ಕಾರು ತಯಾರಿಕೆ ಚಟಪಡಿಕೆ ನಡುವೆ ಸಿಮೆಂಟ್ ಕಂಡು ಹಿಡಿದ “ಹೋಂಡಾ” ಎಂಬ ಛಲದಂಕಮಲ್ಲ!


ಮಿಥುನ್ ಪಿಜಿ, Jan 7, 2020, 6:00 PM IST

honda-1

ಕೆಲವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಲೇ ಅದ್ಭುತ ಪ್ರಗತಿಯನ್ನು ಸಾಧಿಸುತ್ತಾರೆ. ಯಶಸ್ವಿ ವ್ಯಕ್ತಿ ಹತ್ತು ಬಾರಿ ವಿಫಲನಾದರೇ ಹನ್ನೊಂದನೇ ಭಾರೀ ಯಶಸ್ಸನ್ನು ಸಾಧಿಸುತ್ತಾನೆ. ಇನ್ನೂ ಕೆಲವರು ಮೂರು-ನಾಲ್ಕು  ಭಾರೀ ಯಶಸ್ಸು ಪಡೆಯಲು ಪ್ರಯತ್ನಿಸಿ ಕೈಚೆಲ್ಲುತ್ತಾರೆ.

ಜಗದ್ವಿಖ್ಯಾತ ಹೋಂಡಾ ಅಟೋಮೊಬೈಲ್ ಸಾಮ್ರಾಜ್ಯದ ಸ್ಥಾಪಕ ಸೋಯಿಚಿರೋ ಹೋಂಡಾ. ಇಂದು ಹೋಂಡಾ ಅಂದರೇ ಸಾಮಾನ್ಯ ಜನರಿಗೂ ಪರಿಚಿತ. ಈ ಕಂಪೆನಿಯ ಕಾರು, ಬೈಕ್ ಎಲ್ಲವೂ ಜನರ ಮನಗೆದ್ದಿದೆ. ಈ ಸಂಸ್ಥೆ ಬೆಳೆಸಲು ಸೋಯಿಚಿರೋ ಪಟ್ಟ ಶ್ರಮ ಅಷ್ಟಿಷ್ಟಲ್ಲ.  ಈತ ಕೆಳಮಧ್ಯಮವರ್ಗದಲ್ಲಿ 1906 ನವೆಂಬರ್ 17 ರಂದು ಜಪಾನ್ ನಲ್ಲಿ ಹುಟ್ಟಿದ.ಈತನಿಗೆ ದಿನಕ್ಕೆ ಎರಡು ಹೊತ್ತು ಊಟ ಮಾತ್ರ ಸಿಗುತ್ತಿತ್ತು. ಆದರೇ ಚಿಕ್ಕವಯಸ್ಸಿನಿಂದಲೂ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂಬ ತುಡಿತ, ಆದಮ್ಯ ಬಯಕೆ ಹೋಂಡಾಗಿತ್ತು.   ಆ ಕಾರಣದಿಂದಲೇ ಬಾಲ್ಯದಿಂದಲೇ ಯಂತ್ರೋಪಕರಣಗಳಲ್ಲಿ ಆಸಕ್ತಿ ಕಂಡುಕೊಂಡು ಇಂಜಿನಿಯರಿಂಗ್ ಕಾಲೇಜು ಸೇರಿದ. ಆಗಲೇ  ವಾಹನಗಳಿಗೆ ಪಿಸ್ಟನ್  ರಿಂಗ್ ಗಳನ್ನು ತಯಾರಿಸುವ ಐಡಿಯಾ ಆತನಿಗೆ ಹೊಳೆಯಿತು. ಕಾಲೇಜಿನ ವರ್ಕ್ ಶಾಫ್ ನಲ್ಲಿ  ಹಗಲು ರಾತ್ರಿ ಶ್ರಮಪಟ್ಟ. ಕೆಲವು ದಿನಗಳು ಅಲ್ಲೇ ನಿದ್ದೆ ಮಾಡಿರುವ ಉದಾಹರಣೆಗಳಿವೆ.

