ಸಂವಿಧಾನದ ಆಶಯಗಳಿಗೆ ಸಿಎಎ ಧಕ್ಕೆ: ಶಿವಸುಂದರ್
Team Udayavani, Jan 7, 2020, 7:21 PM IST
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಉಪ್ಪಿನಂಗಡಿ: ಮತೀಯ ನೆಲೆಗಟ್ಟಿನಲ್ಲಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ದೇಶದ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗಿದೆ. ನ್ಯಾಯಾಲಯ ಅಥವಾ ರಾಷ್ಟ್ರಪತಿಯವರೇ ತಪ್ಪೆಸಗಿದಾಗ ಪ್ರತಿಭಟಿಸುವ ಹಕ್ಕು ದೇಶದ ನಾಗರಿಕರಿಗಿದೆ ಎಂದು ಲೇಖಕ ಶಿವಸುಂದರ್ ಪ್ರತಿಪಾದಿಸಿದರು. ಉಪ್ಪಿನಂಗಡಿಯ ನಾಗರಿಕ ಹಿತರಕ್ಷಣ ವೇದಿಕೆಯ ಆಶ್ರಯದಲ್ಲಿ ಮಂಗಳವಾರ ಸಂಜೆ ಇಂಡಿಯನ್ ಸ್ಕೂಲ್ ಮುಂಭಾಗ ನಡೆದ ಬೃಹತ್ ಪ್ರತಿಭಟನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮುಸ್ಲಿಂ ದೇಶಗಳಿಂದ ಹಿಂಸೆಗೊಳಗಾಗಿ ಅಶ್ರಯ ಬಯಸಿದ ಮುಸ್ಲಿಂಮರೇತರಿಗೆ ಪೌರತ್ವ ನೀಡಿದಂತೆ ಮುಸ್ಲಿಂ ದೇಶದಿಂದ ಹಿಂಸೆಗೊಳಗಾಗಿರುವ ಅಹಮ್ಮದೀಯರಿಗೆ ಏಕೆ ಪೌರತ್ವ ನೀಡುತ್ತಿಲ್ಲ? ಅಯೋಧ್ಯೆ ವಿಚಾರವಾಗಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಗೊಂದಲವಿದೆ ಎಂದರು. ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ದೇಶದ ಎಲ್ಲರೂ ರಕ್ತಗತವಾಗಿ ಭಾರತೀಯರು. ಅವರನ್ನು ಭೀತಿಗೆ ಒಳಪಡಿಸುವುದು ಸರಿಯಲ್ಲ ಎಂದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಉಪ್ಪಿನಂಗಡಿ ಮಾಲಿಕುದ್ದೀನಾರ್ ಮಸೀದಿಯ ಅಧ್ಯಕ್ಷ ಕೆಂಪಿ ಮುಸ್ತಾಫ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಬಾಲನ್, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಹನೀಫ್ ಹುದವಿ, ಯಾಕೂಬ್ ಸಹದಿ, ಸುಧೀರ್ ಕುಮಾರ್ ಮುರೋಳ್ಳಿ, ಇಕ್ಬಾಲ್ ಬೆಳ್ಳಾರೆ, ಇಬ್ರಾಹಿಂ ಖಲೀಲ್ ತಲಪಾಡಿ ಮಾತನಾಡಿದರು.
ಪ್ರತಿಭಟನಕಾರರು ರಾಷ್ಟ್ರಧ್ವಜದೊಂದಿಗೆ ಅಜಾದಿ ಘೋಷಣೆ ಕೂಗುತ್ತಾ ಉಪ್ಪಿನಂಗಡಿ ಗ್ರಾ.ಪಂ. ಮುಂಭಾಗದ ರಸ್ತೆಯುದ್ದಕ್ಕೂ ಕುಳಿತುಕೊಂಡು ಪ್ರತಿಭಟನಾ ಭಾಷಣಗಳನ್ನು ಆಲಿಸಿದರು. ಸಂಘಟಕರಾದ ಜಲೀಲ್ ಮುಕ್ರಿ, ಝಕಾರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.