ಕೆಕೆಆರ್‌ಡಿಬಿ ಸ್ವಾಯತ್ತತೆ ಕುಂದುತ್ತಿದೆಯೇ?

ಶಾಸಕರನೇ ಅಧ್ಯಕ್ಷರನ್ನಾಗಿಸಲು ಹೊರಟ ಸರ್ಕಾರ ರಾಜ್ಯಪಾಲರು ಅಧ್ಯಕ್ಷರಾಗುವಂತೆ ಹೆಚ್ಚಿದ ಕೂಗು

Team Udayavani, Jan 8, 2020, 10:55 AM IST

8-January-2

ಹುಬ್ಬಳ್ಳಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಮೂಲ ಆಶಯಗಳನ್ನೇ ಮರೆತಂತಿದ್ದು, ಮಂಡಳಿಯ ಸ್ವಾಯತ್ತತೆಗೆ ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಂಡಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿಸುವುದು ಬೇಡ ಎಂಬ ಒತ್ತಾಯ ಒಂದು ಕಡೆಯಾದರೆ, ರಾಜ್ಯಪಾಲರೇ ಇದರ ಅಧ್ಯಕ್ಷರಾಗಲಿ ಎಂಬ ಕೂಗು ಸಹ ಕೇಳಿ ಬಂದಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವೇಗೋತ್ಕರ್ಷಕ್ಕೆ ವಾಹಕವಾಗಲಿ ಎಂಬ ಉದ್ದೇಶದಿಂದ ಆರಂಭಗೊಂಡಿದ್ದ ಹೈಕ ಅಭಿವೃದ್ಧಿ ಮಂಡಳಿ, 2013ರಿಂದ ಹೈಕ ಪ್ರದೇಶ ಅಭಿವೃದ್ಧಿ ಮಂಡಳಿಯಾಗಿ ಸ್ವಾಯತ್ತ ಸ್ಥಾನ ಪಡೆಯಿತಾದರೂ, ನಿರೀಕ್ಷಿತ ಅಭಿವೃದ್ಧಿ ವೇಗ ಕಂಡಿಲ್ಲ. ಇದುವರೆಗೂ ಮಂಡಳಿಯಿಂದ ವೈಜ್ಞಾನಿಕ ಕ್ರಿಯಾ ಯೋಜನೆ ಸಿದ್ಧಗೊಂಡಿಲ್ಲ.

ಕುಂದುತ್ತಿದೆ ಸ್ವಾಯತ್ತತೆ?: ನಾಲ್ಕು ದಶಕಗಳ ಹಿಂದೆಯೇ ಧರಂಸಿಂಗ್‌ ನೇತೃತ್ವದ ಕಮಿಟಿ, ವಿಶೇಷ ಅಭಿವೃದ್ದಿಗೆ ಒತ್ತು ನೀಡಿಕೆ, 10 ವರ್ಷದ ಕಾಲಮಿತಿಯಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವರದಿ ನೀಡಿತ್ತು. ಅನೇಕ ಹೋರಾಟ, ಬೇಡಿಕೆಗಳ ನಂತರದಲ್ಲಿ ಎಸ್‌.ಎಂ.ಕೃಷ್ಣ ಸರ್ಕಾರ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಡಾ| ಡಿ.ಎಂ.ನಂಜುಂಡಪ್ಪ ನೇತೃತ್ವದ ಸಮಿತಿ ರಚಿಸಿತ್ತು. ಎಂಟು ವರ್ಷಗಳ ಅವಧಿಯಲ್ಲಿ ಸಾಮಾನ್ಯ ಅನುದಾನ ಹಾಗೂ ವಿಶೇಷ ಅಭಿವೃದ್ಧಿ ಅನುದಾನದಡಿ ಪ್ರಗತಿಗೆ ಒತ್ತು ನೀಡುವಂತೆ ಸಮಿತಿ ಶಿಫಾರಸು ಮಾಡಿತ್ತು. ಹೈಕ ಅಭಿವೃದ್ಧಿ ಹಾಗೂ ವಿಶೇಷ ಸ್ಥಾನದ ಹೋರಾಟ ಪ್ರತ್ಯೇಕ ರಾಜ್ಯದ ಬೇಡಿಕೆ, ಪ್ರತ್ಯೇಕ ಧ್ವಜಾರೋಹಣ ಮಟ್ಟಕ್ಕೂ ತಲುಪಿತ್ತು.

