ಕಡೂರು ಹೈವೆ ಶಾಲಾ ಅಂಗಳದಲ್ಲಿ ಕೃತಕ ತಾರಾಲಯ
ಹೈವೆ ಇಂಗ್ಲಿಷ್ ಶಾಲೆ ಕಾರ್ಯದರ್ಶಿ ಜತನ್‌ಲಾಲ್ ಡಾಗಾ ಮಾಹಿತಿ
Team Udayavani, Jan 8, 2020, 3:46 PM IST
ಕಡೂರು: ಮಕ್ಕಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಬೆಂಗಳೂರಿನ ಕ್ರಿಪ್ಟ ಟೆಕ್ನಾಲಜಿಯಿಂದ ತಾರಾಲಯದ ಬಗ್ಗೆ ಮಾಹಿತಿ ನೀಡುತ್ತಿರುವುದು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಪಟ್ಟಣದ ಹೈವೆ ಇಂಗ್ಲಿಷ್ ಶಾಲೆಯ ಕಾರ್ಯದರ್ಶಿ ಜತನ್ ಲಾಲ್ ಡಾಗಾ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಕ್ರಿಪ್ಟ ಟೆಕ್ನಾಲಜಿ ಸಂಸ್ಥೆಯ ಸಹಕಾರದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಕೃತಕ ಬಾಹ್ಯಾಕಾಶ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ ತಾರಾಲಯಕ್ಕೆ ಅವಕಾಶ ದೊರೆತಿದೆ. ಇದರಿಂದ ದೂರದ ಬೆಂಗಳೂರು, ಮಂಗಳೂರು(ಪಿಲಿಕುಳ)ಮಣಿಪಾಲ್‌ಗೆ ಹೋಗಿ ವೀಕ್ಷಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಮಕ್ಕಳು ಖಗೋಳ ವಿಜ್ಞಾನದ ಬಗ್ಗೆ ಪಠ್ಯದಲ್ಲಿ ಓದಿರುತ್ತಾರೆ. ಆದರೆ, ಖಗೋಳದಲ್ಲಿರುವ ನಕ್ಷತ್ರಗಳು, ಉಪಗ್ರಹ ಉಡಾವಣೆ, ಕಕ್ಷೆ, ಗ್ರಹಗಳು, ಚಂದ್ರಯಾನ, ಆರ್ಮಸ್ಟ್ರಾಂಗ್, ರಾಕೆಟ್ ಉಡಾಯಿಸುವುದು, ಅಂತರಿಕ್ಷದ ಜೊತೆಗೆ ಮನರಂಜನೆಗಾಗಿ ಡೈನೊಸಾರ್ ಲೋಕಕ್ಕೂ ಮಕ್ಕಳನ್ನು ಕರೆದೊಯ್ಯಲಾಯಿತು ಎಂದು ತಿಳಿಸಿದರು.
ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯಾಚರಣೆಗಳನ್ನು ವೀಕ್ಷಿಸಲು ಸಂಚಾರಿ ತಾರಾಲಯ ಸಹಕಾರಿಯಾಗಿದೆ. ವಿಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವ ನಭೋ ಮಂಡಲದ ವಿಸ್ಮಯ ಮತ್ತು ನಿಗೂಢತೆಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾನೆ.
ವಿಜ್ಞಾನದ ಅಚ್ಚರಿಗಳು ತಾರಾ ಮಂಡಲದ ಕೌತುಕಗಳನ್ನು ನೋಡಿ ತಿಳಿದುಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಶಾಲಾ ಅಂಗಳದಲ್ಲಿ ತಾರಾಲಯ ನೆರವಾಗಿದೆ ಎಂದು ಹೇಳಿದರು.
4 ಪ್ರೊಜೆಕ್ಟರ್ ಸಿಸ್ಟಮ್ 30×30 ಸುತ್ತಳತೆ ಹೊಂದಿರುವ, 18 ಅಡಿ ಎತ್ತರ, 360 ಡಿಗ್ರಿಯಲ್ಲಿ ಗುಮ್ಮಟಾಕಾರದಲ್ಲಿದೆ. ಇದರೊಳಗೆ ಬೃಹತ್ ಪರದೆ ಇದ್ದು, ಒಮ್ಮೆಗೆ 70 ಮಕ್ಕಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಕಾಲ್ಪನಿಕ ಖಗೋಳ ಸೃಷ್ಟಿಸಿ ನೈಜ ರೂಪದಲ್ಲಿ ತೋರಿಸಬಹುದು ಎಂಬ ಮಾಹಿತಿಯನ್ನು ಸಂಸ್ಥೆಯ ನಾಯಕ್ ನೀಡಿದರು. ಶಾಲೆಯ ಪ್ರಾಚಾರ್ಯ ವಾಲ್ಟರ್ ಕಾಡೋಜ, ಮಂಜುನಾಥ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.