ಮಾಸಾಶನ ಅವ್ಯವಸ್ಥೆ ಸರಿಪಡಿಸಲು ಆಗ್ರಹ
Team Udayavani, Jan 9, 2020, 3:00 AM IST
ಹುಣಸೂರು: ಅಂಗನವಾಡಿ ಅವ್ಯವಸ್ಥೆ, ಮಸಾಶನ ಹಾಗೂ ಮಳೆಹಾನಿ ಪರಿಹಾರ ವಿತರಣೆ ವಿಳಂಬ ಮತ್ತಿತರ ಸಮಸ್ಯೆಗಳ ಕುರಿತು ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಗಣಪತಿರಾವ್ ಇಂಡೋಲ್ಕರ್, ತಿಮ್ಮನಾಯಕ, 2 ತಿಂಗಳ ಹಿಂದೆ ತಾಲೂಕಿನ ಜಾಬಗೆರೆ ಅಂಗನವಾಡಿಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗುವೊಂದನ್ನು ಕೇಂದ್ರದಲ್ಲೇ ಬಿಟ್ಟು ಬೀಗ ಹಾಕಿದ್ದ ಪ್ರಕರಣದ ನಂತರ ಮುಚ್ಚಿರುವ ಅಂಗನವಾಡಿ ಇನ್ನೂ ತೆರೆದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ.
ಇದರಿಂದ ಮಕ್ಕಳಿಗೆ ಸೌಲಭ್ಯ ಸಿಗದಂತಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಗಿರೀಶ್, ಸ§ಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸೋಣ ಎಂದರು. ಅಧ್ಯಕ್ಷೆ ಪದ್ಮಮ್ಮ ನೇತೃತ್ವದ ಸಮಿತಿ ಜ.13ರಂದು ಗ್ರಾಮಕ್ಕೆ ಭೇಟಿ ನೀಡಿ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮಾಸಾಶನ ಅವ್ಯವಸ್ಥೆ: ತಾಲೂಕಿನಲ್ಲಿ ಮಾಸಾಶನ ಸರಿಯಾಗಿ ತಲುಪದಿರುವ ಬಗ್ಗೆ ಖಜಾನೆ ಮತ್ತು ಅಂಚೆ ಇಲಾಖೆ ಪರಸ್ಪರ ಆರೋಪಗಳನ್ನು ಮಾಡುತ್ತಿದ್ದು, ಫಲಾನುಭವಿಗಳು ಪಿಂಚಣಿ ಸಿಗದೆ ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಸದಸ್ಯ ಗಣಪತಿರಾವ್ ಇಂಡೋಲ್ಕರ್ ಪ್ರಶ್ನೆಗೆ ಖಜಾನಾಧಿಕಾರಿ ರಾಜಣ್ಣ , ತಾಲೂಕಿನಲ್ಲಿ ವಿವಿಧ ಯೋಜನೆಯಡಿ 35 ಸಾವಿರ ಫಲಾನುಭವಿಗಳಿದ್ದು,
ಈ ಪೈಕಿ 31 ಸಾವಿರ ಮಂದಿಗೆ ಆನ್‌ಲೈನ್ ಮೂಲಕ ಅವರ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಉಳಿದ 4 ಸಾವಿರ ಮಂದಿ ಅಂಚೆ ಮೂಲಕ ಬಟಾವಡೆಯಾಗುತ್ತಿದೆ. ನಮ್ಮಲ್ಲಿ ಎಲ್ಲಾ ಫಲಾನುಭವಿಗಳ ಮಾಹಿತಿ ಇಲ್ಲದಿರುವುದರಿಂದ ಸಮಸ್ಯೆಗೆ ಸ್ಪಂದಿಸಲಾಗುತ್ತಿಲ್ಲ. ಪಟ್ಟಿ ನೀಡುವಂತೆ ಕೋರಲಾಗಿದ್ದು, ಬಂದ ನಂತರ ಕಚೇರಿಗೆ ಬರುವ ಫಲಾನುಭವಿಗಳಿಗೆ ನೈಜಸ್ಥಿತಿ ಅರಿಯಲು ಸಾಧ್ಯ ಎಂದರು.
ಅಂಚೆ, ಖಜಾನೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ಬಡವರು ತೊಂದರೆಗೊಳಗಾಗುತ್ತಿದ್ದು, ಶೀಘ್ರವೇ ಶಾಸಕರ ನೇತೃತ್ವದಲ್ಲಿ ಮೂರು ಇಲಾಖಾಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕೆಂಬ ಸಲಹೆ ಮೇರೆಗೆ ಸಭೆ ನಡೆಸಲು ತೀರ್ಮಾನಿಸಿದರು.