ಜನರ ಬೇಡಿಕೆ-ಹೋರಾಟ ಹಾಗೂ ರಾಜಕೀಯ ಕಾರಣಗಳಿಂದ 2013ರಲ್ಲಿ ಕೇಂದ್ರ ಸರ್ಕಾರ ಹೈಕ ಭಾಗಕ್ಕೆ 371(ಜೆ)ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿತ್ತು. ಇದರ ಅಡಿಯಲ್ಲಿಯೇ ರಾಜ್ಯ ಸರ್ಕಾರ 2013ರ ನ.6ರಂದು ಹೈಕ ಅಭಿವೃದ್ಧಿ ಮಂಡಳಿಯನ್ನು, ಹೈಕ ಪ್ರದೇಶ ಅಭಿವೃದ್ಧಿ ಮಂಡಳಿಯಾಗಿ ಬದಲಾಯಿಸಿ, ಅದಕ್ಕೆ ಸ್ವಾಯತ್ತ ಸ್ಥಾನ ನೀಡಿತ್ತು. ವಿಶೇಷ ಸ್ಥಾನ ಸೌಲಭ್ಯಗಳ ಅನುಷ್ಠಾನಕ್ಕೆ ಸಚಿವರಾಗಿದ್ದ ಎಚ್‌. ಕೆ.ಪಾಟೀಲ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. 2014ರಲ್ಲಿ ಸ್ವಾಯತ್ತ ಮಂಡಳಿ ಅಧ್ಯಕ್ಷರಾಗಿ ಸಚಿವ ಖಮರುಲ್‌ ಇಸ್ಲಾಂ ನೇಮಕಗೊಂಡಿದ್ದರು.000000 ನಂತರದಲ್ಲಿ ಈ ಸ್ಥಾನವನ್ನು
ಶರಣಪ್ರಕಾಶ ಪಾಟೀಲ, ರಾಜಶೇಖರ ಪಾಟೀಲ ಇನ್ನಿತರರು ನಿರ್ವಹಿಸಿದ್ದರು.

ಮಂಡಳಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿಸಬೇಕೆಂದು
ಕ್ರಮ ಕೈಗೊಳ್ಳಲಾಗಿತ್ತು. ಹೈಕ ಅಭಿವೃದ್ದಿ ಮಂಡಳಿ ಇದ್ದಾಗ ಹೈಕ ಭಾಗದ ಶಾಸಕರು, ಪಕ್ಷದ ಕಾರ್ಯಕರ್ತರು ಸಹ ಅಧ್ಯಕ್ಷರಾಗಿದ್ದು ಇದೆ. ಇದೀಗ ಸಚಿವರ ಬದಲು ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಸರ್ಕಾರದ ಚಿಂತನೆ ವಿವಾದ ಕಿಡಿ ಹೊತ್ತಿಸಿದೆ.

ವೈಜ್ಞಾನಿಕ ಕ್ರಿಯಾ ಯೋಜನೆಯೇ ಇಲ್ಲ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಿ ಸರಿ ಸುಮಾರು ಮೂರು ದಶಕ ಸಮೀಪಿಸುತ್ತಿದ್ದರೂ, ಯಾವ ಕೆಲಸಗಳಾಗಬೇಕು,
ಯಾವ ಭಾಗಕ್ಕೆ ಆದ್ಯತೆ ನೀಡಬೇಕು, ಅನುದಾನ ಹಂಚಿಕೆಗೆ ನಿಯಮಗಳೇನು ಕುರಿತಾಗಿ ವೈಜ್ಞಾನಿಕ ಕ್ರಿಯಾ ಯೋಜನೆಯೇ ಇಲ್ಲವಾಗಿದೆ.

ಅಧಿಕಾರಯುತ ಇಲ್ಲವೆ ಪ್ರಭಾವ ಬೀರಬಹುದಾದ ಶಾಸಕರು ಪತ್ರ ಕೊಟ್ಟ ಕಾಮಗಾರಿಗಳಿಗೆ ಅನುದಾನ ನೀಡುವಂತಾಗಿದೆ. ಹೋಬಳಿಯನ್ನು ಕೇಂದ್ರವಾಗಿಟ್ಟುಕೊಂಡು, ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದರ ಅಧ್ಯಯನ ನಡೆಸಿ ಕಾಲಮಿತಿ ಕ್ರಿಯಾ ಯೋಜನೆ ರೂಪಿಸಬೇಕಾಗಿತ್ತು. ಅಗತ್ಯ ಸಿಬ್ಬಂದಿ, ತಜ್ಞರ ಕೊರತೆ ಇದೆ ಎಂಬ ನೆಪದಲ್ಲಿ ಸರ್ಕಾರ ಇದುವರೆಗೂ ವೈಜ್ಞಾನಿಕ ಕ್ರಿಯಾ ಯೋಜನೆಯೇ ರೂಪಿಸಿಲ್ಲ. ಕ್ರಿಯಾ ಯೋಜನೆಯೇ ಇಲ್ಲವೆಂದರೆ ಮಂಡಳಿ ಅಸ್ತಿತ್ವ ಹಾಗೂ ಸ್ವಾಯತ್ತತೆಯ ಪ್ರಶ್ನೆ ಎದುರಾಗುತ್ತದೆ ಎಂಬುದು ಹೈಕ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ಗಸ್ತಿ ಅನಿಸಿಕೆ.