ಒಂದು ಅದ್ಭುತವಾದ ಡಿಸೈನ್ ತಯಾರಿಸಿ ಟಯೋಟ ಕಂಪೆನಿಗೆ ಮಾರುತ್ತೇನೆಂಬ ಬಲವಾದ ನಂಬಿಕೆ ಆತನಿಗಿತ್ತು. ಆಗಲೇ ಆತನ ವಯಸ್ಸು 20 ಆಗಿದ್ದರಿಂದ ಮದುವೆಯೂ  ನಡೆದುಹೋಯಿತು. ಪಿಸ್ಟನ್ ರಿಂಗ್  ತಯಾರಿಕೆಗೆ ಹಣದ ಕೊರತೆ ಎದುರಾದಾಗ ಹೆಂಡತಿಯ ಒಡವೆಯನ್ನು ಅಡವಿಟ್ಟ. ಹಲವು ಅಡೆತಡೆಗಳ ನಂತರ ಕೊನೆಗೂ ಅದನ್ನು ಸಿದ್ದಮಾಡಿ ಟಯೋಟಾ ಕಂಪೆನಿಗೆ ಕೊಂಡೊಯ್ದಾಗ, ಈ ಅದ್ಭುತ ಡಿಸೈನ್  ಅನ್ನು ಟಯೋಟ ಕಂಪೆನಿ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಇಲ್ಲವೆಂದು  ತಿರಸ್ಕರಿಸಿತು. ಹೋಂಡಾ ನಿರಾಸೆಯಿಂದ ತನ್ನ ವರ್ಕ್ ಶಾಪ್ ಗೆ  ಹಿಂದಿರುಗಿದಾಗ ಅಲ್ಲಿದ್ದ ಇತರ ಇಂಜಿನಿಯರ್ ಗಳು ನಿಮಗೆ ಮೊದಲೇ ಹೇಳೆದ್ದೇವು, ಇದೆಲ್ಲಾ ಆಗದ ಮಾತು ಎಂದು ನಗಲಾರಂಭಿಸುತ್ತಾರೆ. ಆದರೇ  ಹೊಂಡಾ ಮಾತ್ರ  ಮಂದಹಾಸ ಬೀರಿದ.

ಛಲಬಿಡದ ಹೋಂಡಾ ಮತ್ತೆ ಹೊಸ ಡಿಸೈನ್ ಒಂದನ್ನು  ತಯಾರಿಸಲು ಮುಂದಾದ. ಸುಮಾರು ಎರಡು ವರ್ಷದ ಪರಿಶ್ರಮದ ನಂತರ ಮತ್ತೊಂದು ಪಿಸ್ಟನ್ ರಿಂಗ್ ತಯಾರಿಸಿ  ಟಯೋಟಾ ಕಂಪೆನಿಯ ಕದತಟ್ಟಿದ. ಈ ಭಾರೀ ಟಯೋಟ ಕಂಪೆನಿ ಆ ಡಿಸೈನ್ ಕಂಡು ಸಂತೋಷಗೊಂಡು ಪಿಸ್ಟನ್ ರಿಂಗ್ ತಯಾರಿಸಲು ಆತನಿಗೆ ಕಾರ್ಖಾನೆಯನ್ನು ಆರಂಭಿಸಲು ಹಣವನ್ನು ಒದಗಿಸಿತು. ಟಯೋಟ ಕಂಪೆನಿಯ ಈ ಪ್ರೋತ್ಸಾಹದಿಂದ ಸಂತುಷ್ಟನಾದ ಹೋಂಡಾ ಫ್ಯಾಕ್ಟರಿಯನ್ನು ಎತ್ತರಕ್ಕೇರಿಸಲು ಮುಂದಾದ. ಈ ಸಮಯದಲ್ಲೆ ಜಪಾನ್ ನ ವಿವಿಧ ನಗರಗಳಿಗೆ ಭೂಕಂಪ ಅಪ್ಪಳಿಸಿತ್ತು. ಹೋಂಡಾ ಕಟ್ಟಿದ್ದ ಕಾರ್ಖಾನೆಯೂ ಧರೆಗುರುಳಿತ್ತು.