ತಾಲೂಕಿನ 28 ಹೈಟೆಕ್ ಅಂಗನವಾಡಿಗಳ ಕಟ್ಟಡ ನಿರ್ಮಾಣಕ್ಕೆ ಮ್ಯಾಚಿಂಗ್‌ಗ್ರಾಂಟ್ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕೆರೆಯೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಆಯ್ಕೆಯಲ್ಲಿ ಲೋಪವಾಗಿದೆ ಎಂಬ ತಿಮ್ಮನಾಯಕರ ಆರೋಪಕ್ಕೆ ಆಯ್ಕೆಗಾಗಿ ಸಮಿತಿ ಇದ್ದು,
ಯಾವುದೇ ಲೋಪವಾಗಿದ್ದಲ್ಲಿ ನಿಗದಿತ ಸಮಯದೊಳಗೆ ತಕರಾರು ಸಲ್ಲಿಸಬಹುದಾಗಿತ್ತು ಎಂದು ಪ್ರಭಾರ ಸಿಡಿಪಿಒ ಕುಮಾರ್ ತಿಳಿಸಿದರು. ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷದ ನಂತರ 600 ರೂ.ನಿಂದ 1000 ರೂ.ಗೆ ಹೆಚ್ಚಿಸಿದ್ದು, ಫಲಾನುಭವಿಗಳು ಮತ್ತೆ ಹೊಸದಾಗಿ ಅರ್ಜಿ ಹಾಕಬೇಕೆಂದು ಕಂದಾಯಇಲಾಖೆ ಅಧಿಕಾರಿ ತಿಳಿಸಿದರು.
70 ಸಾವಿರ ಆಯುಷ್ಮಾನ್ ಕಾರ್ಡ್: ತಾಲೂಕಿನಲ್ಲಿ 70 ಸಾವಿರ ಆಯುಷ್ಮಾನ್ ಕಾರ್ಡ್ ವಿತರಣೆಯಾಗಿದೆ. ಪ್ರತಿ ಗ್ರಾಪಂ ಕೇಂದ್ರಗಳಲ್ಲೂ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಟಿಎಚ್‌ಒ ಡಾ.ಕೀರ್ತಿಕುಮಾರ್ ತಿಳಿಸಿದರು.
ಹಣ ವಸೂಲಿ ದಂಧೆ: ಕಟ್ಟೆಮಳಲವಾಡಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಪರಿತಪಿಸುತ್ತಿದ್ದು, ವೈದ್ಯರ ನೇಮಕಕ್ಕೆ ಕ್ರಮವಾಗಬೇಕೆಂದು ಅಧ್ಯಕ್ಷೆ ಪದ್ಮಮ್ಮ ಒತ್ತಾಯಿಸಿದರೆ, ಬಿಳಿಕೆರೆ ಆಸ್ಪತ್ರೆಯಲ್ಲಿ ಹೆರಿಗೆ ನೆಪದಲ್ಲಿ ಕೆಲ ಸಿಬ್ಬಂದಿ ಹಣ ವಸೂಲಿ ನಡೆಸುತ್ತಿದ್ದಾರೆಂದು ಸದಸ್ಯೆ ರತ್ನಕುಮಾರ್ ದೂರಿದರು. ಈ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ಟಿಎಚ್‌ಒ ಭರವಸೆ ನೀಡಿದರು. ಚರ್ಚೆಯಲ್ಲಿ ಉಪಾಧ್ಯಕ್ಷ ಪ್ರೇಮೇಗೌಡ, ಸದಸ್ಯರಾದ ಕೆಂಗಯ್ಯ, ರಾಜೇಂದ್ರಬಾಯಿ, ಪುಷ್ಪಲತಾ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.
ಬೆಳೆ ಪರಿಹಾರ ಬಂದಿಲ್ಲ: ಹುಣಸೂರು ತಾಲೂಕಿನಲ್ಲಿ ಮಳೆಹಾನಿಯಿಂದ 256 ರೈತರ 1,480 ಎಕರೆ ತೋಟಗಾರಿಕೆ ಬೆಳೆ ನಷ್ಟವಾಗಿದ್ದು, 1,70 ಕೋಟಿ ರೂ. ಬರಬೇಕಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ಮಾಹಿತಿ ನೀಡಿದರು. ಕೆಲ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡಿಕೊಡುವಂತೆ ಸದಸ್ಯರನ್ನು ಕೋರಿದರು.
ಆಸ್ಪತ್ರೆ ಸಿಬ್ಬಂದಿ ಕೊರತೆ: ಹನಗೋಡು ಆಸ್ಪತ್ರೆಗೆ ಲ್ಯಾಬ್‌ಟೆಕ್ನೀಷಿಯನ್ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆ ಇದೆ. ಸ್ಪಂದಿಸಬೇಕೆಂದು ಸದಸ್ಯೆ ರೂಪಾ ತಿಳಿಸಿದರೆ, ರತ್ನಪುರಿ, ಜಾಬಗೆರೆ, ಚಲ್ಲಹಳ್ಳಿಯ ಎಎನ್‌ಎಂ ವಸತಿಗೃಹ ಖಾಲಿ ಇದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸದಸ್ಯ ಪ್ರಭಾಕರ್, ತಿಮ್ಮನಾಯಕ, ಪುಟ್ಟಮ್ಮ ದೂರಿದರು. ಇದಕ್ಕೆ ಉತ್ತರಿಸಿದ ಡಾ| ಕೀರ್ತಿಕುಮಾರ್, ತಾಲೂಕಿನಲ್ಲಿ 72 ಕೇಂದ್ರಗಳ ಪೈಕಿ 28 ಸಬ್ ಸೆಂಟರ್‌ನಲ್ಲಿ ದಾದಿಯರಿಲ್ಲದೆ ಪಾಳು ಬಿದ್ದಿವೆ. ಈ ಬಗ್ಗೆ ಹಿರಿಯ ಅ ಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.