ಶೇ.50ರಷ್ಟು ವೆಚ್ಚವಾಗುತ್ತಿಲ್ಲ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸರ್ಕಾರಗಳು 1,500 ಕೋಟಿ ರೂ. ಅನುದಾನ ನೀಡಿದ್ದಾಗಿ ಹೇಳುತ್ತವೆ. ಆದರೆ, ಕ್ರಿಯಾ ಯೋಜನೆ ರೂಪುಗೊಳ್ಳುವುದೇ 1,000 ಕೋಟಿ ರೂ. ಗೆ. ಇದರಲ್ಲೂ ಅನುಷ್ಠಾನ ರೂಪ ಪಡೆದುಕೊಳ್ಳುವುದು ಶೇ.50ರಷ್ಟು ಮಾತ್ರ. ಹೀಗಾದರೆ ಈ ಭಾಗದ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ. 371(ಜೆ) ಕಲಂ ಬಂದಿದೆ ಎಂಬುದು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಅದು ಅರ್ಥ ಕಳೆದುಕೊಂಡಿದೆ. ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಸಚಿವ ಸ್ಥಾನ, ಯೋಜನೆ ರೂಪನೆಗೆ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ರಚನೆ ಬೇಡಿಕೆಗಳು ಹಾಗೇ ಉಳಿದಿವೆ. ಹೀಗಾದರೆ ಅಭಿವೃದ್ಧಿ ವೇಗ ಹೆಚ್ಚಲು ಹೇಗೆ ಸಾಧ್ಯ ಎಂಬುದು ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ| ರಝಾಕ್‌ ಉಸ್ತಾದ್‌ ಪ್ರಶ್ನೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮೂಲ ಕಾಯ್ದೆಯಂತೆ ರಾಜ್ಯಪಾಲರು ಅಧ್ಯಕ್ಷರಾಗಲಿ, ಕಾರ್ಯಾಧ್ಯಕ್ಷರನ್ನಾಗಿ ಸಚಿವ ಇಲ್ಲವೇ ಶಾಸಕರನ್ನು ನೇಮಕ ಮಾಡಲಿ. ಕನಿಷ್ಟ ಮೂರು ತಿಂಗಳಿಗೊಮ್ಮೆ ರಾಜ್ಯಪಾಲರು ಪ್ರಗತಿ ಪರಿಶೀಲನೆ ಸಭೆ ನಡೆಸಿದರೆ ಸಚಿವರು, ಶಾಸಕರು, ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳುತ್ತಾರೆ. ಮಂಡಳಿಯ ಸ್ವಾಯತ್ತತೆ ಹಾಗೂ ಗಂಭೀರತೆಗೆ ಹೆಚ್ಚು ಒತ್ತು ಬರುತ್ತದೆ. ಪ್ರತ್ಯೇಕ ಸಚಿವಾಲಯ ಅನುಷ್ಠಾನ ನಿಟ್ಟಿನಲ್ಲಿ ಸಿಎಂ ಬಳಿ ನಿಯೋಗ ತೆರಳಿ ಒತ್ತಾಯ ಮಾಡಲಿದ್ದೇವೆ.
ಲಕ್ಷ್ಮಣ ದಸ್ತಿ,
ಸಂಸ್ಥಾಪಕ ಅಧ್ಯಕ್ಷ, ಹೈಕ ಜನಪರ ಸಂಘರ್ಷ ಸಮಿತಿ

ಕಲ್ಯಾಣ ಕರ್ನಾಟಕ ಎಂದು ಕೇವಲ ಘೋಷಣೆಯಾದರೆ ಸಾಲದು, ಸಂವಿಧಾನಾತ್ಮಕವಾಗಿ ತಿದ್ದುಪಡಿಯೊಂದಿಗೆ ಕಾನೂನಾತ್ಮಕ ಸ್ಥಾನ ಪಡೆಯಬೇಕು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಚಿವರು ಅಧ್ಯಕ್ಷರಾಗುವುದೇ ಸೂಕ್ತ. ಸಂಪುಟದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಸಾಧ್ಯ. ಇದು ಪುನರ್ವಸತಿ ಕೇಂದ್ರವಾಗುವುದು ಬೇಡ. ಈ ಹಿಂದೆ ಅದರ ಅನುಭವ ಈ ಭಾಗದ ಜನರಿಗಾಗಿದೆ. ಶಾಸಕರನ್ನೇ ಅಧ್ಯಕ್ಷರನ್ನಾಗಿಸಲು ಸರ್ಕಾರ ಮುಂದಾದಲ್ಲಿ ಕೋರ್ಟ್‌ ಮೊರೆ ಹೋಗುವುದು ಅನಿವಾರ್ಯವಾಗಲಿದೆ.
ಡಾ| ರಝಾಕ್‌ ಉಸ್ತಾದ,
ಉಪಾಧ್ಯಕ್ಷ, ಹೈಕ ಹೋರಾಟ ಸಮಿತಿ

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.