ಮುಜಾಫರ್ಪುರ ಬಾಲಿಕಾ ಗೃಹದಲ್ಲಿ ಹೆಣ್ಣು ಮಕ್ಕಳ ಹತ್ಯೆ ನಡೆದಿಲ್ಲ
Team Udayavani, Jan 8, 2020, 11:56 PM IST
ಹೊಸದಿಲ್ಲಿ: ಬಿಹಾರದ ಮುಝಾಫರ್ಪುರ್ ಜಿಲ್ಲೆಯ ಬಾಲಕಿಯರ ಗೃಹದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಹತ್ಯೆ ಪ್ರಕರಣಗಳಿಗೆ ಹೊಸ ತಿರುವು ಸಿಕ್ಕಿದೆ. ಇಲ್ಲಿ ಯಾವುದೇ ರೀತಿಯಲ್ಲಿ ಹೆಣ್ಣು ಮಕ್ಕಳ ಹತ್ಯೆ ನಡೆದ ಬಗ್ಗೆ ಸಾಕ್ಷ್ಯಗಳೇ ಇಲ್ಲ ಎಂದು ಸಿಬಿಐ ಬುಧವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಗೃಹದ ಆವರಣದಲ್ಲಿ ಪತ್ತೆ ಯಾಗಿತ್ತು ಎಂದು ಹೇಳಲಾಗಿ ರುವ ಎರಡು ಅಸ್ಥಿಪಂಜರಗಳು ಪುರುಷ ಹಾಗೂ ಮಹಿಳೆ ಯದ್ದಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಪರವಾಗಿ ವಾದಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಪೀಠಕ್ಕೆ ವಿವರಿಸಿದ್ದಾರೆ. ಜತೆಗೆ ಸಿಬಿಐ ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ. ಪ್ರಕರಣದ ತನಿಖೆ ಮಾಡಿದ ಇಬ್ಬರು ಅಧಿಕಾರಿಗಳನ್ನು ಪ್ರಕರಣದ ಹೊಣೆಯಿಂದ ಬಿಡುಗಡೆ ಮಾಡುವಂತೆಯೂ ಸೂಚಿಸಿದೆ.
ಬಾಲಕಿಯರ ಗೃಹದಲ್ಲಿ ಅತ್ಯಾ ಚಾರ ಮತ್ತು ಕೊಲೆ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಅನಂತರದ ದಿನಗಳಲ್ಲಿ ಅತ್ಯಾ ಚಾರ ಕ್ಕೊಳಗಾಗಿ ಹತ್ಯೆಗೀಡಾಗಿ ದ್ದರು ಎಂದು ಹೇಳಲಾಗಿದ್ದ ಬಾಲಕಿಯರು ಜೀವಂತ ವಾಗಿದ್ದರು ಎಂದು ಹೇಳಿದ್ದಾರೆ ಅಟಾರ್ನಿ ಜನರಲ್. ಬಿಹಾರದಲ್ಲಿನ 17 ಬಾಲಿಕಾ ಗೃಹಗಳ ಬಗ್ಗೆ ಸಿಬಿಐ ತನಿಖೆ ನಡೆಸಿದೆ ಮತ್ತು ಈ ಪೈಕಿ 13 ಗೃಹಗಳ ಬಗ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ ಎಂದಿದ್ದಾರೆ ಕೆ.ಕೆ.ವೇಣುಗೋಪಾಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.