ಚಿಟ್ಟೆ, ಪತಂಗಗಳ ಮಾಹಿತಿ ಥಟ್‌ ಅಂತ ಲಭ್ಯ

Team Udayavani, Jan 7, 2020, 11:10 AM IST

bng-tdy-1

ಬೆಂಗಳೂರು: ನೀವು ಚಿಟ್ಟೆ ಪ್ರಿಯರೇ, ನಿಮ್ಮ ಸುತ್ತ ಹಾರಾಡುವ ಚಿಟ್ಟೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆ? ಹಾಗಿದ್ದರೆ ಮೊಬೈಲ್‌ನಿಂದ ಒಂದು ಪೋಟೊ ಕ್ಲಿಕ್ಕಿಸಿ ಅಪ್‌ಲೋಡ್‌ ಮಾಡಿದರೆ ಸಾಕು, ಆ ಚಿಟ್ಟೆಯ ಸಂಪೂರ್ಣ ಮಾಹಿತಿ ಕ್ಷಣ ಮಾತ್ರದಲ್ಲಿ ಲಭ್ಯ.

ಇಂತಹದೊಂದು ವಿನೂತನ ಆ್ಯಪ್‌ ಹಾಗೂ ಅಂತರ್ಜಾಲ ತಾಣವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಹಾಗೂ ಸಂರಕ್ಷಣೆ ಅಧ್ಯಯನ ವಿಭಾಗದ ಐಬಿಐಎನ್‌ ಎಂಬ ತಂಡ ಸಿದ್ಧಪಡಿಸಿದೆ. ಈ ಆ್ಯಪ್‌ಗೆ “ಪತಂಗ ಸೂಚಕ’ ಎಂಬ ಹೆಸರನ್ನಿಟ್ಟಿದ್ದು, ಯಾವುದೇ ದೊಡ್ಡ ತಂತ್ರಜ್ಞಾನ ಬಳಸದೇ, ಪರಿಣಿತರ ಹಾಗೂ ಜೈವಿಕ ವಿಜ್ಞಾನಿಗಳ ಸಹಕಾರವಿಲ್ಲದೇ ಕ್ಷಣ ಮಾತ್ರದಲ್ಲಿಯೇ ಚಿಟ್ಟೆ ಹಾಗೂ ಪತಂಗಗಳ ಮಾಹಿತಿ ತಿಳಿಯಬಹುದು.

800 ಚಿಟ್ಟೆಗಳು ಹಾಗೂ 500 ಪತಂಗಗಳ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಈ ಆ್ಯಪ್‌ ಹೊಂದಿದೆ. ಕೃತಕಬುದ್ಧಿಮತ್ತೆ (ಆರ್ಟಿಫೀಶಿಯಲ್‌ ಇಂಟಲಿಜನ್ಸ್‌) ತಂತ್ರಜ್ಞಾನದೊಂದಿಗೆ ಈ ಆ್ಯಪ್‌ ಸಿದ್ಧಪಡಿಸಲಾಗಿದೆ. ಚಿಟ್ಟೆಗಳ ಮಾಹಿತಿಗಾಗಿ ಭಾರತೀಯ ಜೈವಿಕ ಸಂಪನ್ಮೂಲ ಮಾಹಿತಿ ಜಾಲದ (ಐಬಿಐಎನ್‌) ಸಹಕಾರ ಪಡೆಯಲಾಗಿದೆ. ಐಬಿಐಎನ್‌ನಲ್ಲಿ ದೇಶದಾದ್ಯಂತ ಕಳೆದ ಎರಡು ದಶಕಗಳಿಂದಲೂ ಚಿಟ್ಟೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಲಭ್ಯವಿದ್ದು, ಅದರ ದತ್ತಾಂಶ ಸಹಾಯದಿಂದ ಚಿಟ್ಟೆಗಳನ್ನು ಪತ್ತೆ ಮಾಡಲಿದೆ ಈ ಆ್ಯಪ್‌. ತಂತ್ರಾಂಶವು. ಜತೆಗೆ ಅಂತರ್ಜಾಲದಿಂದಲೂ ಸಾಕಷ್ಟು ಮಾಹಿತಿ ಕ್ರೋಡೀಕರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದರು.

ಆ್ಯಪ್‌ ಸಿದ್ಧಪಡಿಸುವಾಗ ಒಂದು ಚಿಟ್ಟೆಯ 50ಕ್ಕೂ ಹೆಚ್ಚು ಫೋಟೊಗಳನ್ನು ಅಳವಡಿಸಿದ್ದು, 1.70 ಲಕ್ಷಕ್ಕಿಂತಲೂ ಹೆಚ್ಚು ಫೋಟೊಗಳ ದತ್ತಾಂಶ ಸಂಗ್ರಹವಿದೆ. ಹೀಗಾಗಿ, ಚಿಟ್ಟೆಯ ಬಣ್ಣ ಬದಲಾಗಿದ್ದರೂ, ರೆಕ್ಕೆ ತುಂಡಾಗಿದ್ದರೂ, ಯಾವುದೇ ಕೋನದಿಂದ ಪೋಟೊ ಹಿಡಿದು ಅಪ್‌ಲೋಡ್‌ ಮಾಡಿದರೂ ಸುಲಭವಾಗಿ ಪತ್ತೆ ಹಚ್ಚಿ ಮಾಹಿತಿ ನೀಡಲಿದೆ. ವೆಬ್‌ ಸೈಟ್‌ ಇಲ್ಲವೇ ಆ್ಯಪ್‌ನಲ್ಲಿ ಚಿಟ್ಟೆ ಅಥವಾ ಪತಂಗದ ಪೋಟೊ ಅಪ್‌ಲೋಡ್‌ ಮಾಡಿದರೆ ಎರಡು ಸೆಕೆಂಡ್‌ ನಲ್ಲಿ ಮಾಹಿತಿ ತಿಳಿಸಲಿದೆ ಎಂದು ತಂಡದ ಸಂಯೋಜಕ ವಿಜ್ಞಾನಿ ಕೆ.ಎನ್‌.ಗಣೇಶಯ್ಯ ತಿಳಿಸಿದರು. ಚಿಟ್ಟೆಗಳ ಕುರಿತು ಸಂಶೋಧನೆ ನಡೆಸುವರಿಗೂ ಈ ಆ್ಯಪ್‌ ಸಹಕಾರಿಯಾಗಲಿದೆ. ಭಾರತದಲ್ಲಿ ಒಟ್ಟು 1600 ಜಾತಿಯ ಚಿಟ್ಟೆಗಳು ಹಾಗೂ 800 ಜಾತಿಯ ಪತಂಗಗಳಿವೆ. ಸದ್ಯ 800 ಚಿಟ್ಟೆಗಳು ಹಾಗೂ 500 ಕೀಟಗಳ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಉಳಿದವುಗಳ ಮಾಹಿತಿ ಸೇರಿಸಲು ತಂಡವು ಮುಂದಾಗಿದೆ.

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.