ಉತ್ತಪ್ಪ ಮತ್ತು ಚಟ್ನಿ
Team Udayavani, Jan 8, 2020, 5:18 AM IST
ದೋಸೆ ಹಿಟ್ಟಿನಿಂದ ಮಾಡುವ ರುಚಿಕಟ್ಟಾದ ತಿನಿಸು ಉತ್ತಪ್ಪ. ಬೆಳಗ್ಗಿನ ತಿನಿಸಾಗಿ, ಸಂಜೆಯ ಸ್ನ್ಯಾಕ್ಸ್ ಆಗಿ ಸವಿಯಬಹುದಾದ ಈ ತಿಂಡಿಗೆ ಚಟ್ನಿ ಇದ್ದರೆ ಇನ್ನೂ ರುಚಿ. ಬೇರೆ ಬೇರೆ ಪದಾರ್ಥಗಳನ್ನು ಬಳಸಿ ಅನೇಕ ಬಗೆಗಳಲ್ಲಿ ಉತ್ತಪ್ಪ ತಯಾರಿಸಬಹುದು. ನಾಲ್ಕೈದು ಬಗೆಯ ಉತ್ತಪ್ಪ ಹಾಗೂ ಚಟ್ನಿಯ ರೆಸಿಪಿ ಇಲ್ಲಿದೆ.
1. ಉತ್ತಪ್ಪ
ಬೇಕಾಗುವ ಸಾಮಗ್ರಿ: ಅಕ್ಕಿ- ಒಂದೂವರೆ ಕಪ್, ಉದ್ದಿನ ಬೇಳೆ- 3/4 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.
ಮಾಡುವ ವಿಧಾನ: ಅಕ್ಕಿ ಹಾಗೂ ಬೇಳೆಗಳನ್ನು ಬೇರೆ ಬೇರೆಯಾಗಿ ತೊಳೆದು, ಆರು ಗಂಟೆ ಕಾಲ ನೆನೆಸಿ ಇಡಿ. ನಂತರ ಅಕ್ಕಿಯನ್ನು ತರಿತರಿಯಾಗಿ ರುಬ್ಬಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡೂ ಹಿಟ್ಟನ್ನು ಬೆರೆಸಿ, ಉಪ್ಪು ಸೇರಿಸಿ ಇಡಿ. ಮಾರನೇ ದಿನ, ಕಾವಲಿಗೆ ಎಣ್ಣೆ ಹಚ್ಚಿ, ದೋಸೆಗಿಂತ ಸ್ವಲ್ಪ ದಪ್ಪಗೆ ಹಿಟ್ಟು ಹುಯ್ದರೆ ಉತ್ತಪ್ಪ ರೆಡಿ.
2. ತರಕಾರಿ ಉತ್ತಪ್ಪ
ಮೇಲೆ ತಯಾರಿಸಿದ ಹಿಟ್ಟಿನ ಜೊತೆಗೆ, ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸಿನಕಾಯಿ, ಟೊಮೇಟೊ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹಸಿಮೆಣಸಿಕಾಯಿ ಸೇರಿಸಿದರೆ, ತರಕಾರಿ ಉತ್ತಪ್ಪ ರೆಡಿ.
3. ಪಾಲಕ್ ಹಾಗೂ ಚೀಸ್
ಬೇಯಿಸಿದ ಪಾಲಕ್ ಸೊಪ್ಪನ್ನು ನುಣ್ಣಗೆ ರುಬ್ಬಿ, ಹಿಟ್ಟಿನ ಜೊತೆಗೆ ಸೇರಿಸಿ. ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಚೀಸ್ ಅನ್ನು ಸೇರಿಸಿ, ಕಾವಲಿ ಮೇಲೆ ಹುಯ್ದರೆ ಪಾಲಕ್-ಚೀಸ್ ಉತ್ತಪ್ಪ ರೆಡಿ.
4. ಸ್ಯಾಂಡ್‌ವಿಚ್ ಉತ್ತಪ್ಪ
ಕಾವಲಿಯ ಮೇಲೆ ಉತ್ಪಪ್ಪವನ್ನು ಹುಯ್ದು, ಅದರ ಮೇಲೆ ತೆಂಗಿನಕಾಯಿ ಚಟ್ನಿ ಸವರಿ, ವೃತ್ತಾಕಾರವಾಗಿ ಹೆಚ್ಚಿದ ಸೌತೆಕಾಯಿ, ಟೊಮೇಟೊವನ್ನು ಜೋಡಿಸಿ. ನಂತರ ಇದರ ಮೇಲೆ ಇನ್ನೊಂದು ಉತ್ತಪ್ಪವನ್ನು ಇಟ್ಟು, ಎಣ್ಣೆ ಹಚ್ಚಿ, ಎರಡೂ ಕಡೆ ಬೇಯಿಸಿ, ನಾಲ್ಕು ತುಂಡುಗಳನ್ನಾಗಿ ಮಾಡಿ, ಸಾಸ್/ ಚಟ್ನಿ ಜೊತೆಗೆ ತಿನ್ನಲು ಕೊಡಿ.