ಆತನ ಸಿಬ್ಬಂದಿ ಇದರಿಂದ ತೀವ್ರ ವಿಚಲಿತವಾದರೂ ಹೋಂಡಾ ಮಾತ್ರ ಸಂತಸದಿಂದಲೇ ಆದದ್ದಾಯಿತು ಮತ್ತೆ ಕಟ್ಟೋಣವೆಂದು ಕಾರ್ಖಾನೆ ನಿರ್ಮಾಣ ಕಾರ್ಯ ಆರಂಭಿಸಿದ. ಅದರ ಕೆಲಸಗಳು ಭರದಿಂದ ಸಾಗುತ್ತಿದ್ದವು. ಆದರೇ ಅದು ಪೂರ್ಣವಾಗುವ ಮೊದಲೇ ಜಪಾನ್ ಎರಡನೇ ಮಹಾಯುದ್ದವನ್ನು ಕಂಡಿತ್ತು. ಆ ಸಮಯದಲ್ಲಿ ದೇಶದಾದ್ಯಂತ ಸಿಮೆಂಟ್ ಪೂರೈಕೆ ಸ್ಥಗಿತಗೊಂಡಿತ್ತು. ಆಗಲೇ ಹೋಂಡಾ ಮತ್ತು ಆತನ ತಂಡ ಸಿಮೆಂಟ್  ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿದರು. ಈ ರೀತಿಯಾಗಿ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿದ.

ಆದರೆ ಅದೊಂದು ದಿನ ಅಮೆರಿಕಾ ಪಡೆಗಳು ಜಪಾನ್ ನ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದಾಗ ಹೋಂಡಾ ಕಟ್ಟಿದ ಕಾರ್ಖಾನೆಯೂ ಬಾಂಬ್ ದಾಳಿಗೆ  ತುತ್ತಾಯಿತು.  ಮಾತ್ರವಲ್ಲದೆ ಜಪಾನ್ ನಲ್ಲಿ  ಸ್ಟೀಲ್ ನ ತೀವ್ರ  ಅಭಾವ ಉಂಟಾಯಿತು. ಆಗಲೂ ಹೋಂಡಾ ಕೈಚೆಲ್ಲಲಿಲ್ಲ. ಆ ಸಮಯದಲ್ಲಿ ಅಮೆರಿಕಾ ಯುದ್ಧವಿಮಾನಗಳೆಲ್ಲವೂ ಇಂಧನ ಟ್ಯಾಂಕ್ ಗಳನ್ನು ಹೊತ್ತು ಹಾರುತ್ತಿದ್ದವು. ಈ ಟ್ಯಾಂಕ್ ಗಳಲ್ಲಿನ ಇಂಧನವನ್ನು ಬಳಸಿದ ನಂತರ ಆಗಸದಿಂದ ಅದನ್ನು ಕಳಗೆ ಬಿಸಾಡಲಾಗುತ್ತಿತ್ತು. ಇದರಿಂದ ವಿಮಾನದ ಭಾರ ಕಡಿಮೆಯಾಗುತ್ತಿದ್ದವು. ಈ ರೀತಿ ಅಮೆರಿಕಾ ಯುದ್ಧವಿಮಾನಗಳು ಜಪಾನ್ ನ ತುಂಬೆಲ್ಲಾ ಸ್ಟೀಲ್ ಟ್ಯಾಂಕ್ ಗಳನ್ನು ಎಸೆದುಹೋಗುತ್ತಿದ್ದವು. ಇದನ್ನೆ  ಹೋಂಡಾ ಸಂಗ್ರಹಿಸಿ ಅವುಗಳನ್ನು ಕರಗಿಸಿ ತನ್ನ ಫ್ಯಾಕ್ಟರಿ ನಿರ್ಮಾಣಕ್ಕೆ  ಬಳಸಿಕೊಂಡ. ಈ ಸ್ಟೀಲ್ ಟ್ಯಾಂಕ್ ಗಳನ್ನು ಹೋಂಡಾ ಅಮೆರಿಕಾದ ಅಧ್ಯಕ್ಷ ಟ್ರೂಮನ್ ನ ಕೊಡುಗೆ ಎಂದು ಕರೆದ.

