![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 8, 2020, 10:07 AM IST
“ನೀವು ಒಳ್ಳೆಯದು ಮಾಡಿದರೆ ನಿಮಗೆ ಖಂಡಿತ ಒಳ್ಳೆಯದೇ ಆಗುತ್ತೆ…’ – ಇದು ಸುದೀಪ್ ಹೇಳಿಕೊಂಡಿರುವ ಮಾತು. ಹೌದು, ಸುದೀಪ್ ಹೀಗೆ ಹೇಳ್ಳೋಕೆ ಕಾರಣ, ಸಲ್ಮಾನ್‌ಖಾನ್ ಅವರು ಸುದೀಪ್ ಅವರ ಮನೆಗೆ ಸರ್‌ಪ್ರೈಸ್ ಗಿಫ್ಟ್ನೊಂದಿಗೆ ಬಂದಿದ್ದು. ಅಂದಹಾಗೆ, ಆ ಸರ್‌ಪ್ರೈಸ್ ಗಿಫ್ಟ್ ಬೇರೇನೂ ಅಲ್ಲ, ಬೆಲೆ ಬಾಳುವ ಬಿಎಂಡಬ್ಲ್ಯು ಕಾರು. ಈ ಕುರಿತು ಸ್ವತಃ ಸುದೀಪ್ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದು, ಅವರ ಟ್ವೀಟ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
“ದಬಾಂಗ್ 3′ ಚಿತ್ರದಲ್ಲಿ ಸುದೀಪ್ ಅವರು ಸಲ್ಮಾನ್‌ಖಾನ್ ಜೊತೆ ನಟಿಸಿದ್ದರು. ಸಲ್ಮಾನ್ ಖಾನ್ ಅವರು ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಸಲ್ಮಾನ್‌ಖಾನ್ ಕೂಡ ಹೇಳಿಕೊಂಡಿದ್ದರು. ಅವರ ಸ್ನೇಹ ಕೂಡ ಅಷ್ಟೇ ಗಟ್ಟಿಯಾಗಿದೆ. ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದಿದ್ದರೂ, ಸುದೀಪ್ ಹಾಗು ಸಲ್ಲು ಸ್ನೇಹ ಜೋರಾದ ಸದ್ದು ಮಾಡುತ್ತಿದೆ ಎನ್ನುವುದಕ್ಕೆ ಸುದೀಪ್ ಅವರಿಗೆ ಸಲ್ಲು ಗಿಫ್ಟ್ ಮಾಡಿದ ಬಿಎಂಡಬ್ಲ್ಯು ಕಾರು ಸಾಕ್ಷಿ. ಸುದೀಪ್ ಮನೆಗೆ ಸಲ್ಲು ತಮ್ಮ ಸಹೋದರರಾದ ಅರ್ಬಾಜ್ ಖಾನ್ ಹಾಗು ಸೊಹೈಲ್ ಖಾನ್ ಜೊತೆ ಆಗಮಿಸಿ ಬಿಎಂಡಬ್ಲ್ಯು ಕಾರನ್ನು ಗಿಫ್ಟ್ ಮಾಡಿದ್ದಾರೆ. ಮೂವರು ಸಹೋದರರು ಸುದೀಪ್ ಜೊತೆ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್, “ನೀವು ಒಳ್ಳೆಯದು ಮಾಡಿದರೆ ನಿಮಗೆ ಖಂಡಿತ ಒಳ್ಳೆಯದೆ ಆಗುತ್ತೆ. ನಟ ಸಲ್ಮಾನ್ ಖಾನ್ ಬಿಎಂಡಬ್ಲ್ಯು ಜೊತೆಗೆ ಮನೆಗೆ ಬಂದಿರುವುದು ಈ ಸಾಲನ್ನು ಮತ್ತಷ್ಟು ನಂಬುವಂತೆ ಮಾಡಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಸರ್. ನಿಮ್ಮ ಜೊತೆ ಕೆಲಸ ಮಾಡಿರುವುದು ನನ್ನ ಭಾಗ್ಯ’ ಎಂದು ಬರೆದುಕೊಂಡಿದ್ದಾರೆ ಸುದೀಪ್. ಈ ಹಿಂದೆ “ದಬಾಂಗ್ 3′ ಚಿತ್ರೀಕರಣ ಸಂದರ್ಭದಲ್ಲೂ ಸಲ್ಮಾನ್‌ಖಾನ್ ಅವರು ಸುದೀಪ್‌ಗೆ ಒಂದಷ್ಟು ಟೀ ಶರ್ಟ್ ಗಿಫ್ಟ್ ಕೊಟ್ಟಿದ್ದರು. ಇತ್ತೀಚೆಗೆ ಸಲ್ಮಾನ್‌ಗೆ ಇಷ್ಟವಾದ ಜಾಕೆಟ್ ಕೂಡ ಸುದೀಪ್ ಅವರಿಗೆ ಉಡುಗೊರೆಯಾಗಿಯೇ ನೀಡಿದ್ದರು. ಆ ಜಾಕೆಟ್‌ನಲ್ಲಿ ಸಲ್ಲುಗೆ ಇಷ್ಟವಾದ ಶ್ವಾನದ ಫೋಟೋ ಇದ್ದದ್ದು ವಿಶೇಷ. ಅದನ್ನು ಸುದೀಪ್ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.