ಪುನೀತ್ “ಜೇಮ್ಸ್’ಗೆ ತಯಾರಿ ಜೋರು
ಜನವರಿ 19ಕ್ಕೆ ಮುಹೂರ್ತ, 20 ರಿಂದ ಶೂಟಿಂಗ್ ಶುರು
Team Udayavani, Jan 9, 2020, 7:03 AM IST
ಪುನೀತ್ ಅಭಿನಯದ “ಯುವರತ್ನ’ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಇತ್ತ ಅವರ ಹೊಸ ಚಿತ್ರ “ಜೇಮ್ಸ್’ ಚಿತ್ರ ಕೂಡ ಸುದ್ದಿಯಲ್ಲಿದೆ. “ಬಹದ್ದೂರ್’ ಚೇತನ್ಕುಮಾರ್ ನಿರ್ದೇಶನದ “ಜೇಮ್ಸ್’ ಚಿತ್ರಕ್ಕೆ ಜನವರಿ 19ರಂದು ಮುಹೂರ್ತ ನಡೆಯಲಿದೆ. ಈಗಾಗಲೇ ಎಲ್ಲವನ್ನೂ ತಯಾರು ಮಾಡಿಕೊಂಡಿರುವ ನಿರ್ದೇಶಕ ಚೇತನ್ಕುಮಾರ್, ಜ.19 ರಂದು ಮುಹೂರ್ತ ನೆರವೇರಿಸಿ, ಜ.20 ರಿಂದ ಚಿತ್ರೀಕರಣಕ್ಕೆ ಸಜ್ಜಾಗಲಿದ್ದಾರೆ.
ಈ ಕುರಿತು ಹೇಳಿಕೊಳ್ಳುವ ಚೇತನ್ಕುಮಾರ್, “ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ. ಇಲ್ಲಿಯವರೆಗೆ ಪುನೀತ್ ಅವರು ಮಾಡಿದ ಚಿತ್ರಗಳಿಗಿಂತಲೂ ಭಿನ್ನವಾಗಿರುತ್ತೆ. ಪಾತ್ರ ಕೂಡ ಹೊಸ ರೀತಿಯಾಗಿದೆ. ಬಾಡಿಲಾಂಗ್ವೇಜ್ ಕೂಡ ಹೊಸತನದಿಂದ ಕೂಡಿದೆ. “ಜೇಮ್ಸ್’ ಎಂಬ ಶೀರ್ಷಿಕೆಗೆ ತಕ್ಕದ್ದಾದ ಪಾತ್ರವಿದೆ. ಇಲ್ಲಿನ ಮುಖ್ಯ ಆಕರ್ಷಣೆ ಅಂದರೆ, ಅದು ಹೈವೋಲ್ಟೆಜ್ ಆ್ಯಕ್ಷನ್. ಪುನೀತ್ ಸರ್ ಅವರ ವಿಶೇಷ ಸ್ಟಂಟ್ಸ್ ಇಲ್ಲಿರಲಿದೆ.
ಅವರ ಫ್ಯಾನ್ಸ್ಗೆ ವಿಶೇಷತೆಗಳು ತುಂಬಿರಲಿವೆ. ಒಟ್ಟಾರೆ, “ಜೇಮ್ಸ್’ ಪಕ್ಕಾ ಮನರಂಜನಾತ್ಮಕವಾಗಿಯೇ ಮೂಡಿಬರಲಿದೆ’ ಎಂದು ವಿವರ ಕೊಡುತ್ತಾರೆ ಚೇತನ್ಕುಮಾರ್. ಚಿತ್ರದ ನಾಯಕಿಯ ಆಯ್ಕೆ ಕುರಿತಂತೆ ಮಾತುಕತೆ ನಡೆಯುತ್ತಿದೆ. ಚಿತ್ರಕ್ಕೆ ಚರಣ್ರಾಜ್ ಸಂಗೀತವಿದೆ. ಶ್ರೀಶ ಛಾಯಾಗ್ರಹಣವಿದೆ. ರವಿಸಂತೆ ಹಕ್ಲು ಕಲಾನಿರ್ದೇಶನವಿದೆ. ಕಿಶೋರ್ ಪತ್ತಿಕೊಂಡ ಚಿತ್ರ ನಿರ್ಮಿಸುತ್ತಿದ್ದಾರೆ.
ಸದ್ಯಕ್ಕೆ ಪುನೀತ್ ರಾಜಕುಮಾರ್ ಅವರ “ಯುವರತ್ನ’ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. “ರಾಜಕುಮಾರ’ ಬಳಿಕ ಸಂತೋಷ್ ಆನಂದರಾಮ್ ಪುನಃ ಪುನೀತ್ ಅವರಿಗೆ ನಿರ್ದೇಶಿಸುತ್ತಿರುವ ಚಿತ್ರ ಆಗಿರುವುದರಿಂದ, ಸಹಜವಾಗಿಯೇ ಈ ಕಾಂಬಿನೇಷನ್ ಚಿತ್ರದ ಮೇಲೆ ಕುತೂಹಲವಿದೆ. ಈಗಾಗಲೇ “ಯುವರತ್ನ’ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಎಲ್ಲರನ್ನೂ ಆಕರ್ಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.