ಆದರೂ ಸಮಸ್ಯೆಗಳ ಸರಮಾಲೆ ನಿಲ್ಲಲಿಲ್ಲ. ಯುದ್ಧ ನಂತರ ಜಪಾನ್ ನಲ್ಲಿ ತೀವ್ರ ಇಂಧನ ಅಭಾವವುಂಟಾಯಿತು. ಇಂಧನಗಳೇ ಇಲ್ಲವೆಂದರೇ ಕಾರುಗಳನ್ನು ಕೊಳ್ಳುವರಾರು ?  ಹೀಗಾಗಿ ಟಯೋಟಾ ಕಂಪೆನಿ ಕಾರು ಉತ್ಪಾದನೆಯನ್ನು ನಿಲ್ಲಿಸಿತು. ಪರಿಣಾಮವಾಗಿ ಹೋಂಡಾಗೆ ಪಿಸ್ಟನ್ ರಿಂಗ್ ಗಳಿಗೆ ಆರ್ಡರ್ ಬರಲಿಲ್ಲ. ಇಂಧನ ಕೊರೆತೆಯಿದ್ದ ಕಾರಣ ಜನಸಾಮಾನ್ಯರು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ ಗಳಲ್ಲಿ ಸಾಗಬೇಕಿತ್ತು. ಇದನ್ನು ಕಂಡ ಹೋಂಡಾ ಸೈಕಲ್ ಗಳಿಗೆ ಇಂಜಿನ್ ಕೂರಿಸಿದರೆ ಹೇಗೆ ಎಂದು ಚಿಂತಿಸಲಾರಂಭಿಸಿದ. ಯಾಕೆಂದರೇ ಸೈಕಲ್  ಇಂಜಿನ್ ಗಳಿಗೆ ಹೆಚ್ಚು ಇಂಧನ ಬೇಕಾಗಿರಲಿಲ್ಲ. ಮಾತ್ರವಲ್ಲದೆ ತನ್ನ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸಿ ಬೈಕ್ ಇಂಜಿನ್ ತಯಾರಿಸಿದ. ಕೆಲವೇ ವರ್ಷಗಳಲ್ಲಿ ಹೋಂಡಾ ಕಂಪೆನಿಯ ಬೈಕ್ ಇಂಜಿನ್ ಗಳು  ಎಷ್ಟು ಪ್ರಖ್ಯಾತವಾದವೆಂದರೇ ಅವುಗಳನ್ನು ಯೂರೋಪ್ ಮತ್ತು ಅಮೆರಿಕಾಕ್ಕೂ ಸರಬರಾಜು ಮಾಡಲಾಯಿತು. ಮುಂದಿನದು ಇತಿಹಾಸ !

1970ರ ವೇಳೆಗೆ ಹೋಂಡಾ ಕಂಪೆನಿ ಚಿಕ್ಕ ಕಾರುಗಳನ್ನು ಉತ್ಪಾದಿಸಲು ಆರಂಭಿಸಿತು. ಅದು ಕೂಡ ಜನಪ್ರಿಯವಾದವು. ಇಂದಿಗೂ ಕೂಡ ಹೊಂಡಾ ಕಂಪೆನಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಆ ಮೂಲಕ  ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂದು ಸೋಯಿಚಿರೋ ಹೋಂಡಾ ತೋರಿಸಿಕೊಟ್ಟನು.

-ಮಿಥುನ್ ಮೊಗೇರ

ಟಾಪ್ ನ್ಯೂಸ್

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2024: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12-bng

Bengaluru: ಬೈಕ್‌ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು

11-fir

Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್‌ ದಾಖಲು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

10-darshan

Renukaswamy case: ದರ್ಶನ್‌ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ

9-kottigehara

Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.