ಅಪಘಾತ ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಇಲಾಖೆ
ಏಕಮುಖ ರಸ್ತೆಯಲ್ಲಿ ವಾಹನಗಳ ಒಟ್ಟಾರೆ ಸಂಚಾರ
Team Udayavani, Jan 8, 2020, 10:13 PM IST
The department needs to take action to increase accidents
ಬೈಂದೂರು: ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ಕಾಲು ಭಾಗ ಬಹುತೇಕ ಪೂರ್ಣಗೊಂಡಿದೆ. ಪ್ರಾಯೋಗಿಕ ಹೆದ್ದಾರಿ ಸಂಚಾರ ಆರಂಭಗೊಂಡಿದೆ. ಆದರೆ ಕರಾವಳಿ ಭಾಗದಲ್ಲಿ ಮೊದಲ ಬಾರಿ ದ್ವೀಪದ ಸಂಚಾರ ಪರಿಚಯವಾದ ಕಾರಣ ಪ್ರತಿ ಊರಿನಲ್ಲೂ ಸ್ಥಳೀಯರು ಏಕಮುಖ ರಸ್ತೆಯಲ್ಲಿ ಎರ್ರಾಬಿರ್ರಿ ಸಂಚಾರ ನಡೆಸುತ್ತ ಇರುವುದರಿಂದ ಅಪಘಾತ ಸಂಖ್ಯೆ ಹೆಚ್ಚಳಿಕೆಗೆ ಕಾರಣವಾಗಿದೆ.
ಜನರು ನಿಯಮ ಪಾಲಿಸಬೇಕು
ಕೆಲವು ವಿಚಾರಗಳಲ್ಲಿ ಇಲಾಖೆ ಹಾಗೂ ವ್ಯವಸ್ಥೆಯ ತಪ್ಪುಗಳಿರುತ್ತದೆ.ಆದರೆ ಇನ್ನು ಕೆಲವು ವಿಷಯದಲ್ಲಿ ಜನರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಭಟ್ಕಳದಿಂದ ಕುಂದಾಪುರ ದವರೆಗೆ ನೀವೆಲ್ಲಾದರೂ ಏಕಮುಖ ರಸ್ತೆಯಲ್ಲಿ ನಿರಾಳವಾಗಿ ಸಂಚರಿಸಬಹುದೆಂದರೆ ನಿಮ್ಮ ಊಹೆ ಖಂಡಿತ ತಪ್ಪಾಗುತ್ತದೆ. ದಾರಿಯುದ್ದಕ್ಕೂ ನೂರೆಂಟು ವಾಹನಗಳು ಎದುರು ಬಂದು ವಾಹನದವರನ್ನು ಕೈ ತೋರಿಸಿ ಹೋಗುವಂತೆ ಪರಿಸ್ಥಿತಿ ಇದೆ.ಆರಂಭದಲ್ಲಿ ಕಂಪೆನಿ ಅಲ್ಲಲ್ಲಿ ರಸ್ತೆ ವಿಭಜಕಗಳನ್ನು ಅಳವಡಿಸಿತ್ತು. ಇದರಿಂದಾಗಿ ಆಯಾಯ ಊರಿನವರು ದ್ವಿಚಕ್ರ ಹಾಗೂ ವಾಹನಗಳನ್ನು ಅಲ್ಲಲ್ಲಿ ನುಸುಳಿಸುತ್ತಿದ್ದರು. ಪ್ರಸ್ತುತ ಎಲ್ಲಾ ವಿಭಜಕಗಳನ್ನು ಬಂದ್ ಮಾಡಲಾಗಿದೆ. ಕೆಲವು ಊರುಗಳಲ್ಲಿ ಒಂದು ಮೀಟರ್ ಅಂತರವನ್ನು ಎರಡೆರಡು ಕಿ.ಮೀ. ಸುತ್ತಿ ಬರಬೇಕಾಗಿದೆ. ಹೀಗಾಗಿ ಸಮಯ ಹಾಗೂ ಧಾವಂತದಿಂದ ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಕೆಲವು ವಾಹನಗಳಲ್ಲಿ ಹೆಡ್‌ಲೈಟ್ ಕೂಡ ಹಾಕುತ್ತಿಲ್ಲ. ಇದರಿಂದ ಬಹುತೇಕ ಜಂಕ್ಷನ್‌ಗಳಲ್ಲಿ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರು ಕೂಡ ರಸ್ತೆ ನಿಯಮ ಪಾಲಿಸಬೇಕಾಗಿದೆ.
ಇಲಾಖೆ ಕ್ರಮಕೈಗೊಳ್ಳಬೇಕು
ಆರಕ್ಷಕ ಇಲಾಖೆ ವಾಹನ ದಾಖಲೆ ಪರಿಶೀಲನೆ ಪ್ರಕರಣ ದಾಖಲಿಸುತ್ತಿದೆ ಇದರ ಜೊತೆಗೆ ಎಕಮುಖ ಸಂಚಾರದ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. ಜನರು ಕೂಡ ಈ ನಿಯಮಗಳಿಗೆ ಅವಲಂಬಿಸುವ ಮೂಲಕ ಅಪಘಾತ ತಡೆಗಟ್ಟಬೇಕು. ಹೆದ್ದಾರಿ ಸಂಚಾರ ಸುಗಮಗೊಳಿಸಬೇಕಾಗಿದೆ.
ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ
ಬೈಂದೂರು ವ್ಯಾಪ್ತಿಯಲ್ಲಿ ಏಕಮುಖ ಸಂಚಾರ ನಿಯಮ ಪಾಲಿಸದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.ಕೆಲವು ಕಡೆ ಇದುವರೆಗೆ ಏಕಮುಖ ಸಂಚಾರ ಆರಂಭಿಸಿಲ್ಲ.ಈಗಾಗಲೇ ಅಪಾಯಕಾರಿ ಜಂಕ್ಷನ್‌ಗಳಲ್ಲಿ ದಾನಿಗಳು ಹಾಗೂ ಇಲಾಖೆ ನೆರವಿನಿಂದ ಬ್ಯಾರಿ ಕೇಡ್ ಅಳವಡಿಸಲಾಗಿದೆ.ಸಾರ್ವಜನಿಕರು ಕೂಡ ರಸ್ತೆ ನಿಯಮ ಪಾಲಿಸಿದಾಗ ಅಪಘಾತ ಸಂಖ್ಯೆ ಇಳಿಮುಖವಾಗುತ್ತದೆ.
-ಸುರೇಶ್ ನಾಯಕ್, ವೃತ್ತ ನಿರೀಕ್ಷಕರು ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.