್ಛತಾ ಅಭಿಯಾನ, ಮರುಬಳಕೆ ಚಿಂತನೆ ಹೀಗೆ ಬಗೆ ಬಗೆಯ ನಿರ್ಮೂಲನ ಯೋಜನೆಗಳನ್ನು ಆಯೋಜಿಸುತ್ತಿದೆ.
ಒಟ್ಟಾರೆ ಉತ್ಪಾದಿಸುವಾಗಲೂ, ನಿರ್ಮೂಲನಗೊಳಿಸುವಾಗಲೂ ಸಾಕಷ್ಟು ಹಣ ಖರ್ಚು ಜನರ ತಲೆಗೇ ಬೀಳುವುದು ಜನರಿಗೇ ಗೊತ್ತಿಲ್ಲ. ಮುಂಬರುವ ಅದಮಾರು ಮಠದ ಪರ್ಯಾಯದಲ್ಲಿ ಅನಿವಾರ್ಯವೆನಿಸಿದ ಪ್ಲಾಸ್ಟಿಕ್‌ಗಳನ್ನು ಬಳಸುವಾಗಲೇ ಹೊರಗಿಡುವ ಪ್ರಯತ್ನ ಮಾಡಲಾಗಿದೆ.
ಪ್ಲಾಸ್ಟಿಕ್ ಅಗ್ರಮಾನ್ಯ ಸ್ಥಾನಗಳಲ್ಲಿ ಅಲಂಕರಿಸುತ್ತಿದ್ದ ಫ್ಲೆಕ್ಸ್ ಬ್ಯಾನರ್, ಸ್ವಾಗತ ಕಮಾನುಗಳು ಅದಮಾರು ಮಠ ಪರ್ಯಾಯದಲ್ಲಿ ಪ್ಲಾಸ್ಟಿಕ್‌ರಹಿತವಾಗಿ, ದೇಸೀತನದಿಂದ ಎದ್ದು ನಿಂತಿವೆ. 10 ದೊಡ್ಡ ಕಮಾನುಗಳು, 22 ಸಣ್ಣ ಕಮಾನುಗಳು ಸೇರಿದಂತೆ 43 ಕಮಾನುಗಳ ರಚನೆಯಾಗಿವೆ. ಉಡುಪಿ ಜೋಡುಕಟ್ಟೆಯಿಂದ ತೆಂಕುಪೇಟೆ ದಾರಿಯಾಗಿ ರಥಬೀದಿಯನ್ನು ಪ್ರವೇ ಶಿಸುವ ದಾರಿಯಲ್ಲಿ ಹಾಕಿದ ಕಮಾನುಗಳಲ್ಲಿ ಅದಮಾರು ಮಠದ ಹಿಂದಿನ 32 ಗುರುಗಳ ಹೆಸರುಗಳನ್ನು ಬರೆದು ಗುರುಸ್ಮರಣೆ ಬರುವಂತೆ ಮಾಡಲಾಗಿದೆ.
ಜೋಡುಕಟ್ಟೆ, ಕಲ್ಪನಾ, ಕಲ್ಸಂಕ, ಅಂಬಾಗಿಲು, ಸಂಸ್ಕೃತ ಕಾಲೇಜು ಸರ್ಕಲ್, ಕಡಿಯಾಳಿ, ಬನ್ನಂಜೆ, ಕಿನ್ನಿಮೂಲ್ಕಿ ಬಳಿ ಪ್ರವೇಶ ತಾಣ, ಅಂಬಲಪಾಡಿ ಜಂಕ್ಷನ್ ಮೊದಲಾದೆಡೆ ದೊಡ್ಡ ಕಮಾನುಗಳು ನಿಂತಿವೆ. ನಗರದ ವಿವಿಧ ಪ್ರದೇಶಗಳಲ್ಲಿ ಸಣ್ಣ ಕಮಾನುಗಳನ್ನು ರಚಿಸಲಾಗಿದೆ.
ಉಡುಪಿ ರಥಬೀದಿಯಿಂದ ಜೋಡು ಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಅಳವಡಿ ಸಲಾಗುತ್ತದೆ. ಅದರೊಳಗೆ ಬಲುºಗಳು ಇರುತ್ತವೆ. ಇದು ಪ್ರಾಚೀನತೆಯನ್ನು ನೆನಪಿಗೆ ಬರುವಂತೆ ಮಾಡದಿರದು. 100 ದೊಡ್ಡ ಬ್ಯಾನರ್‌ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳದವರೆಗೆ ಕಟ್ಟಲಾಗಿದೆ. ಕಮಾನುಗಳ ಸುತ್ತ ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಣ್ಣದ ಹೊದಿಕೆಯನ್ನು ಹೊದಿಸಲಾಗುತ್ತಿತ್ತು. ಈ ಸ್ಥಾನದಲ್ಲಿ ಈಗ ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಎದ್ದು ಕಾಣುತ್ತಿದೆ.
ಶ್ರೀಅದಮಾರು ಮಠದ ಪರಂಪರೆಯಲ್ಲಿ ಪ್ರಸ್ತುತ ಪೀಠಾಧಿಪತಿಗಳು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು. ಇವರು 32ನೆಯವರು. ಕಿರಿಯ ಪೀಠಾಧೀಶರು ಶ್ರೀಈಶಪ್ರಿಯತೀರ್ಥ ಶ್ರೀಪಾದರು. ಇವರು 33ನೆಯವರು. ಜ. 8ರಂದು ಪರ್ಯಾಯ ಸಂಚಾರವನ್ನು ಮುಗಿಸಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪುರಪ್ರವೇಶ ಮಾಡಲಿದ್ದಾರೆ. ಈ ಸಂದರ್ಭ ಪ್ಲಾಸ್ಟಿಕ್‌ರಹಿತವಾಗಿ ನಗರ ಅಲಂಕರಣಗಳನ್ನು ಮಾಡಲಾಗಿದೆ.
ಅಂತಿಮ ಹಂತದಲ್ಲಿ
ಪ್ಲಾಸ್ಟಿಕ್‌ರಹಿತವಾಗಿ ಕಮಾನುಗಳು, ಬ್ಯಾನರ್‌ಗಳನ್ನು ಅಳವಡಿಸಲು ಪ್ರಯತ್ನಿಸಲಾಗಿದೆ. ಇವುಗಳ ಕೆಲಸ ಅಂತಿಮ ಹಂತದಲ್ಲಿದೆ.
-ಗೋವಿಂದರಾಜ್, ಶ್ರೀಕೃಷ್ಣ ಸೇವಾ ಬಳಗದ ಸಕ್ರಿಯ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.