5. ಆಲೂ-ಕ್ಯಾರೆಟ್
ಉತ್ತಪ್ಪದ ಹಿಟ್ಟಿಗೆ ಆಲೂಗಡ್ಡೆ, ಕ್ಯಾರೆಟ್, ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಸೇರಿಸಿ. ಸ್ವಲ್ಪ ಚಾಟ್ ಮಸಾಲ ಪುಡಿ, ಶುಂಠಿ ತುಂಡನ್ನು ಬೆರೆಸಿ, ಕಾವಲಿ ಮೇಲೆ ಉತ್ತಪ್ಪ ಎರೆಯಿರಿ.
6. ಚಿರೋಟಿ ರವೆ
ಬೇಕಾಗುವ ಸಾಮಗ್ರಿ: ಚಿರೋಟಿ ರವೆ-1/2 ಕಪ್, ತೆಂಗಿನ ತುರಿ – 1/2 ಕಪ್, ಸಕ್ಕರೆ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲವನ್ನೂ ಒಟ್ಟಿಗೆ ಸೇರಿಸಿ, ಒಂದೆರಡು ಗಂಟೆಗಳ ಕಾಲ ನೀರಲ್ಲಿ ನೆನೆಸಿ. ನಂತರ, ಸ್ವಲ್ಪ ದಪ್ಪಗಿರುವಂತೆ ಉತ್ತಪ್ಪ ಹುಯ್ಯಿರಿ. ಇದನ್ನು ಚಟ್ನಿ ಹಾಗೂ ಸಾಂಬಾರ್ ಜೊತೆ ಸವಿಯಬಹುದು.
1. ಕಡಲೆ ಬೇಳೆ
ಬೇಕಾಗುವ ಸಾಮಗ್ರಿ: ಒಂದು ಹಿಡಿ ಕಡಲೆ ಬೇಳೆ, ಒಂದು ಚಮಚ ಉದ್ದಿನ ಬೇಳೆ, ಸ್ವಲ್ಪ ಎಣ್ಣೆ, 2 ಬ್ಯಾಡಗಿ ಮೆಣಸು, ಹುಣಸೆ ಹಣ್ಣು, ಚಿಕ್ಕ ಬೆಲ್ಲದ ತುಂಡು, ಒಂದು ಕಪ್ ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬಾಣಲೆಯಲ್ಲಿ ಎರಡೂ ಬಗೆಯ ಬೇಳೆಗಳನ್ನು ಹುರಿದು, ಮೆಣಸಿನಕಾಯಿ, ಹುಣಸೆಹಣ್ಣು, ತೆಂಗಿನ ತುರಿ ಹಾಕಿ ರುಬ್ಬಿ. ನಂತರ, ಸಾಸಿವೆ- ಕರಿಬೇವು ಜೊತೆ ಒಗ್ಗರಣೆ ಕೊಡಿ.
2. ತೊಗರಿ ಬೇಳೆ
ಮೇಲಿನಂತೆ ಚಟ್ನಿ ರುಬ್ಬುವ ಮುಂಚೆ, ತೊಗರಿಬೇಳೆ ಹುರಿದು, ಅದರ ಜೊತೆ ಸೇರಿಸಿ. ಈ ಚಟ್ನಿಗೆ ವಿಶಿಷ್ಟ ಬಗೆಯ ಸುವಾಸನೆ ಇರುತ್ತದೆ.
3.ಈರುಳ್ಳಿ
ತೆಂಗಿನ ಚಟ್ನಿ ಜೊತೆಗೆ, ಹುರಿದ ಈರುಳ್ಳಿ ಸೇರಿಸಿ ರುಬ್ಬಿ, ಸಾಸಿವೆ ಒಗ್ಗರಣೆ ಕೊಡಿ.
4. ಹೀರೆ ಕಾಯಿ ಸಿಪ್ಪೆ
ಹುರಿದ ಹೀರೆಕಾಯಿ ಸಿಪ್ಪೆಯನ್ನು ತೆಂಗಿನ ತುರಿ, ಹಸಿಮೆಣಸಿನಕಾಯಿ, ಹುಣಸೆ ಹಣ್ಣಿನ ರಸದ ಜೊತೆ ಸೇರಿಸಿ ರುಬ್ಬಿ, ಸಾಸಿವೆ ಒಗ್ಗರಣೆ ಕೊಡಿ.
-ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.