ನಾಳೆ ಭಾರತ ಬಂದ್! ಕೇಂದ್ರದ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ
Team Udayavani, Jan 7, 2020, 7:15 AM IST
ಹೊಸದಿಲ್ಲಿ/ಬೆಂಗಳೂರು: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಬುಧವಾರ “ಭಾರತ ಬಂದ್’ಗೆ ಕರೆ ನೀಡಿದ್ದು, ಬ್ಯಾಂಕಿಂಗ್ ಸಹಿತ ಕೆಲವು ಸೇವೆಗಳಿಗೆ ಅಡಚಣೆಯಾಗುವ ಸಂಭವವಿದೆ. ರಾಜ್ಯದಲ್ಲೂ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಷ್ಕರದ ದಿನ ರಾಜ್ಯದಲ್ಲಿ ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಮಳಿಗೆ, ಆ್ಯಂಬುಲೆನ್ಸ್ ಸೇವೆ ಗಳನ್ನು ಹೊರತುಪಡಿಸಿ ಉತ್ಪಾ ದನ ವಿಭಾಗ, ಅಸಂಘಟಿತ ಕಾರ್ಮಿಕ ವಲಯಗಳ ಸೇವೆಗಳಲ್ಲಿ ವ್ಯತ್ಯಯ ವಾಗುವ ಸಾಧ್ಯತೆಯಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇವೆ ಯಲ್ಲಿ ಯಾವುದೇ ವ್ಯತ್ಯಯ ವಾಗುವುದಿಲ್ಲ. ಒಂದು ವೇಳೆ ಸಿಬಂದಿ ಹೋರಾಟದಲ್ಲಿ ಪಾಲ್ಗೊಂಡರೆ ಇಲಾಖಾ ಕ್ರಮ ಜರಗಿಸಲಾಗುವುದು ಎಂದು ಸಂಸ್ಥೆ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಐಟಿಯು ರಾಜ್ಯ ಮುಖ್ಯಸ್ಥೆ ವರಲಕ್ಷಿ$¾à, ನಾಲ್ಕು ತಿಂಗಳ ಹಿಂದೆಯೆ ಹೋರಾಟದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗಿತ್ತು. ಆದರೆ ಈಗ ನಾನಾ ಮಾರ್ಗಗಳ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಮಧ್ಯೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಮೂಹಿಕ ಮುಷ್ಕರ ನಡೆಸುತ್ತೇವೆ ಎಂದು ವರಲಕ್ಷ್ಮೀ ತಿಳಿಸಿದ್ದಾರೆ.
ರ್ಯಾಲಿಗೆ ಅನುಮತಿ ಇಲ್ಲ
ಬೆಂಗಳೂರು ನಗರದಲ್ಲಿ ಭಾರೀ ಸಂಚಾರ ಸಮಸ್ಯೆ ಇರುವುದರಿಂದ ಜ.8ರಂದು ಕಾರ್ಮಿಕ ಸಂಘಟನೆ ಗಳು ಹಮ್ಮಿಕೊಂಡಿರುವ ಬಂದ್ ಹಿನ್ನೆಲೆ ಯಲ್ಲಿ ಮೆರವಣಿಗೆ ನಡೆ ಸಲು ಅವಕಾಶ ನೀಡಿಲ್ಲ. ಒಂದು ವೇಳೆ ಮೆರವಣಿಗೆ ನಡೆದರೆ ಆಯೋಜಕರ ಮೇಲೆ ಸಿಆರ್‌ಪಿಸಿ 107 ಅಡಿ ಪ್ರಕರಣ ದಾಖಲಿಸ ಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೇವೆಗೆ ಅಡ್ಡಿ
ಮುಷ್ಕರಕ್ಕೆ ಬ್ಯಾಂಕಿಂಗ್ ವಲಯದ ಹಲವಾರು ಕಾರ್ಮಿಕ ಸಂಘ ಟನೆಗಳು ಬೆಂಬಲ ನೀಡಿದ್ದು, ಬುಧವಾರ ಸೇವೆಯಲ್ಲಿ ಅಡಚಣೆ ಯಾಗುವ ಸಂಭವವಿದೆ. ಆದರೆ ಆನ್‌ಲೈನ್ ಬ್ಯಾಂಕಿಂಗ್ ಇರಲಿದೆ.
ಬಂದ್‌ಗೆ ಕರೆ ನೀಡಿದ್ದು ಯಾರು?
ಸಿಐಟಿಯು, ಎಐಯುಟಿಸಿ, ಹಿಂದೂ ಮಜ್ದೂರ್ ಸಭಾ, ಸೆಲ್ಫ್ ಎಂಪ್ಲಾಯ್ಡ ವುಮೆನ್ಸ್ ಅಸೋಸಿ ಯೇಶನ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ , ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಬ್ಯಾಂಕ್ ನೌಕರರ ಸಂಘ ಸೇರಿ ರಾಜ್ಯ ಮತ್ತು ಕೇಂದ್ರದ ಸುಮಾರು 40ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಸಹಿತ 60ಕ್ಕೂ ಹೆಚ್ಚು ವಿದ್ಯಾರ್ಥಿ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
ಗ್ರಾಮೀಣ ಭಾರತ ಬಂದ್
ದೇಶದಲ್ಲಿನ ಸುಮಾರು 175 ರೈತ ಮತ್ತು ಕೃಷಿ ಸಂಬಂಧಿತ ಕಾರ್ಮಿಕ ಸಂಘಟನೆಗಳು ಬುಧವಾರವೇ ಗ್ರಾಮೀಣ ಭಾರತ ಬಂದ್‌ಗೆ ಕರೆ ನೀಡಿವೆ. ಇದಕ್ಕೂ ನಮ್ಮ ಬೆಂಬಲವಿದೆ ಎಂದು ಮುಷ್ಕರ ನಡೆಸುತ್ತಿರುವ ಕಾರ್ಮಿಕ ಸಂಘಟನೆ ಗಳು ಹೇಳಿವೆ. ಪ್ರಮುಖವಾಗಿ ಅಖೀಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ಈ ಬಂದ್‌ಗೆ ಕರೆ ನೀಡಿದೆ.
ಏನೆಲ್ಲ ಇರುವುದಿಲ್ಲ?
ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ, ಎಪಿಎಂಸಿ ಮಾರುಕಟ್ಟೆ, ಖಾಸಗಿ ಬಸ್‌ಗಳ ಸೇವೆ, ಕೇಂದ್ರ ಸರಕಾರಿ ಸ್ವಾಮ್ಯದ ಕಚೇರಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸೇವೆಗಳು.
ಏನೆಲ್ಲ ಇರುತ್ತವೆ?
ಆ್ಯಪ್ ಆಧಾರಿತ ಕ್ಯಾಬ್‌ಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಹಾಲು, ಪೇಪರ್, ಆಟೋ ಸೇವೆಗಳು ದೊರೆಯಲಿವೆ. ಸದ್ಯದ ಮಟ್ಟಿಗೆ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.